ಮೂಡಬಿದಿರೆ: ಭವಿಷ್ಯದ ಉದ್ಯಮಿಗಳನ್ನು ರೂಪಿಸುವ ನಿಟ್ಟಿ ನಲ್ಲಿ ಭಾರತ ಸರಕಾರದ ಅಂಗ ಸಂಸ್ಥೆಯಾದ ಎಂಟರ್‌ಪ್ರನುರ್‌ಶಿಪ್ ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜು ಮಹತ್ವದ ಒಪ್ಪಂದ ಮಾಡಿಕೊಂಡಿವೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ| ಮೋಹನ ಆಳ್ವ ಹಾಗೂ ಇಡಿಐಐ ದಕ್ಷಿಣ ರಾಜ್ಯಗಳ ಪ್ರಾಂತೀಯ ಮುಖ್ಯಸ್ಥ
ರಮಣ್ ಗುಜ್ರಾಲ್ ಸಹಿ ಹಾಕಿದರು.
ಪ್ರಾಂಶುಪಾಲ ಡಾ| ಪೀಟರ್ ಫೆರ್ನಾಂಡಿಸ್, ಯೋಜನೆಯ ಸಂಯೋಜಕರಾದ ಎಲೆಕ್ಟ್ರಾನಿಕ್ಸ್ ವಿಭಾಗದ ಪ್ರಾಧ್ಯಾಪಕ ಡಾ| ದತ್ತಾತ್ರೇಯ, ಮೆಕ್ಯಾನಿಕಲ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಯೋಗೀಶ್ ರಾವ್ ಉಪಸ್ಥಿತರಿದ್ದರು.ಯುವ ವಿದ್ಯಾರ್ಥಿಗಳಿಗೆ ಉದ್ಯಮ ಶೀಲತೆಯ ಮಹತ್ವ ಮತ್ತು ಅಗತ್ಯತೆ, ಉದ್ದಿಮೆ ಪ್ರಾರಂಭಿಸುವ ಬಗ್ಗೆ ತಿಳಿವಳಿಕೆ, ಹೊಸ ಆವಿಷ್ಕಾರಗಳನ್ನೊಳ ಗೊಂಡ ಉದ್ದಿಮೆಗಳನ್ನು ಪ್ರಾರಂಭಿಸಲುಪ್ರೋತ್ಸಾಹ, ತಜ್ಞರ ಮೂಲಕ ತರಬೇತಿ, ಸರಕಾರಗಳು, ಬ್ಯಾಂಕ್‌ಗಳಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡುವುದು, ಸ್ವಂತ ಉದ್ದಿಮೆ ಪ್ರಾರಂಭಿಸು ವುದಕ್ಕೆ ಮೊದಲು ವಿವಿಧ ಕೈಗಾರಿಕೆಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸುವುದು ಮುಖ್ಯ ವಾಗಿ ಇಡಿಐಐ ಹಾಗೂ ಆಳ್ವಾಸ್ ಸಂಸ್ಥೆಯ ಜಂಟಿ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗೆ ಡಿಪ್ಲೊಮಾ ಕೋರ್ಸ್ ಮುಖಾಂತರ ಅಗತ್ಯ ಜ್ಞಾನವನ್ನು ಒದಗಿಸಿ ಭವಿಷ್ಯದ ಉದ್ಯಮಿಗಳನ್ನು ಸಜ್ಜುಗೊಳಿಸುವುದೇ ಮೊದ ಲಾದ ವಿಚಾರಗಳು ಈ ಒಡಂಬಡಿಕೆ ಯಲ್ಲಿವೆ.