Advertisement
ನಗರದ ವಿಜಯನಗರ ಬಡಾವಣೆಯಲ್ಲಿ ನಗರ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ 5ನೇ ಬೀಟ್ ಸಭೆಯನ್ನುದ್ದೇಶಿಸಿ ಮಾತನಾಡಿ, ಹಾದಿಬೀದಿ ಹಾಗೂ ರಸ್ತೆಬದಿಗಳಲ್ಲಿ ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುತ್ತಿರುವ ಕಾರಣದಿಂದಾಗಿ ಆನ್ ಲೈನ್‌ಗಳಲ್ಲಿ ಮೋಸದ ಪ್ರಕರಣಗಳು ಹೆಚ್ಚಾಗುತ್ತಿದೆ. ಮಿಲಿಟರಿ ಅಧಿಕಾರಿಗಳ ಸೋಗಿನಲ್ಲಿ ಹಾಗೂ ಹೊರದೇಶಗಳಿಗೆ ಹೋಗುತ್ತಿದ್ದೇವೆಂಬ ನೆಪಗಳನ್ನು ಹೇಳಿಕೊಂಡು ಬೆಲೆ ಬಾಳುವ ವಸ್ತುಗಳನ್ನು ಮಾರಾಟ ಮಾಡು ವುದಾಗಿ ಹೇಳಿ ನಂಬಿಸಿ ಆನ್‌ಲೈನ್‌ನಲ್ಲಿ ಮೋಸ ಮಾಡುತ್ತಿದ್ದಾರೆ. ಅವರುಗಳಿಗೆ ಮಾರುಹೋಗುತ್ತಿರುವವರಲ್ಲಿ ವಿದ್ಯಾವಂತರೆ ಹೆಚ್ಚಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೊಡೆದಾಟ, ಬಡಿದಾಟ ಹಾಗೂ ರೌಡಿಸಂಗಳಿಗಿಂತಲೂ ಹೆಚ್ಚಾಗಿ ಆನ್‌ಲೈನ್ ಮೋಸದ ಪ್ರಕರಣಗಳೇ ಬೆಳಕಿಗೆ ಬರುತ್ತಿರುವುದು ಬೇಸರದ ಸಂಗತಿ, ಇಂತಹ ಸಂದರ್ಭದಲ್ಲಿ ಯಾರೂ ಸಹ ಅಂಜಿಕೆ ಪಟ್ಟುಕೊಳ್ಳದೆ ಸಮೀಪದ ಪೊಲೀಸ್ ಠಾಣೆ ಅಥವಾ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಬೇಕು, ತಮ್ಮ ನೆರೆಹೊರೆಯಲ್ಲಿ ಸಮಸ್ಯೆಗಳು ಎದುರಾದಾಗ ಅಥವಾ ಸಮಾಜದಲ್ಲಿ ಗಲಾಟೆ, ಗದ್ದಲಗಳು ನಡೆಯುತ್ತಿದ್ದರೆ 112ಗೆ ಕರೆಮಾಡಿ ಮಾಹಿತಿ ನೀಡಿ, ಬೀಟ್ ವ್ಯವಸ್ಥೆಯನ್ನು ಜನಸ್ನೇಹಿ ಪೊಲೀಸ್ ವ್ಯವಸ್ಥೆಗಾಗಿ ಜಾರಿಗೆ ತರಲಾಗಿದೆ ಎಂದರು.
Related Articles
Advertisement
ಪಾರ್ಕ್ ಸಮಸ್ಯೆ : ಸಭೆಯಲ್ಲಿ ಹಾಜರಿದ್ದ ನಾಗರಿಕರು 5ನೇ ಬೀಟ್‌ನಲ್ಲಿ ಉದ್ಯಾನವನಗಳು ಹೆಚ್ಚಾಗಿದ್ದು, ಇಲ್ಲಿ ಅಪ್ರಾಪ್ತ ಯುವಕ ಯುವತಿಯರು ಶಾಲಾ ಕಾಲೇಜುಗಳಿಗೆ ಹೋಗದೆ ವಿನ ಕಾರಣ ಕುಳಿತು ಕಾಲ ಕಳೆಯುತ್ತಾರೆ, ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುವುದನ್ನು ಹಿರಿಯ ನಾಗರಿಕರು ಕಣ್ಣಲ್ಲಿ ನೋಡಲು ಸಾಧ್ಯವಾಗುವುದಿಲ್ಲ, ಯಾರಾದರೂ ಪ್ರಶ್ನೆ ಮಾಡಿದರೆ ನೀವು ಯಾರು ಕೇಳ್ಳೋಕೆ ಅಂತಾರೆ, ಗಾಂಜಾ ಮತ್ತು ಮಾದಕ ವ್ಯಸನಿಗಳು ಸಹ ದುವರ್ತನೆಗಳಲ್ಲಿ ತೊಡಗಿದ್ದಾರೆ. ಕೂಡಲೇ ಸಂಬಂಧಪಟ್ಟವರು ಸೂಕ್ತ ಕ್ರಮವಹಿಸಬೇಕೆಂದು ಮನವಿ ಮಾಡಿದರು.
ಸಾರ್ವಜನಿಕರು ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು, ನಮ್ಮ ನೆರೆಹೊರೆಯ ಅಕ್ರಗಳ ಕುರಿತಾಗಿ ನಾವುಗಳೆ ಮಾಹಿತಿ ನೀಡಬೇಕು, ನಾಗರಿಕರು ಪ್ರತಿಯೊಂದು ಸಮಸ್ಯೆಯನ್ನು ಪೊಲೀಸರಿಗೆ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕು – ಎನ್.ಪಿ.ರಘುನಾಥ್, ವಕೀಲ