Advertisement

ಎಗ್ಜಿಮಾ / ಇಸುಬು ಸಮಸ್ಯೆಗೆ ಹೋಮಿಯೋ ಪರಿಹಾರ 

12:30 AM Jan 16, 2019 | |

ಇಸುಬು ಅಥವಾ ಎಗ್ಜಿಮಾ ಒಂದು ಬಗೆಯ ಚರ್ಮವ್ಯಾದಿ. ಚರ್ಮದಲ್ಲಿ ಅಲ್ಲಲ್ಲಿ ಕೊಂಚ ಆಗಲದಲ್ಲಿ ಕೆಂಪಗಾಗಿ ಬಿರುಕು ಬಿಡುತ್ತದೆ. ಇದು ಅತೀವ ತುರಿಕೆ ಮತ್ತು ಉರಿಯಿಂದ ಕೂಡಿರುತ್ತದೆ. ಈ ಎಗ್ಜಿಮಾ ಮಕ್ಕಳಲ್ಲಿ ಮತ್ತು ದೊಡ್ಡವರಲ್ಲಿ ಶೇ.65 ರಷ್ಟು ಮತ್ತು ಶಿಶುಗಳಲ್ಲಿ 85% ಕಾಣಿಸಿಕೊಳ್ಳುತ್ತದೆ. ಇಸುಬು ಎದುರಾಗಲು ಆನುವಂಶಿಕ ಕಾರಣ ಪ್ರಮುಖವಾಗಿದ್ದು ನಮ್ಮ ಹಿರಿಯರಲ್ಲಿ ಯಾರಿಗಾದರೂ ಈ ತೊಂದರೆ ಇದ್ದರೆ ಕುಟುಂಬ ಸದಸ್ಯರಲ್ಲಿಯೂ ಕಂಡುಬರಬಹುದು. ಸಾಮಾನ್ಯವಾಗಿ ಈ ತೊಂದರೆ ಇರುವ ವ್ಯಕ್ತಿಗಳ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುತ್ತದೆ. 

Advertisement

ಎಗ್ಜಿಮಾದಲ್ಲಿನ ವಿಧಗಳು 
1. ಎಲರ್ಜಿಕ್‌ ಕಾಂಟ್ಯಕ್ಟ್ ಎಗ್ಜಿಮಾ 
2. ಕಾಂಟ್ಯಾಕ್‌ ಎಗ್ಜಿಮಾ 
3. ಆಟೋಪಿಕ್‌ ಡರ್ಮಟೈಟಿಸ್‌ 
4. ಸೆಬೋರಿಕ್‌ ಎಗ್ಜಿಮಾ 
5. ಸ್ಟೇಸಿಸ್‌ ಎಗ್ಜಿಮಾ 
6. ನಮ್ಯಾಲರ್‌ ಎಗ್ಜಿಮಾ 
7. ನ್ಯೂರೋ ಡರ್ಮಟೈಟಿಸ್‌ 

ಕಾರಣಗಳು: 
ಎಗ್ಜಿಮಾ ಏತಕ್ಕೆ ಪ್ರಭಲವಾಗಿ ಎಲ್ಲರನ್ನು ಇಷ್ಟೊಂದು ತೀವ್ರವಾಗಿ ಬಾಧಿಸುತ್ತಿದೆ ಎನ್ನುವ ವಿಷಯ ಇಲ್ಲಿಯವರೆಗೂ ನಿಖರವಾಗಿ ತಿಳಿದು ಬಂದಿಲ್ಲ. ಆದರೂ ವಂಶಪರಂಪರೆಯಿಂದ ಮತ್ತು ವಾತಾವರಣದಲ್ಲಿರುವ ಕೆಲವೊಂದು ಅಂಶಗಳಿಂದ ಎಗ್ಜಿಮಾ ಸಮಸ್ಯೆಗೆ ಕಾರಣವಾಗಬಹುದು ಎಂದು ಹೇಳಿಕೆ. ಮುಖ್ಯವಾಗಿ ಒಣ ಚರ್ಮವಿರುವವರಲ್ಲಿ ಎಗ್ಜಿಮಾ ಹೆಚ್ಚಾಗಿ ಕಾಣಬರುತ್ತದೆ. ಧೂಳು, ವಾತಾವರಣದಲ್ಲಿರುವ ಬದಲಾವಣೆಗಳು, ಹೂವಿನ ಗಿಡದ ಪರಾಗರೇಣು, ಸಾಬೂನುಗಳು, ಡಿಟರ್ಜೆಂಟ್‌, ಕೆಲವು ಆಹಾರ ಪದಾರ್ಥ, ಕೈಗಡಿಯಾರಗಳು, ಕೆಲವು ಆಭರಣಗಳು, ಡಿಯೋಡರೆಂಟ್‌ಗಳು, ಬೆವರು, ಉಣ್ಣಿ ಉಡುಪುಗಳು ಮತ್ತು ಕೆಲವು ಕೆರೆತ ಕೊಡುವ ಹಲವು ಇತರೆ ವಸ್ತುಗಳು ಎಗ್ಜಿಮಾವನ್ನು ಪ್ರೇರೇಪಿಸುತ್ತದೆ. ಕೆಲವು ವಿಧದ ಬ್ಯಾಕ್ಟೀರಿಯಾ, ವೈರಸ್‌, ಫ‌ಂಗಸ್‌ ಅಂತಹ ಅಂಶಗಳು ಮಾನಸಿಕ ಒತ್ತಡ ಮತ್ತು ಹಾರ್ಮೋನ್‌ಗಳ ಸಮಸ್ಯೆಗಳು ಕೂಡಾ ಎಗ್ಜಿಮಾ ಸಮಸ್ಯೆಯನ್ನು ತೀವ್ರಗೊಳಿಸುತ್ತದೆ. 

