Advertisement
ಪಾಸ್ತಾ ಸಲಾಡ್ಬೇಕಾಗುವ ಸಾಮಗ್ರಿಗಳು
· ಪಾಸ್ತಾ- 1 ಕಪ್,
· ಕ್ಯಾರೆಟ್‌ತುರಿ- ಅರ್ಧಕಪ್,
· ಈರುಳ್ಳಿ- 1,
· ಕ್ಯಾಪ್ಸಿಕಮ್ – ಅರ್ಧ,
· ಟೊಮೇಟೊ- 1,
· ಈರುಳ್ಳಿ, ಮಯೊನೈಸ್-5 ಚಮಚ,
· ಸಬ್ಬಸಿಗೆ ಸೊಪ್ಪು – 1ಕಪ್,
· ರುಚಿಗೆ ಉಪ್ಪು, ಎಣ್ಣೆ- 2 ಚಮಚ,
· ಕಾಳುಮೆಣಸಿನ ಪುಡಿ- ಅರ್ಧ ಚಮಚ,
· ಲಿಂಬೆ ಹೋಳು -1.
ಒಂದು ಬಾಣಲೆಯಲ್ಲಿ 5 ಲೋಟ ನೀರು, 2 ಚಮಚ ಎಣ್ಣೆ, ಸ್ವಲ್ಪ ಉಪ್ಪು ಹಾಕಿ ಕುದಿಯಲು ಇಡಿ. ಒಂದು ಕುದಿ ಬಂದ ನಂತರ ಪಾಸ್ತಾ ಹಾಕಿ, ಅದು ಮೃದುವಾಗುವವರೆಗೂ ಬೇಯಿಸಿ. ಬೆಂದ ಪಾಸ್ತಾವನ್ನು ನೀರು ಬಸಿ ಯಿರಿ. ಒಂದು ಬೌಲ್‌ನಲ್ಲಿ ಮಯೊನೈಸ್, ಕಾಳುಮೆಣಸಿನ ಪುಡಿ, ಲಿಂಬೆ ರಸ, ಉಪ್ಪು ಬೆರೆಸಿ. ಇದಕ್ಕೆ ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಂ, ಕ್ಯಾರೆಟ್ ತುರಿ ಹಾಕಿ, ಬೆಂದ ಪಾಸ್ತಾವನ್ನೂ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕೊತ್ತಂಬರಿ ಅಥವಾ ಸಬ್ಬಸಿಗೆ ಸೊಪ್ಪಿನಿಂದ ಅಲಂಕರಿಸಿ. ಈ ಸಲಾಡ್ ಅನ್ನು ಬೆಳಗಿನ ಉಪಾಹಾರವಾಗಿಯೂ ಸೇವಿಸಬಹುದು. ಫ್ರೂಟ್ಸ್ ಸಲಾಡ್
ಬೇಕಾಗುವ ಸಾಮಗ್ರಿಗಳು
· ಬಾಳೆಹಣ್ಣು -2,
· ಸಪೋಟ -2,
· ಪಪ್ಪಾಯ -1,
· ಸೇಬು -2,
· ಒಣದ್ರಾಕ್ಷಿ, ಗೋಡಂಬಿ,
ಬಾದಾಮಿ, ಪಿಸ್ತಾ
ಚೂರುಗಳು – 1 ಕಪ್,
· ಪುದೀನಾ ಸೊಪ್ಪು, ಚಾಟ್
· ಮಸಾಲ – 2 ಚಮಚ.
Related Articles
Advertisement