Advertisement

ED Raids: ಪಂ.ಬಂಗಾಳ ಸಚಿವ ಜ್ಯೋತಿಪ್ರಿಯಾ ಮಲಿಕ್ ನಿವಾಸದ ಮೇಲೆ ಇಡಿ ದಾಳಿ

10:51 AM Oct 26, 2023 | Team Udayavani |

ಕೊಲ್ಕತ್ತ: ಬಂಗಾಳ ಸಚಿವ ಜ್ಯೋತಿಪ್ರಿಯಾ ಮಲಿಕ್ ಅವರ ನಿವಾಸದ ಮೇಲೆ ಇಡಿ ದಾಳಿ ನಡೆಸಿದೆ. ಇಡಿ ಅಧಿಕಾರಿಗಳ ತಂಡ ಗುರುವಾರ ಬೆಳಗ್ಗೆ ಬಂಗಾಳ ಅರಣ್ಯ ಸಚಿವರ ನಿವಾಸಕ್ಕೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ.

Advertisement

ಜ್ಯೋತಿಪ್ರಿಯಾ ಮಲಿಕ್ ಅವರು ಅರಣ್ಯ ಸಚಿವರಾಗುವ ಮೊದಲು ಆಹಾರ ಸಚಿವರಾಗಿದ್ದ ವೇಳೆ ನಡೆದಿದ್ದ ಪಡಿತರ ಹಗರಣಕ್ಕೆ ಸಂಬಂಧಿಸಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ಸಚಿವರ ಮೇಲೆ ಈ ಹಿಂದೆಯೂ ದಾಳಿ ನಡೆಸಲಾಗಿತ್ತು.

ಇದಕ್ಕೂ ಮುನ್ನ ಈ ಹಗರಣದಲ್ಲಿ ಅಕ್ಕಿ ಗಿರಣಿ ಮಾಲೀಕ ಬಾಕಿಬುರ್ ರೆಹಮಾನ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು. 2004 ರಲ್ಲಿ ಅಕ್ಕಿ ಗಿರಣಿ ಮಾಲೀಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ರೆಹಮಾನ್, ಮುಂದಿನ ಎರಡು ವರ್ಷಗಳಲ್ಲಿ ಮತ್ತೆ ಮೂರು ಕಂಪನಿಗಳನ್ನು ಸ್ಥಾಪಿಸಿದರು. ಇಡಿ ಅಧಿಕಾರಿಗಳ ಪ್ರಕಾರ, ರೆಹಮಾನ್ ಅವರು ಶೆಲ್ ಕಂಪನಿಗಳ ಸರಣಿಯನ್ನು ತೆರೆದು ಹಣವನ್ನು ಹಿಂಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಇಡಿ ಮೂಲಗಳ ಪ್ರಕಾರ, ರೆಹಮಾನ್ ಆಹಾರ ಇಲಾಖೆಯಲ್ಲಿ ಆಳವಾಗಿ ಬೇರೂರಿದ್ದರು ಮತ್ತು ಪಡಿತರ ಇಲಾಖೆಯಲ್ಲಿನ ತನ್ನ ದಂಧೆಯ ಮೂಲಕ ಸಾರ್ವಜನಿಕರಿಗೆ ಮಂಜೂರು ಮಾಡಿದ ಆಹಾರ ಧಾನ್ಯಗಳನ್ನು ಅಕ್ರಮವಾಗಿ ಮಾರಾಟ ಮಾಡುವ ಮೂಲಕ ಹಣವನ್ನು ಲಪಟಾಯಿಸಿದ್ದಾರೆ. ರೆಹಮಾನ್ ಕೋಲ್ಕತ್ತಾ ಮತ್ತು ಬೆಂಗಳೂರಿನಲ್ಲಿ ಹೋಟೆಲ್ ಮತ್ತು ಬಾರ್‌ಗಳನ್ನು ಹೊಂದಿದ್ದಾರೆ ಮತ್ತು ವಿದೇಶಿ ಕಾರುಗಳನ್ನು ಖರೀದಿಸಿದ್ದಾರೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಇಡಿ ಅವರನ್ನು ಬಂಧಿಸಿತ್ತು.

Advertisement

ಇಡಿ ಮೂಲಗಳ ಪ್ರಕಾರ, ಬಾಕಿಬುರ್ ರೆಹಮಾನ್ ಹಗರಣದಲ್ಲಿ ಭಾಗಿಯಾಗಿರುವ ಸಂದರ್ಭದಲ್ಲಿ ಜ್ಯೋತಿಪ್ರಿಯಾ ಮಲಿಕ್ ಆಹಾರ ಸಚಿವರಾಗಿದ್ದ ಅಲ್ಲದೆ ಬಾಕಿಬುರ್ ರೆಹಮಾನ್ ಸಚಿವ ಜ್ಯೋತಿಪ್ರಿಯಾ ಅವರಿಗೆ ಅತ್ಯಂತ ಆಪ್ತರು ಎನ್ನಲಾಗಿದೆ.

ಇದನ್ನೂ ಓದಿ: Israel Attack: ಇಸ್ರೇಲ್ ದಾಳಿಗೂ ಮುನ್ನ 500ಭಯೋತ್ಪಾದಕರಿಗೆ ತರಬೇತಿ ನೀಡಿದ್ದ ಇರಾನ್: ವರದಿ

Advertisement

Udayavani is now on Telegram. Click here to join our channel and stay updated with the latest news.

Next