Advertisement

ಕೋವಿಡ್‌ ಸೋಂಕಿನಿಂದ ಮೃತಪಟ್ಟವರ ಮಕ್ಕಳಿಗೆ ಉನತ್ನ ಶಿಕ್ಷಣ

01:55 PM Aug 09, 2021 | Team Udayavani |

ರಾಮನಗರ: ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿನಿಂದ ಮೃತಪಟ್ಟವರ ಮಕ್ಕಳಿಗೆ ಎಂಜಿನಿಯರಿಂಗ್‌ ಪದವಿ ಶಿಕ್ಷಣವನ್ನು ಉಚಿತವಾಗಿ ನೀಡುವುದಾಗಿ ಚನ್ನಪಟ್ಟಣ ಬಳಿಯ ಸಂಪೂರ್ಣ ಸಮೂಹ ವಿದ್ಯಾ ಸಂಸ್ಥೆಗಳ ತಾಂತ್ರಿಕ ಶಿಕ್ಷಣ ವಿಭಾಗದ ಪ್ರಾಂಶುಪಾಲ ಭೈರೇಗೌಡ ತಿಳಿಸಿದರು.

Advertisement

ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪೋಷಕರನ್ನು ಕಳೆದುಕೊಂಡ ಬಡ ಕುಟುಂಬಗಳ 25 ಮಂದಿ ಮಕ್ಕಳಿಗೆ ನಾಲ್ಕೂ ವರ್ಷಗಳ ಕಾಲ ಉಚಿತ ಶಿಕ್ಷಣ ನೀಡಲು ತಮ್ಮ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಬಿ. ಎಂ.ಎಸ್‌ ನಾಯ್ಡು ಮತ್ತು ಅವರ ಪತ್ನಿ ಡಾ.ಸಂಪೂರ್ಣ ನಾಯ್ಡು ತೀರ್ಮಾನಿಸಿದ್ದಾರೆ.

ಜಿಲ್ಲೆಯ 25 ಬಡ ಕುಟುಂಬಗಳ ಪ್ರತಿಭಾವಂತ ಮಕ್ಕಳು ಈ ಯೋಜನೆಯ ಉಪಯೋಗ ಪಡೆದುಕೊಳ್ಳಬಹುದು. ಈ ಯೋಜನೆಗೆ ಕಾಲೇಜಿನ ಆಡಳಿತ ಮಂಡಳಿ ಸುಮಾರು1 ಕೋಟಿ ರೂ. ಮೌಲ್ಯದ ಉಚಿತ ಶಿಕ್ಷಣ ನೀಡಿದಂತಾಗುತ್ತದೆ ಎಂದರು.

ಹಾಸ್ಟೆಲ್‌ ವ್ಯವಸ್ಥೆಗೆ ಶುಲ್ಕ: ಎಂಜಿನಿಯರಿಂಗ್‌ ಪದವಿ ಉಚಿತವಾದರೂ ಮಕ್ಕಳು ಕೇವಲ ಡಾ.ವಿ ಶ್ವೇಶ್ವರಯ್ಯ ತಾಂತ್ರಿಕ ವಿವಿ ನಿಗದಿಪಡಿಸುವ ಶುಲ್ಕ ಮತ್ತು ಪರೀಕ್ಷಾ ಶುಲ್ಕವನ್ನು ಭರಿಸಿದರೆ ಸಾಕು. ಕಾಲೇಜಿನ ಹಾಸ್ಟೆಲ್‌ ವ್ಯವಸ್ಥೆಗೆ ವಿದ್ಯಾರ್ಥಿಗಳು ಶುಲ್ಕ ಭರಿಸಬೇಕಾಗುತ್ತದೆ. ಹಾಗೊಮ್ಮೆ ಹಾಸ್ಟೆಲ್‌ ಶುಲ್ಕ ಕಟ್ಟಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಹಿಂದುಳಿದ ವರ್ಗಗಳ ಹಾಸ್ಟೆಲ್‌ ಮುಂತಾದ ಸರ್ಕಾರಿ ಹಾಸ್ಟೆಲ್‌ಗ‌ಳಲ್ಲಿ ದಾಖಲಾತಿಗೆ ಸಹಕಾರ ನೀಡುವುದಾಗಿ ತಿಳಿಸಿದರು.

