Advertisement

ಮಿಸ್‌ ಯೂನಿವರ್ಸ್‌ಇಂಟರ್‌ ನ್ಯಾಷನಲ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾಳೆ ಉಡುಪಿಯ ಬೆಡಗಿ

05:28 PM Apr 12, 2021 | Team Udayavani |

ಉಡುಪಿ: ಕಳೆದ ವರ್ಷ ಮುಂಬಯಿಯಲ್ಲಿ ನಡೆದ ಪ್ರತಿಷ್ಠಿತ ಮಿಸ್‌ ದಿವಾ ಯೂನಿವರ್ಸ್‌ 2020 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದ ಕರಾವಳಿಯ ಎಡ್ಲಿನ್‌ ಕ್ಯಾಸ್ಟೆಲೀನೋ ಅವರು ಮುಂಬರುವ ಮಿಸ್‌ ಯೂನಿವರ್ಸ್‌ ಇಂಟರ್‌ ನ್ಯಾಷನಲ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

Advertisement

ಮುಂದಿನ ತಿಂಗಳು ಯುಎಸ್‌ಎನಲ್ಲಿ ನಡೆಯಲಿರುವ ಮಿಸ್‌ ಯೂನಿವರ್ಸ್‌ ಇಂಟರ್‌ನ್ಯಾಷನಲ್‌ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಇವರು ಮೂಲತಃ ಉಡುಪಿ ಜಿಲ್ಲೆಯ ಉದ್ಯಾವರ ಕೊರಂಗ್ರಪಾಡಿಯವರು. ಪ್ರಸ್ತುತ ಕುವೈಟ್‌ನ ವೈಟ್‌ ಸ್ಟೋರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ಫೋನ್ಸಸ್‌ ಕ್ಯಾಸ್ಟೆಲೀನೋ ಮತ್ತು ಕುವೈತ್‌ನ ಹೆಲ್ಮನ್‌ ವಲ್ಡ್‌ ವೈಡ್‌ ಲಾಜಿಸ್ಟಿಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೀರಾ ಕ್ಯಾಸ್ಟೆಲೀನೋ ದಂಪತಿಗಳ ಪುತ್ರಿ.

Advertisement

Udayavani is now on Telegram. Click here to join our channel and stay updated with the latest news.

Next