ಹೊಸದಿಲ್ಲಿ: ಚೀನ ಮೂಲದ ಶಿಯೋಮಿ ಇಂಡಿಯಾ ಸಂಸ್ಥೆಯ 5,551 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಶನಿವಾರ ಜಪ್ತಿ ಮಾಡಿದೆ. ಕಾನೂನು ಬಾಹಿರ ಹಣ ವರ್ಗಾವಣೆ ಮತ್ತು ವಿದೇಶಿ ವಿನಿಯಮ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಇಡಿ ಈ ಕ್ರಮ ಕೈಗೊಂಡಿದೆ.
ದಿಲ್ಲಿ ಸೇರಿ ಅನೇಕ ಸ್ಥಳಗಳಲ್ಲಿರುವ ಶಿಯೋಮಿ ಕೇಂದ್ರಗಳ ಲೆಕ್ಕ ಪತ್ರಗಳನ್ನು ನಿರ್ದೇಶನಾಲಯದ ಅಧಿ ಕಾರಿಗಳು ಪರಿಶೀಲಿಸಿದ್ದಾರೆ. ಅದರಲ್ಲಿ ಶಿಯೋಮಿ ಇಂಡಿಯಾ ಸಂಸ್ಥೆಯು, ಚೀನದ ಶಿಯೋಮಿ ಗ್ರೂಪ್ ಹಾಗೂ ಅಮೆರಿಕದ ಎರಡು ಸಂಸ್ಥೆಗಳಿಗೆ ಭಾರೀ ಪ್ರಮಾ ಣದ ಕಾನೂನು ಬಾಹಿರವಾಗಿ ಹಣ ವರ್ಗಾವಣೆ ಮಾಡಿರುವುದು ತಿಳಿದುಬಂದಿದೆ.
ಪೋಷಕ ಸಂಸ್ಥೆಯ ಆದೇ ಶದ ಮೇರೆಗೆ ರಾಯಧನದ ರೂಪದಲ್ಲಿ ಹಣ ವರ್ಗಾ ವಣೆ ಮಾಡಲಾಗಿದೆ. ಅಮೆರಿಕದ ಸಂಸ್ಥೆಗಳಿಗೆ ವರ್ಗಾ ವಣೆಯಾದ ಹಣವನ್ನೂ ಅಂತಿಮವಾಗಿ ಶಿಯೋಮಿ ಗ್ರೂಪ್ಸ್‌ನಿಂದಲೇ ಬಳಕೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2014ರಲ್ಲಿ ಭಾರತದಲ್ಲಿ ಕಚೇರಿ ತೆರೆದ ಶಿಯೋಮಿ ಇಂಡಿಯಾ, 2015ರಿಂದಲೇ ವಿದೇಶ ಗಳಿಗೆ ಹಣ ವರ್ಗಾವಣೆಯಲ್ಲಿ ತೊಡಗಿಸಿಕೊಂಡಿರುವುದಾಗಿ ಹೇಳಲಾಗಿದೆ.
ಶಿಯೋಮಿ ಮೊಬೈಲ್ ಸಂಸ್ಥೆಯ ಬಗ್ಗೆ ಇ.ಡಿ. ಅಧಿಕಾರಿಗಳು ಕಳೆದ ಫೆಬ್ರವರಿಯಲ್ಲಿ ವಿಚಾರಣೆ ಆರಂಭಿಸಿದ್ದರು.