Advertisement

1ರಿಂದ 12ರವರೆಗೆ ಒಂದೇ ಕ್ಯಾಂಪಸ್‌ನಲ್ಲಿ  ಶಿಕ್ಷಣಕ್ಕೆ ಚಿಂತನೆ

03:45 AM Jan 22, 2017 | Team Udayavani |

ಹುಬ್ಬಳ್ಳಿ: ಮಧ್ಯದಲ್ಲಿ ಶಾಲೆ ಬಿಡುವುದನ್ನು ತಡೆಯಲು ಹಾಗೂ ಗುಣಮಟ್ಟದ ಶಿಕ್ಷಣ ನೀಡುವುದನ್ನು ಖಚಿತಪಡಿಸಲು 1 ನೇ ತರಗತಿಯಿಂದ 12ನೇ ತರಗತಿಯವರೆಗೆ ಒಂದೇ ಕ್ಯಾಂಪಸ್‌ನಲ್ಲಿ ಶಿಕ್ಷಣ ನೀಡಲು ಚಿಂತನೆ ನಡೆದಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್‌ ಸೇತ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ 1 ರಿಂದ 7ನೇ ತರಗತಿವರೆಗೆ ಪ್ರಾಥಮಿಕ ಹಾಗೂ 8 ರಿಂದ 10 ತರತಿವರೆಗೆ ಪ್ರೌಢಶಾಲೆ ಮತ್ತು 11-12 ಈ
ರೀತಿ ಶಾಲೆಗಳಿದ್ದು, ವಿದ್ಯಾರ್ಥಿಗಳು ಮಧ್ಯದಲ್ಲಿ ವಿದ್ಯಾಭ್ಯಾಸ ಬಿಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಆದ್ದರಿಂದ
ಮಕ್ಕಳನ್ನು ಉಳಿಸಿಕೊಳ್ಳುವುದು ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ದೃಷ್ಟಿಯಿಂದ ಒಂದೇ ಕ್ಯಾಂಪಸ್‌ನಲ್ಲಿ ಶಿಕ್ಷಣ ನೀಡುವುದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

ಆರ್‌ಟಿಇ ವಿಸ್ತರಣೆ: ಆರ್‌ಟಿಇನಲ್ಲಿ ತಾಂತ್ರಿಕ ತೊಂದರೆಗಳಿದ್ದು ಈ ಕುರಿತು ಪ್ರವೇಶ ಪಡೆಯಲು ಇಚ್ಚಿಸುವವರಿಗೆ
ಆದ್ಯತೆ ಮೇರೆಗೆ ನೆರೆಯ ವಾಡ್‌ìಗಳಲ್ಲೂ ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ನಾವೇ ಪುಸ್ತಕ ನೀಡುತ್ತೇವೆ. ಸಿಬಿಎಸ್‌ಸಿ ವಿದ್ಯಾರ್ಥಿಗಳ ಪ್ರವೇಶ ಶುಲ್ಕವನ್ನು ಮರುಪಾವತಿ ಮಾಡಲಾಗುವುದು ಎಂದರು.

ಪಠ್ಯಪುಸ್ತಕ ಪರಿಷ್ಕರಣೆಗೆ ಸಿದ್ಧ: ಹಲವು ಸಂಘ-ಸಂಸ್ಥೆಗಳು ಪಾಲಕರು ಸೇರಿ ಎಲ್ಲರೊಂದಿಗೆ ಚರ್ಚಿಸಿದ ನಂತರವೇ
ಪಠ್ಯಪುಸ್ತಕ ಪರಿಷ್ಕರಣೆಗೆ ಮುಂದಾಗಿದ್ದು, ಈ ಕುರಿತು ಬಿಜೆಪಿಯ ವಿರೋಧಕ್ಕೆ ಅರ್ಥವಿಲ್ಲ. ಈಗಾಗಲೇ 1ರಿಂದ 8ನೇ
ತರಗತಿವರೆಗೆ ಎಲ್ಲವೂ ಸಿದ್ಧಗೊಂಡಿದ್ದು ಮುದ್ರಣವೊಂದೇ ಬಾಕಿ ಉಳಿದಿದೆ. ಕಳೆದ ವರ್ಷದ ಪ್ರಶ್ನೆ ಪತ್ರಿಕೆ ಬಹಿರಂಗ
ಘಟನೆಯಿಂದ ಎಚ್ಚೆತ್ತುಕೊಂಡಿದ್ದು, ಇಲಾಖೆಯ ಕಾರ್ಯದರ್ಶಿ ವಿಜಯ ಭಾಸ್ಕರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಸ್ವಲ್ಪ ವಿನಾಯಿತಿ ನೀಡಲಾಗಿದ್ದು ವಿದ್ಯಾರ್ಥಿ ಗಳಿಗೆ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next