Advertisement

ED raids ಕೆಐಎಡಿಬಿ ಅಕ್ರಮ: 1.5 ಕೋಟಿ ರೂಪಾಯಿ ಇ.ಡಿ. ವಶ

01:22 AM Aug 14, 2024 | Team Udayavani |

ಹೊಸದಿಲ್ಲಿ: ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)ಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಇತ್ತೀಚೆಗೆ ನಡೆಸಿದ್ದ ಶೋಧ ಕಾರ್ಯದ ವೇಳೆ 1.5 ಕೋಟಿ ರೂ. ನಗದು ಹಾಗೂ ಡಿಜಿಟಲ್‌ ಡಿವೈಸ್‌ಗಳನ್ನು ವಶಪಡಿಸಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯ (ಇ.ಡಿ.) ಮಂಗಳವಾರ ತಿಳಿಸಿದೆ.

Advertisement

ಹುಬ್ಬಳ್ಳಿ ವಿಮಾನ ನಿಲ್ದಾಣ ಹಾಗೂ ಐಐಟಿ ಧಾರವಾಡದ ಯೋಜನೆಗಳಿಗೆ ಸಂಬಂಧಿಸಿ ಕೆಐಎಡಿಬಿ ನಡೆಸಿರುವ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪವಿದೆ. ಈ ಆರೋಪದೊಂದಿಗೆ ತಳುಕು ಹಾಕಿಕೊಂಡಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧಿಸಿದಂತೆ ಇ.ಡಿ.ಯು ಬೆಂಗಳೂರಿನಲ್ಲಿರುವ ಕೆಐಎಡಿಬಿ ಕೇಂದ್ರ ಕಚೇರಿ ಹಾಗೂ ಧಾರವಾಡದ ವಲಯ ಕಚೇರಿ ಸಹಿತ ಬೆಂಗಳೂರು ಮತ್ತು ಧಾರವಾಡದ 12ಕ್ಕೂ ಅಧಿಕ ಸ್ಥಳಗಳಲ್ಲಿ ಆ.9 ಮತ್ತು 10ರಂದು ಶೋಧ ನಡೆ ಸಿ ತ್ತು.

Advertisement

Udayavani is now on Telegram. Click here to join our channel and stay updated with the latest news.

Next