Advertisement

ED; ಕೇಜ್ರಿವಾಲ್‌ಗೆ ತೀವ್ರ ಸಕ್ಕರೆ ಕಾಯಿಲೆ: ಲಾಕಪ್‌ನಲ್ಲಿ ವಿಶೇಷ ಆಹಾರ, ಔಷಧ

12:17 AM Mar 24, 2024 | Team Udayavani |

ಹೊಸದಿಲ್ಲಿ: ಅಬಕಾರಿ ನೀತಿ ಹಗರಣ ದಲ್ಲಿ ಬಂಧಿತರಾಗಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಹೈಪರ್‌ ಗ್ಲೈಸೇಮಿಯಾ (ಮಧುಮೇಹ)ದಿಂದ ಬಳಲುತ್ತಿದ್ದಾರೆ. ಆದ್ದರಿಂದ ಅವ ರಿಗೆ ಮನೆಯೂಟ ಮತ್ತು ಔಷಧಗಳನ್ನು ಪೂರೈಸಲು ದಿಲ್ಲಿಯ ಕೋರ್ಟ್‌ ಜಾರಿ ನಿರ್ದೇಶನಾಲಯ (ಇ.ಡಿ.)ಕ್ಕೆ ಸೂಚಿಸಿದೆ.

Advertisement

6 ದಿನ ಇ.ಡಿ. ವಶದಲ್ಲಿರುವ ಕೇಜ್ರಿವಾಲ್‌ ಅವರಿಗೆ ಅಗತ್ಯ ವೈದ್ಯಕೀಯ ಸೇವೆಯನ್ನು ಒದಗಿಸ ಬೇಕು. ವೈದ್ಯರ ನಿರ್ದೇಶನದ ಅನುಸಾರ ಊಟ ಒದಗಿಸಲು ಇ.ಡಿ.ಗೆ ಸಾಧ್ಯವಾಗದಿದ್ದರೆ ಮನೆಯೂಟಕ್ಕೆ ಅವಕಾಶ ನೀಡಬೇಕು. ಜತೆಗೆ ಕೇಜ್ರಿವಾಲ್‌ ಪತ್ನಿ ಸುನೀತಾ ಹಾಗೂ ಆಪ್ತ ಕಾರ್ಯದರ್ಶಿ ಬಿಭವ್‌ ಕುಮಾರ್‌ ಅವರ ಭೇಟಿಗೆ ಸಂಜೆ 6ರಿಂದ 7 ಗಂಟೆ ಸಮಯದಲ್ಲಿ ಅವಕಾಶ ನೀಡಬೇಕು. ಇದೇ ಅವಧಿಯಲ್ಲಿ ಅವರ ವಕೀಲರಾದ ಮೊಹಮ್ಮದ್‌ ಇರ್ಷಾದ್‌ ಹಾಗೂ ವಿವೇಕ್‌ ಜೈನ್‌ ಅವರ ಭೇಟಿಗೂ ಅವಕಾಶ ಕಲ್ಪಿಸಬೇಕು ಎಂದು ಕೋರ್ಟ್‌ ಹೇಳಿದೆ.

ಮಧುಮೇಹ ಹಾಗೂ ಇತರ ವೈದ್ಯಕೀಯ ಸಮಸ್ಯೆಗಳಿಂದ ಬಳಲುತ್ತಿರುವ ತಮಗೆ ವೈದ್ಯರ ಶಿಫಾರಸಿನ ಊಟ ಮತ್ತು ಔಷಧಗಳನ್ನು ಪಡೆ ಯಲು ಅವಕಾಶ ಕೋರಿ ಅರವಿಂದ್‌ ಕೇಜ್ರಿವಾಲ್‌ ಅವರು ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಗುರು ವಾರದ ವರೆಗೂ ಅವರು ಇ.ಡಿ. ಕಸ್ಟಡಿಯಲ್ಲಿ ಇರಲಿದ್ದಾರೆ.

ನ್ಯಾಯಾಲಯ ಆದೇಶಿಸಿದ್ದೇನು?

ಅರವಿಂದ್‌ ಕೇಜ್ರಿವಾಲ್‌ ಹೈಪರ್‌ ಗ್ಲೈಸೇಮಿಯಾದಿಂದ ಬಳಲುತ್ತಿದ್ದಾರೆ.
ಅವರು 6 ದಿನ ಇ.ಡಿ. ವಶದಲ್ಲಿರುವಾಗ ಅಗತ್ಯ ವೈದ್ಯಕೀಯ ನೆರವು ಒದಗಿಸಬೇಕು.
ಇ.ಡಿ.ಯೇ ಸಮರ್ಪಕ ಊಟ ಕೊಡ ಬೇಕು, ಇಲ್ಲವಾದರೆ ಮನೆಯೂಟಕ್ಕೆ ಅವಕಾಶ ನೀಡಬೇಕು.
ಸಂಜೆ 6ರಿಂದ 7ರ ವರೆಗೆ ಪತ್ನಿ, ಕಾರ್ಯದರ್ಶಿ ಬಿಭವ್‌, ಇಬ್ಬರು ವಕೀಲರ ಭೇಟಿಗೆ ಅನುಮತಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next