ನವದೆಹಲಿ: ಹಿಮಾಲಯ ಶಿಖರ ಶ್ರೇಣಿಯಲ್ಲಿರುವ ವಿಶ್ವದ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟನ್ನು ಮೊದಲು ಏರಿದ್ದು ತೇನ್ ಸಿಂಗ್ ನಾರ್ಕೆ ಮತ್ತು ಎಡ್ಮಂಡ್ ಹಿಲರಿ ಎಂದು ಇತಿಹಾಸ ಪುಸ್ತಕದಲ್ಲಿ ದಾಖಲಾಗಿದೆ.
ಅನಂತರ ನೂರಾರು ಮಂದಿ ಈ ಪರ್ವತವನ್ನು ಏರಿ ವಿಭಿನ್ನ ರೀತಿ ದಾಖಲೆ ಮಾಡುತ್ತಿದ್ದಾರೆ. ಈ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಧಿಡೆಯಾಗಿರುವ ದಾಖಲೆ ಅರುಣಾಚಲ ಪ್ರದೇಶದ ಮಹಿಳೆ ಅನ್ಶು ಜಮ್‌ಸೆನ್ಪಾ ಅವರದ್ದು. ಆಕೆ ಬರೀ ಐದೇ ದಿನದಲ್ಲಿ ಎರಡು ಬಾರಿ ಈ ಪರ್ವತ ಹತ್ತಿದ ಮಹಿಳೆ ಎಂಬ ವಿಶ್ವದಾಖಲೆ ನಿರ್ಮಿಸಿದ್ದಾರೆ.
ವಾಸ್ತವವಾಗಿ ಒಂದು ಬಾರಿ ಈ ಪರ್ವತ ಏರಿಳಿಯವುದೇ ಕೆಲವರ ಇಡೀ ಜೀವನದ ಸಾಧನೆಯಾಗಿರುತ್ತದೆ. ಈ ಪರ್ವತದ ಹಾದಿ ಅಷ್ಟು ದುರ್ಗಮವಾಗಿರುವುದೇ ಇದಕ್ಕೆ ಕಾರಣ. ಅಂತಹ ಸಂದರ್ಭದಲ್ಲಿ ಕೇವಲ 5 ದಿನಗಳಲ್ಲಿ ಈ 2 ಮಕ್ಕಳಿರುವ 32 ವರ್ಷದ ತಾಯಿ ಪರ್ವತ ಏರಿಳಿರುವುದು ಶ್ಲಾಘನೆಗೆ ಕಾರಣವಾಗಿದೆ. ಇದೇ ಮೇ 16ರಂದು ಮೊದಲ ಬಾರಿಗೆ ಆಕೆ ಪರ್ವತವನ್ನು ಏರಿದ್ದರು. ಮೇ 21ರ ಭಾನುವಾರ ಬೆಳಗ್ಗೆ 2ನೇ ಬಾರಿ ಪರ್ವತವನ್ನು ಏರಿದ್ದಾರೆ. 17,500 ಅಡಿ ಎತ್ತರವಿರುವ ಎವರೆಸ್ಟನ್ನು ಮೇ 20ರಂದು ಬೆಳಗ್ಗೆ ಹತ್ತಲು ಆರಂಭಿಸಿದ್ದಾರೆ. ಮೇ 21ರ ಭಾನುವಾರ ಮುಗಿಸಿದ್ದಾರೆ.
ಬಹುತೇಕ ಎಲ್ಲಿಯೂ ವಿಶ್ರಮಿಸದೇ ಹತ್ತಿರುವುದು ಈಕೆಯ ಹೆಗ್ಗಳಿಕೆಗಳಲ್ಲೊಂದು. ವಿಶೇಷ ವೆಂದರೆ ಈಕೆಯ ಪತಿ ತ್ಸಿàಯಿಂಗ್ ವಾಂಗ್ ಅರುಣಾಚಲಪ್ರದೇಶ ಪರ್ವತಾರೋಹಣ ಮತ್ತು ಸಾಹಸ ಕ್ರೀಡಾ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ತಮ್ಮ ಪತ್ನಿಯ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಈ ದಂಪತಿ ಅರುಣಾಚಲದ ಪಶ್ಚಿಮ ಕಮೆಂಗ್ ಜಿಲ್ಲೆಯ ಬೊಮಿxಲಾದಲ್ಲಿ ವಾಸಿಸುತ್ತಾರೆ. ಜಮ್2011ರಲ್ಲೂ ಈ ಸಾಹಸ ಮಾಡಿದ್ದರು. ಆಗ ಕೇವಲ 10 ದಿನದಲ್ಲಿ 29ಸಾವಿರ ಅಡಿಯಿರುವ ಪರ್ವತವನ್ನು ಏರಿಳಿದಿದ್ದರು.