Advertisement
ಜಾರಿ ನಿರ್ದೇಶನಾಲಯ ಸತತ ವಿಚಾರಣೆಯ ಬಳಿಕ ಈ ಕ್ರಮ ಕೈಗೊಂಡಿದೆ. ಮಂಗಳವಾರ ಜಾರಿ ನಿರ್ದೇಶನಾಲಯ ಸಚಿವರನ್ನು 9 ಗಂಟೆ ಕಾಲ ವಿಚಾರಣೆ ನಡೆಸಿತ್ತು. ಜತೆಗೆ ಅವರನ್ನು ಬುಧವಾರ ಕೂಡ ವಿಚಾರಣೆಗೆ ಬರುವಂತೆ ಸೂಚಿಸಿತ್ತು. ದಿನವಿಡೀ ವಿಚಾರಣೆ ನಡೆಸಿದ ಬಳಿಕ ಅವರನ್ನು ವಿಚಾರಣೆಗೆ ಸಹಕಾರ ನೀಡದ ಆರೋಪದ ಹಿನ್ನೆಲೆಯಲ್ಲಿ ಇ.ಡಿ. ಅವರನ್ನು ಬಂಧಿಸಿದೆ. ರಾಂಚಿಯಲ್ಲಿನ ಮನೆಯ ಮೇಲೆ ದಾಳಿ ನಡೆಸಿದ ವೇಳೆ ಆಲಂ ಸಹಾಯಕ ಸಂಜೀವ್ ಲಾಲ್ ಹಾಗೂ ಮನೆಗೆಲಸದವನ್ನು ಇ.ಡಿ ವಶಪಡಿಸಿಕೊಂಡಿತ್ತು. ದಾಳಿ ನಡೆದಾಗ 35.23 ಕೋಟಿ ರೂ., ಮತ್ತೂಂದು ಮನೆಯಲ್ಲಿ 1.5 ಕೋಟಿ ರೂ. ಸೇರಿ ಒಟ್ಟು 37 ಕೋಟಿ ರೂ. ಅಕ್ರಮ ಹಣ ದೊರೆತಿತ್ತು. Advertisement
32 ಕೋಟಿ ರೂ. ಅಕ್ರಮ ಹಣ ಪತ್ತೆ: ಜಾರ್ಖಂಡ್ ಸಚಿವ ಆಲಂಗೀರ್ ಸೆರೆ
09:30 PM May 15, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.