Advertisement

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

09:21 AM Apr 18, 2024 | Team Udayavani |

ನವದೆಹಲಿ: ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ಇತರರ ವಿರುದ್ಧ ಅಕ್ರಮ ಭೂಕಬಳಿಕೆ ಸಂಬಂಧ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ನಾಲ್ವರನ್ನು ಹೊಸದಾಗಿ ಬಂಧಿಸಿದೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ.

Advertisement

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಅಡಿಯಲ್ಲಿ ಬಂಧನಕ್ಕೊಳಗಾದವರನ್ನು ಅಂತು ಟಿರ್ಕಿ, ಪ್ರಿಯಾ ರಂಜನ್ ಸಹಾಯ್, ಬಿಪಿನ್ ಸಿಂಗ್ ಮತ್ತು ಇರ್ಷಾದ್ ಎನ್ನಲಾಗಿದೆ.

ಮಂಗಳವಾರ ಟಿರ್ಕಿ ಮತ್ತು ಇತರ ಕೆಲವರ ನಿವಾಸಗಳ ಮೇಲೆ ಇಡಿ ಶೋಧ ನಡೆಸಿತ್ತು. ಈ ಬಂಧನದೊಂದಿಗೆ ಈ ಪ್ರಕರಣದಲ್ಲಿ ಬಂಧಿತರಾಗಿರುವವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

48 ವರ್ಷದ ಸೋರೆನ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ದಿನಗಳಲ್ಲಿ ಇಡಿ ಅವರನ್ನು ಜನವರಿಯಲ್ಲಿ ಬಂಧಿಸಿತ್ತು. ಪ್ರಸ್ತುತ ಅವರನ್ನು ಇಲ್ಲಿನ ಹೊತ್ವಾರ್‌ನಲ್ಲಿರುವ ಬಿರ್ಸಾ ಮುಂಡಾ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಪ್ರಧಾನ ಆರೋಪಿ ಮತ್ತು ಕಂದಾಯ ಇಲಾಖೆಯ ಮಾಜಿ ಸಬ್ ಇನ್ಸ್‌ಪೆಕ್ಟರ್ ಭಾನು ಪ್ರತಾಪ್ ಪ್ರಸಾದ್, ಮೊಹಮ್ಮದ್ ಸದ್ದಾಂ ಹುಸೇನ್ ಮತ್ತು ಅಫ್ಸರ್ ಅಲಿ ಅವರನ್ನೂ ಈ ಪ್ರಕರಣದಲ್ಲಿ ಬಂಧಿಸಲಾಗಿದೆ.

ಸೋರೆನ್ ವಿರುದ್ಧದ ತನಿಖೆಯು ರಾಂಚಿಯ 8.86 ಎಕರೆ ಭೂಮಿಗೆ ಸಂಬಂಧಿಸಿದೆ, ಅವರು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಇಡಿ ಆರೋಪಿಸಿದೆ.

Advertisement

ಇದನ್ನೂ ಓದಿ: Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Advertisement

Udayavani is now on Telegram. Click here to join our channel and stay updated with the latest news.

Next