ಲಕ್ಷಣಗಳು: 
ಎಗ್ಜಿಮಾ ಸಮಸ್ಯೆ ತಲೆದೋರಿದಾಗ ಕಾಣಿಸುವ ಲಕ್ಷಣಗಳು ಎಲ್ಲರಲ್ಲೂ ಒಂದು ತರಹ ಇರುವುದಿಲ್ಲ. ಮುಖ್ಯವಾಗಿ ಎಗ್ಜಿಮಾ ಆಗುವುದಕ್ಕೆ ಅವಕಾಶವಿರುತ್ತದೆ. ಇದು ಹೆಚ್ಚಾಗಿ ಮುಖದ ಮೇಲೆ, ತಲೆಯಲ್ಲಿ, ಮೊಣಕಾಲು, ಹಿಂಭಾಗ, ಕತ್ತಿನ ಭಾಗದಲ್ಲಿ, ಮೊಣಕೈ ಭಾಗದಲ್ಲಿ, ಮಣಿಕಟ್ಟು, ಚರ್ಮದ ಸುಕ್ಕುಗಳಲ್ಲಿ, ಕಿವಿಗಳ ಹಿಂಬದಿಯಲ್ಲಿ, ಪಾದದ ಹಿಂಬದಿಗಳು ಮತ್ತು ಪಾದಗಳ ಮೇಲೆ ಕಾಣಿಸಿಕೊಳ್ಳುತ್ತದೆ. ನಂತರ ಕೆಲವು ತಿಂಗಳುಗಳು ಆದ ಮೇಲೆ ಕೈಕಾಲುಗಳ ಮೇಲೆ ವ್ಯಾಪಿಸುತ್ತದೆ. ಶೇ.80 ರಷ್ಟು ಎಗ್ಜಿಮಾದಿಂದ ನರಳುತ್ತಿರುವ ಚಿಕ್ಕ ಮಕ್ಕಳು ಹೈಫಿವರ್‌ ಅಥವಾ ಅಸ್ತಮಾಗೆ ಗುರಿಯಾಗುವ ಸಂಭವವಿರುತ್ತದೆ. 

ವ್ಯಾಧಿ ನಿರ್ಧಾರಕ್ಕೆ ಪರೀಕ್ಷೆಗಳು: 
ವ್ಯಾಧಿ ಲಕ್ಷಣಗಳ ಜೊತೆ ಕುಟುಂಬದ ಆರೋಗ್ಯದ ಹಿನ್ನಲೆ ತಿಳಿದುಕೊಳ್ಳುವುದರ ಮೂಲಕ ಈ ರೋಗವನ್ನು ನಿರ್ಧರಿಸುವುದು ನಡೆಯುತ್ತದೆ. ಕೆಲವು ಸಂದರ್ಭಗಳಲ್ಲಿ ರಕ್ತಪರೀಕ್ಷೆ, ಚರ್ಮದ ಮಚ್ಚೆಗಳ ಬಯಾಸ್ಪಿಯನ್ನು ಕೂಡಾ ಮಾಡಿಸಬೇಕಾದಂತಹ ಅವಶ್ಯಕತೆ ಇರುತ್ತದೆ. 

