Advertisement

ಶಿಕ್ಷಣ ವ್ಯಾಪಾರೀಕರಣ ದುರದೃಷ್ಟಕರ

03:16 PM May 09, 2017 | Team Udayavani |

ಧಾರವಾಡ: ಇಂದು ಶಿಕ್ಷಣ ಹೆಸರು ನಾಮಕರಣಕ್ಕೇನು ಕಾರಣ ವ್ಯಾಪಾರೀಕರಣವಾಗುವುದು ದುರದೃಷ್ಟಕರ. ಸ್ಥಿತಿವಂತರು ಹೆಚ್ಚು ಹಣ ನೀಡಿ ದುಬಾರಿ ಶಾಲೆಗಳಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದರಿಂದ ಆರ್ಥಿಕವಾಗಿ ದುಸ್ಥಿತಿಯಲ್ಲಿರುವ ಮಕ್ಕಳ ಭವಿಷ್ಯವೇನು? ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಎಫ್‌.ಸಿ. ಚೇಗರೆಡ್ಡಿ ಆತಂಕ ವ್ಯಕ್ತಪಡಿಸಿದರು. 

Advertisement

ನಗರದ ಕವಿಸಂನಲ್ಲಿ ಶಿಕ್ಷಣ ಮಂಟಪದ ಆಶ್ರಯದಲ್ಲಿ ಆಯೋಜಿಸಿದ್ದ ಎಸ್‌ಡಿಎಂಸಿ ಸಮನ್ವಯ ಸಮಿತಿಯ 2ನೇ ಹಂತದ ಸಭೆಯಲ್ಲಿ ಅವರು ಮಾತನಾಡಿದರು. ಶಿಕ್ಷಣ ಸರ್ಕಾರದ ಕಾಳಜಿಯಾಗಿ ಉಳಿಯದೆ ಬೆಂಗಳೂರಿನಂತಹ ನಗರದಲ್ಲಿ ಇಂಗ್ಲಿಷ್‌ ಶಾಲೆಗಳು ನಾಯಿ ಕೊಡೆಯಂತೆ ತಲೆ ಎತ್ತುವ ಪರಿಸ್ಥಿತಿ ಬಂದಿದೆ.

ಜಾಗತೀಕರಣದ ಈ ಸಂದರ್ಭದಲ್ಲಿ ಮಕ್ಕಳನ್ನು ಮಾರುಕಟ್ಟೆಯ ಬಳಕೆದಾರರನ್ನಾಗಿ ರೂಪಿಸುತ್ತಿರುವುದು ದುರ್ದೈವದ ಸಂಗತಿ. ಶಿಕ್ಷಣದಲ್ಲಿ ಸಮಾನತೆ ಹಾಗೂ ಗುಣಮಟ್ಟ ಸುಧಾರಣೆಗಾಗಿ ಎಸ್‌ಡಿಎಂಸಿ ಸಮನ್ವಯ ಸಮಿತಿ ಜಾರಿಗೆ ತಂದಿದ್ದು, ಬಿಜಿವಿಎಸ್‌, ಕರ್ನಾಟಕ ರಾಜ್ಯಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ನ ಸಹಯೋಗದಲ್ಲಿ ಪೂರಕ ವಾತಾವರಣ ನಿರ್ಮಿಸುವುದು ಇಂದಿನ ಅಗತ್ಯ ಎಂದರು. 

ಅಧ್ಯಕ್ಷತೆ ವಹಿಸಿದ್ದ ಬಿಜಿವಿಎಸ್‌ ಜಿಲ್ಲಾಧ್ಯಕ್ಷ ಗುರು ತಿಗಡಿ ಮಾತನಾಡಿ, ಸಮನ್ವಯ ಸಮಿತಿಯ ಜೊತೆ ಶೈಕ್ಷಣಿಕ ಸುಧಾರಣೆಗಾಗಿ ಚಿಂತನ-ಮಂಥನ ಹಾಗೂ ನೀರು ಉಳಿಸಿ ಜನಜಾಗೃತಿ ಮತ್ತು ವೈಜ್ಞಾನಿಕ ಚಿಂತನೆ ಮೂಡಿಸುವ ಪ್ರಗತಿಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು. ಶಿಕ್ಷಣ ಸುಧಾರಣೆ ವಾರಸುದಾರರಾದ ನಾವು ಸಮಾನ ಶಿಕ್ಷಣ ನೀತಿ ಜಾರಿಗೆಗೆ ಬದ್ಧತೆ ಹೊಂದಬೇಕು ಎಂದು ಹೇಳಿದರು.

ಬಿಜಿವಿಎಸ್‌ ಜಿಲ್ಲಾ ಕಾರ್ಯದರ್ಶಿ ವೀರಣ್ಣ ಒಡ್ಡೀನ ಮಾತನಾಡಿ, ಎಸ್‌ಡಿಎಂಸಿ ಸಮನ್ವಯ ಸಮಿತಿಯ ಜಿಲ್ಲಾ ಸಮಾವೇಶ ಸಂಘಟಿಸಲಾಗುವುದು. ಜೊತೆಗೆ ಜಿಲ್ಲಾದ್ಯಂತ ಭಾರತ ಜ್ಞಾನ ವಿಜ್ಞಾನ ಸಮಿತಿಯಿಂದ ಎಸ್‌ ಡಿಎಂಸಿಯ ಸಹಕಾರದಲ್ಲಿ ಸರಕಾರಿ ಶಾಲೆಗಳ ಸಬಲೀಕರಣ ಮಾಡಲಾಗುವುದು ಎಂದರು. 

Advertisement

ಕೆ.ಎಂ. ಗೆದಗೇರಿ, ಜಗದೀಶ ಕುರ್ಲಗೇರಿ, ಶಿವರುದ್ರಗೌಡ ಪಾಟೀಲ, ಎನ್‌.ಜಿ. ಕೊಡ್ಲಿ, ಚಂದ್ರು ತಿಗಡಿ, ಎ.ಎ. ಗೆದ್ದಿಕೇರಿ, ಆರ್‌. ಎಸ್‌. ಪಾಟೀಲ, ಅಶೋಕ ಬಳಿಗೇರ ಇದ್ದರು. ಬಿಜಿವಿಎಸ್‌ ಕೋಶಾಧ್ಯಕ್ಷ ಎಲ್‌.ಐ. ಲಕ್ಕಮ್ಮನವರ ಸ್ವಾಗತಿಸಿದರು. ವೈ.ಜಿ. ಭಗವತಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next