Advertisement

ದೇಶದ ಆರ್ಥಿಕತೆ ಕುಸಿತ ಹಿನ್ನೆಲೆ : ವೆಚ್ಚ ಕಡಿತಕ್ಕೆ ಕೇಂದ್ರ ಹಣಕಾಸು ಇಲಾಖೆ ಸೂಚನೆ

10:02 PM Jun 30, 2021 | Team Udayavani |

ನವದೆಹಲಿ: ಕೊರೊನಾದಿಂದಾಗಿ ದೇಶದ ಆರ್ಥಿಕತೆ ಕುಸಿದಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳು ತಮ್ಮ ಕಚೇರಿಗಳ ನಿರ್ವಹಣೆಗಾಗಿ ಕೇಂದ್ರದಿಂದ ಬರುವ ಅನುದಾನದಲ್ಲಿ ಕೇವಲ ಶೇ. 20ರಷ್ಟನ್ನು ಮಾತ್ರ ಉಪಯೋಗಿಸಬೇಕಾದ ಅನಿವಾರ್ಯತೆಗೆ ಒಳಗಾಗಿವೆ.

Advertisement

ಈ ಕುರಿತಂತೆ, ಕೇಂದ್ರ ಹಣಕಾಸು ಇಲಾಖೆ ನಿರ್ದೇಶನ ನೀಡಿದೆ. ಜು. 1ರಿಂದ ಅಧಿಕೃತವಾಗಿ ಜಾರಿಗೆ ಬರಲಿರುವ ಈ ಸೂಚನೆ, ಖುದ್ದು ಹಣಕಾಸು ಇಲಾಖೆಗೂ ಅನ್ವಯವಾಗಲಿದ್ದು, ನಾಗರಿಕ ವಿಮಾನಯಾನ, ಕಲ್ಲಿದ್ದಲು, ವಾಣಿಜ್ಯ, ಡಿಪಿಐಐಟಿ, ಕಾರ್ಪೊರೇಟ್‌ ವ್ಯವಹಾರಗಳು, ಕೇಂದ್ರ ಗೃಹ ಇಲಾಖೆ, ರಕ್ಷಣಾ ಇಲಾಖೆಯ ಹಣಕಾಸು ವಿಭಾಗ, ಆಹಾರ ಸಂಸ್ಕರಣೆ, ಮೀನುಗಾರಿಗೆ, ಬೃಹತ್‌ ಕೈಗಾರಿಕೆ ಸೇರಿದಂತೆ ಬಹುತೇಕ ಎಲ್ಲಾ ಇಲಾಖೆಗಳೂ ಇದರ ವ್ಯಾಪ್ತಿಗೆ ಒಳಪಡುತ್ತವೆ.

ಆದರೆ, ಕೊರೊನಾ ಹಿನ್ನೆಲೆಯಲ್ಲಿ ಕಚೇರಿಗಳ ನೈರ್ಮಲ್ಯಿಕರಣದ ಖರ್ಚನ್ನು ಈ ಸೂಚನೆಯಿಂದ ಹೊರಗಿಡಲಾಗಿದೆ.

ಇದನ್ನೂ ಓದಿ :ವಿದ್ಯಾರ್ಥಿಗಳಗೆ 10 ಲಕ್ಷ ರೂ. ಮೌಲ್ಯದ ಕ್ರೆಡಿಟ್‌ ಕಾರ್ಡ್‌ ಬಿಡುಗಡೆ : ಮಮತಾ ಬ್ಯಾನರ್ಜಿ

Advertisement

Udayavani is now on Telegram. Click here to join our channel and stay updated with the latest news.

Next