ಹಾಂಗ್ ಕಾಂಗ್: ವಿದೇಶಿ ಶಕ್ತಿಗಳೊಂದಿಗೆ ಕೈಜೋಡಿಸಿದ ಆರೋಪದ ಮೇಲೆ ಹಾಂಗ್ ಕಾಂಗ್ ಪೊಲೀಸರು ಗುರುವಾರ (ಜೂನ್ 17) ಪ್ರಜಾಪ್ರಭುತ್ವ ಪರವಾಗಿದ್ದ ಐವರು ಸಂಪಾದಕರು ಮತ್ತು ಕಾರ್ಯನಿರ್ವಾಹಕರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಪ್ರಧಾನಿಯನ್ನು ನೇಮಕ ಮಾಡುವ ಅಧಿಕಾರ ಸುಪ್ರೀಂಕೋರ್ಟ್ ಗೆ ಇಲ್ಲ: ನೇಪಾಳ ಪ್ರಧಾನಿ ಒಲಿ
ಆ್ಯಪಲ್ ಡೈಲಿ ಪತ್ರಿಕೆಯಲ್ಲಿ 30ಕ್ಕೂ ಅಧಿಕ ಲೇಖನಗಳು ಪ್ರಕಟವಾಗಿರುವ ದಾಖಲೆ ತಮ್ಮ ಬಳಿ ಇರುವುದಾಗಿ ಹಾಂಗ್ ಕಾಂಗ್ ಪೊಲೀಸರು ತಿಳಿಸಿದ್ದು, ಚೀನಾ ಮತ್ತು ಹಾಂಗ್ ಕಾಂಗ್ ಮೇಲೆ ನಿರ್ಬಂಧ ವಿಧಿಸುವ ಕುರಿತ ವಿದೇಶಿ ಶಕ್ತಿಗಳ ಸಂಚು ಇದಾಗಿದೆ ಎಂಬುದಾಗಿ ಆರೋಪಿಸಿದೆ.
ಹಾಂಗ್ ಕಾಂಗ್ ಪತ್ರಿಕಾ ಸ್ವಾತಂತ್ರ್ಯಕ್ಕೆ ಹೆಸರಾಗಿದ್ದು, ಇದೇ ಮೊದಲ ಬಾರಿಗೆ ಮಾಧ್ಯಮದ ವಿರುದ್ಧ ಭದ್ರತಾ ಕಾಯ್ದೆಯನ್ನು ಬಳಕೆ ಮಾಡುವ ಮೂಲಕ ಚೀನಾ ತನ್ನ ಪ್ರಾಬಲ್ಯ ಸಾಧಿಸುವತ್ತ ಮತ್ತೊಂದು ಹೆಜ್ಜೆಯನ್ನು ಇಟ್ಟಿರುವುದಾಗಿ ವಿಶ್ಲೇಷಿಸಲಾಗುತ್ತಿದೆ.
ಸಂಪಾದಕರ ಬಂಧನದ ಕ್ರಮದಿಂದ ಮೌನಕ್ಕೆ ಶರಣಾಗಿದ್ದೇವೆ, ಆದರೆ ತಮ್ಮ ವರದಿ ಎಂದಿನಂತೆ ಮುಂದುವರಿಯಲಿದೆ ಎಂದು ಆ್ಯಪಲ್ ಡೈಲಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಪ್ರತಿಕ್ರಿಯೆ ನೀಡಿದೆ. ಹಾಂಗ್ ಕಾಂಗ್ ಸ್ವಾತಂತ್ರ್ಯದ ಬಗ್ಗೆ ಈವರೆಗೂ ಮುಕ್ತವಾಗಿ ಸಮರ್ಥಿಸಿಕೊಂಡು, ಬೆಂಬಲ ನೀಡುತ್ತಿದ್ದದ್ದು ಪತ್ರಿಕೆಗಳು. ಆದರೆ ಇತ್ತೀಚೆಗೆ ಚೀನಾ ಪ್ರಾಬಲ್ಯ ಸಾಧಿಸಲು ಇಂತಹ ಕ್ರಮಗಳಿಗೆ ಮುಂದಾಗಿರುವುದಾಗಿ ದೂರಿದೆ.