ಕೋಲ್ಕತಾ: ಪಶ್ಚಿಮ ಬಂಗಾಲದ ಸಾರ್ವ ಜಿಕ ವಿತರಣೆ ವ್ಯವಸ್ಥೆ (ಪಿಡಿಎಸ್) ಹಗರ ಣದಲ್ಲಿ 9,000-10,000 ಕೋಟಿ ರೂ.ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡ ಲಾಗಿದೆ. ಈ ಪೈಕಿ 2,000 ಕೋಟಿ ರೂ.ಗಳನ್ನು ದುಬಾೖಗೆ ನೇರ ವಾಗಿ ಅಥವಾ ಬಾಂಗ್ಲಾದೇಶದ ಮೂ ಲಕ ದುಬಾೖಗೆ ಅಕ್ರಮವಾಗಿ ರವಾನಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಪಶ್ಚಿಮ ಬಂಗಾಲದಲ್ಲಿ ಭತ್ತದ ನಕಲಿ ಸಂಗ್ರಹಣೆ ಸೇರಿ ದಂತೆ ಪಿಡಿಎಸ್ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣಕಾಸು ವರ್ಗಾ ವಣೆ ಪ್ರಕರಣವನ್ನು ಇ.ಡಿ. ತನಿಖೆ ನಡೆಸುತ್ತಿದೆ. ಈ ಸಂಬಂಧ ಕಳೆದ ವರ್ಷ ಪಶ್ಚಿಮ ಬಂಗಾಲ ಸಚಿವ, ಟಿಎಂಸಿ ನಾಯಕ ಜ್ಯೋತಿಪ್ರಿಯ ಮಲ್ಲಿಕ್ ಹಾಗೂ ಅವರ ಸಹಚರ ಬಾಕಿಬುರ್ ರೆಹಾಮನ್ ಅವರನ್ನು ಇ.ಡಿ. ಅಧಿಕಾರಿಗಳು ಬಂಧಿಸಿದ್ದರು.
ಇದೇ ಹಗರಣಕ್ಕೆ ಸಂಬಂಧಿಸಿದ ತನಿಖೆಯ ಭಾಗವಾಗಿ ಇ.ಡಿ. ಅಧಿಕಾರಿಗಳ ತಂಡ ಜ.5ರಂದು ಟಿಎಂಸಿ ಸಂಚಾಲಕ ಶಹಾಜಹಾನ್ ಶೇಖ್ ಅವರಿಗೆ ಸೇರಿದ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಕಾಳಿ ಪ್ರದೇಶದ ಮೇಲೆ ಶೋಧ ನಡೆಸಿತ್ತು. ಇ.ಡಿ.ಯ ಮತ್ತೂಂದು ತಂಡ ಟಿಎಂಸಿ ನಾಯಕ ಶಂಕರ್ ಆದ್ಯ ಅವರಿಗೆ ಸೇರಿದ ಬೊಂಗಾವ್‌ನ ಸಿಮು ಲ್ತಾಲಾ ಪ್ರದೇಶ ಮೇಲೆ ಶೋಧ ನಡೆಸಿತ್ತು.
ಆದರೆ ಸಂದೇಶ್‌ಕಾಳಿ ಪ್ರದೇಶದಲ್ಲಿ ಇ.ಡಿ. ಅಧಿಕಾರಿಗಳ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ, ಅವರ ಮೊಬೈಲ್ ಫೋನ್, ಲ್ಯಾಪ್‌ಟಾಪ್, ನಗದು ಸೇರಿ ದಂತೆ ಇತರ ವಸ್ತುಗಳನ್ನು ಲೂಟಿ ಮಾಡಿದ್ದರು. ಘಟನೆಯಲ್ಲಿ ಮೂವರು ಅಧಿಕಾರಿಗಳಿಗೆ ಗಂಭೀರ ಗಾಯವಾಗಿದೆ. ಆದರೆ ಈ ಪ್ರಕರಣದಲ್ಲಿ ಸಂದೇಶ್‌ಕಾಳಿ ಪೊಲೀ ಸರು ಜಾಮೀನು ನೀಡಬಹುದಾದ ಸೆಕ್ಷನ್‌ಗಳಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಇ.ಡಿ. ಅಧಿಕಾರಿಗಳು ದೂರಿದ್ದಾರೆ.
ಇನ್ನೊಂದೆಡೆ ಬೊಂಗಾವ್‌ನಲ್ಲಿ ಇ.ಡಿ. ಅಧಿಕಾರಿಗಳು ಹಾಗೂ ಸಿಆರ್‌ಪಿಎಫ್ ಸಿಬಂದಿಯನ್ನು ತಡೆದ ಸ್ಥಳೀಯರು, ಶೋಧ ಕಾರ್ಯ ನಡೆಸದಂತೆ ಬೆದರಿಕೆ ಹಾಕಿ, ಥಳಿಸಿದ್ದರು. ಈ ಪ್ರಕರಣದಲ್ಲಿ ಬೊಂಗಾವ್ ಪೊಲೀಸರು ತಮಗೆ ಯಾವು ದೇ ಮಾಹಿತಿ ನೀಡಿಲ್ಲ ಎಂದು ಇ.ಡಿ. ಅಧಿಕಾರಿಗಳು ಆರೋಪಿಸಿದ್ದಾರೆ.