Advertisement

ಜಮ್ಮು-ಕಾಶ್ಮೀರ ಕ್ರಿಕೆಟ್‌ ಅಕ್ರಮ: ಫಾರೂಕ್‌ ಅಬ್ದುಲ್ಲಾಗೆ ಸೇರಿದ 11.86 ಕೋ.ರೂ. ಆಸ್ತಿ ವಶ

09:30 AM Dec 20, 2020 | keerthan |

ಹೊಸದಿಲ್ಲಿ: ಜಮ್ಮು-ಕಾಶ್ಮೀರ ಕ್ರಿಕೆಟ್‌ ಸಂಸ್ಥೆಯಲ್ಲಿ ಅಕ್ರಮ ಹಣ ಸಾಗಣೆ ನಡೆಸಿರುವ ಆರೋಪದಲ್ಲಿ, ಅಲ್ಲಿನ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಮತ್ತು ಇತರರಿಗೆ ಸೇರಿದ 11.86 ಕೋಟಿ ರೂ. ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ವಶಪಡಿಸಿಕೊಂಡಿದೆ.

Advertisement

ಜಮ್ಮು ಮತ್ತು ಶ್ರೀನಗರದಲ್ಲಿರುವ ಈ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಇಡಿ ತಾತ್ಕಾಲಿಕ ಆದೇಶ ಹೊರಡಿಸಿದೆ. 83 ವರ್ಷದ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷದ ಹಿರಿಯ ನಾಯಕ ಅಬ್ದುಲ್ಲಾರನ್ನು, ಇದೇ ಪ್ರಕರಣದಲ್ಲಿ ಅಕ್ಟೋಬರ್‌ನಲ್ಲೊಮ್ಮೆ ವಿಚಾರಣೆಗೊಳಪಡಿಸಲಾಗಿತ್ತು.

ಇದನ್ನೂ ಓದಿ:ಮಗುಚಿ ಬಿದ್ದ ಟಾಟಾ ಏಸ್ ವಾಹನ: 12 ಮಂದಿಗೆ ಗಾಯ, ನಾಲ್ವರು ಮಹಿಳೆಯರು ಗಂಭೀರ

ಪ್ರಸ್ತುತ ಆಸ್ತಿಗಳನ್ನು ಅಕ್ರಮ ಹಣ ಸಾಗಣೆ ನಿಗ್ರಹ ಕಾಯ್ದೆಯಡಿ ವಶಪಡಿಸಿಕೊಳ್ಳಲಾಗಿದೆ. ಈ ಆಸ್ತಿಗಳ ಪೈಕಿ ಎರಡು ಸ್ಥಿರಾಸ್ತಿಗಳು ವಸತಿ ಸ್ಥಾನಗಳಾಗಿವೆ. ಇನ್ನೊಂದು ವಾಣಿಜ್ಯ ಮಹತ್ವ ಹೊಂದಿದೆ. ಇನ್ನೂ ಮೂರು ಜಾಗಗಳೂ ಇಡಿಯ ವಶಕ್ಕೆ ಹೋಗಿವೆ.

Advertisement

Udayavani is now on Telegram. Click here to join our channel and stay updated with the latest news.

Next