Advertisement

ನರೇಗಾದಲ್ಲಿ 18 ಕೋಟಿ ಅವ್ಯವಹಾರ ಜಾರ್ಖಂಡ್‌ನ‌ಲ್ಲಿ ಇ.ಡಿ ದಾಳಿ

07:44 PM May 06, 2022 | Team Udayavani |

ನವದೆಹಲಿ/ರಾಂಚಿ: ಮನರೇಗಾ ಯೋಜನೆಯಲ್ಲಿ ಅವ್ಯವಹಾರ ಉಂಟಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಜಾರ್ಖಂಡ್‌ನ‌ ಗಣಿ ಸಚಿವಾಲಯದ ಕಾರ್ಯದರ್ಶಿ ನಿವಾಸ ಸೇರಿದಂತೆ ಹಲವೆಡೆ ದಾಳಿ ನಡೆಸಿದೆ.

Advertisement

2008-2011ರ ನಡುವೆ ಖುಂಟಿ ಜಿಲ್ಲೆಯಲ್ಲಿ ಯೋಜನೆಗೆ ಸಂಬಂಧಿಸಿದಂತೆ 18 ಕೋಟಿ ರೂ. ಅವ್ಯವಹಾರ ಉಂಟಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗಿದೆ.

ರಾಂಚಿಯಲ್ಲಿರುವ ಲೆಕ್ಕಪರಿಶೋಧಕರೊಬ್ಬರ ಬಳಿಯಿಂದ 17 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಅಷ್ಟು ಮೊತ್ತ ಇದೆಯೋ ಇಲ್ಲವೋ ಎನ್ನುವುದನ್ನು ಖಾತರಿಪಡಿಸಿಕೊಳ್ಳಲು ನೋಟುಗಳನ್ನು ಎಣಿಕೆ ಮಾಡುವ ಯಂತ್ರಗಳನ್ನೂ ತರಲಾಗಿದೆ. ಇತರ ಸ್ಥಳಗಳಿಂದ 1.8 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಜಾರ್ಖಂಡ್‌, ಬಿಹಾರ, ದೆಹಲಿ, ಪಶ್ಚಿಮ ಬಂಗಾಳ, ಪಂಜಾಬ್‌ ಸೇರಿದಂತೆ ಹಲವು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next