ಚನ್ನಪಟ್ಟಣದ ಬಳಿ ಸಂಪೂರ್ಣ ಸಮೂಹ ಶಿಕ್ಷಣ ಸಂಸ್ಥೆ ಇದೆ. ಕಾಲೇಜಿನಗೆ ಸೇರಿದ ಒಟ್ಟು ಭೂಮಿ ಸುಮಾರು 100 ಎಕರೆ ಪ್ರದೇಶದ ವಿಸ್ತೀರ್ಣವಿದೆ ಎಂದು ಶೈಕ್ಷಣಿಕವಾಗಿ ತಮ್ಮ ಕಾಲೇಜಿನ ಸಾಧನೆ ಕುರಿತು ಮಾಹಿತಿ ನೀಡಿದರು.

Advertisement

ಜಿಲ್ಲೆಯ ಪ್ರಥಮ ಖಾಸಗಿ ಕೃಷಿ ಕಾಲೇಜು: ಸಂಪೂರ್ಣ ಸಮೂಹ ಸಂಸ್ಥೆಯ ಕೃಷಿ ಪದವಿ ವಿಭಾಗದ ಪ್ರಾಂಶುಪಾಲ ಡಾ. ಶಿವಲಿಂಗೇಗೌಡ
ಮಾತನಾಡಿ, ಕಾಲೇಜಿನಲ್ಲಿ ಬಿಎಸ್ಸಿ ಅಗ್ರಿಕಲ್ಚರ್‌ ಮತ್ತು ಹಾರಿrಕಲ್ಚರ್‌ ತರಗತಿ ಆರಂಭಿಸಲಾಗಿದೆ. ಕೃಷಿ ಕಾಲೇಜು ಮೈಸೂರು ವಿವಿ ವ್ಯಾಪ್ತಿಗೆ ಒಳಪಡಲಿದೆ. ಜಿಲ್ಲೆಯಲ್ಲಿ ಕೃಷಿ ಸಂಬಂಧಿತ ವಿಷಯ ಬೋಧಿಸುವ ಪ್ರಥಮ ಖಾಸಗಿ ಕಾಲೇಜು ತಮ್ಮದಾಗಿದೆ.ಕೊಠಡಿಯೊಳಗಿನ ಶಿಕ್ಷಣದ ಜೊತೆಗೆ ಫೀಲ್ಡ್‌ ಪ್ರಾಕ್ಟಿಕಲ್‌ಗೆ ಒತ್ತು ನೀಡಲಾಗುವುದು. 4ರಿಂದ 6 ತಿಂಗಳ ಕಾಲ ಬಿಎಸ್ಸಿ ಕೃಷಿ ಪದವಿಗೆ ಸೇರುವ ವಿದ್ಯಾ
ರ್ಥಿಗಳು ರೈತರೊಂದಿಗೆ ಇದ್ದು, ಕೃಷಿ ಚಟುವಟಿಕೆಗಳ ಅನುಭವಪಡೆಯಬೇಕಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕ (ಅಡ್ಮಿನ್‌) ಉಮೇಶ್‌, ಡಿಜಿಟಲ್‌ ಮಾರ್ಕೆಟಿಂಗ್‌ ವಿಭಾಗದ ಮುಖ್ಯಸ್ಥ ಸತೀಶ್‌ ಇದ್ದರು

ಬಿಎಸ್ಸಿಕೃಷಿ ಮತ್ತು ತೋಟಗಾರಿಕೆ ಪದವಿ ಶಿಕ್ಷಣದಲ್ಲಿ ಅಧುನಿಕ ತಂತ್ರಜ್ಞಾನದ ಪರಿಣಿತಿ ನೀಡಲಾಗುವುದು. ಸದ್ಯದಲ್ಲೇ ಕೃಷಿ ಕ್ಷೇತ್ರದಲ್ಲಿ ರೋಬೋಟಿಕ್ಸ್‌ ವಿಷಯವನ್ನು ಕಾಲೇಜಿನಲ್ಲಿ ಪರಿಚಯಿಸಲಾಗುವುದು.
– ಡಾ.ಶಿವಲಿಂಗೇಗೌಡ,
ಪ್ರಾಂಶುಪಾಲರು, ಕೃಷಿ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next