Advertisement

ಹೋಮಿಯೋಕೇರ್‌ ಇಂಟರ್‌ನ್ಯಾಷನಲ್‌ ವೈದ್ಯ ಚಿಕಿತ್ಸೆ: 
ಕಾನ್‌ಸ್ಟಿಟ್ಯೂಷನಲ್‌ ಹೋಮಿಯೋ ಟ್ರೀಟ್‌ಮೆಂಟ್‌ನ ಭಾಗವಾಗಿ ಸೂಕ್ಷ್ಮಿಕರಣ ಪದ್ಧತಿಯಲ್ಲಿ ತಯಾರಾದ ಹೋಮಿಯೋ ಔಷಧಿಗಳಿಂದ ರೋಗಿಯ ದೇಹದ ರೋಗ ನಿರೋಧಕ ಕಣಗಳಿಗೆ ಪುನರುಜ್ಜೀವನ ಕಲ್ಪಿಸುವುದರ ಮೂಲಕ ಯಾವುದೇ ದುಷ್ಪರಿಣಾಮಗಳು ಇಲ್ಲದೆಯೇ ಎಗ್ಜಿಮಾವನ್ನು ಪೂರ್ತಿಯಾಗಿ ಗುಣಪಡಿಸಲಾಗುತ್ತದೆ. ಕೇವಲ ಹೋಮಿಯೋಕೇರ್‌ ಇಂಟರ್‌ ನ್ಯಾಷನಲ್‌ನಲ್ಲಿ ಮಾತ್ರವೇ ಸಿಗುವ ಈ ವಿಶಿಷ್ಟ ವೈದ್ಯವಿಧಾನದಲ್ಲಿ ವ್ಯಾಧಿ ಸಂಬಂಧಿತ ವಿಷಯಗಳೊಂದಿಗೆ ರೋಗಿಯ ದೇಹದ ರಚನೆ, ವ್ಯಕ್ತಿಗತ ಮತ್ತು ಮಾನಸಿಕ ಲಕ್ಷಣಗಳ ಪರೀಕ್ಷೆಯ ನಂತರವೇ ತೆಗೆದುಕೊಳ್ಳುವ ಚಿಕಿತ್ಸೆಯಿಂದ ಈ ವ್ಯಾಧಿಯನ್ನು ಪೂರ್ತಿಯಾಗಿ ಗುಣಪಡಿಸಬಹುದು. ಹೋಮಿಯೋಕೇರ್‌ ಇಂಟರ್‌ನ್ಯಾಷನಲ್‌ನಲ್ಲಿ ಇನ್ನೂ ಬಹಳಷ್ಟು ಬೇರೆ ರೋಗಗಳಿಗೆ ಚಿಕಿತ್ಸೆ ನೀಡುತ್ತದೆ. ಥೈರಾಯ್ಡ ಸಮಸ್ಯೆಗಳಾದ ಹೈಪೋಥೈರಾಯ್ಡ, ಹೈಪರ್‌ಥೈರಾಯ್ಡ, ಪಿಸಿಒಡಿ, ಮೈಗ್ರೇನ್‌, ಮಧುಮೇಹ, ಹೇರ್‌ಫಾಲ್‌, ಕಿಡ್ನಿ ಸಮಸ್ಯೆಗಳು ಇನ್ನೂ ಇತರ ದೀರ್ಘ‌ಕಾಲದ ರೋಗಗಳಿಗೆ ಪರಿಹಾರ ದೊರೆಯುತ್ತದೆ.  

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 
ಹೋಮಿಯೋ ಕೇರ್‌ ಇಂಟರ್‌ನ್ಯಾಷನಲ್‌
9550001133, 
ಉಚಿತ ಕರೆ: 18001081212

ಶಾಖೆಗಳು: 
ಬೆಂಗಳೂರು(ಜಯನಗರ, ಮಲ್ಲೇಶ್ವರಂ, ಇಂದಿರಾನಗರ, ಎಚ್‌.ಎಸ್‌.ಆರ್‌ ಲೇಔಟ್‌), ಮೈಸೂರು, ಹುಬ್ಬಳ್ಳಿ, ಮಂಗಳೂರು, ಬಳ್ಳಾರಿ, ದಾವಣಗೆರೆ, ಬೆಳಗಾವಿ, ವಿಜಯಪುರ, ಬೀದರ್‌, ಕಲಬುರಗಿ, ಶಿವನೊಗ್ಗ, ತುಮಕೂರು, ಹಾಸನ ,ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಪುದುಚೇರಿ

Advertisement

Udayavani is now on Telegram. Click here to join our channel and stay updated with the latest news.

Next