ಶಿರ್ವ: ಮಾನವನಿಗೆ ಜೀವನದಲ್ಲಿ ಆರ್ಥಿಕತೆ ಎಷ್ಟು ಪ್ರಾಮುಖ್ಯವೋ ಅಷೇr ಆರೋಗ್ಯವೂ ಅತೀ ಮುಖ್ಯವಾಗಿದೆ. ಕೇವಲ ಕೈಗೆ ಮತ್ತು ತಲೆಗೆ ಕೆಲಸ ಕೊಡುವ ಬ್ಯಾಂಕಿನ ಸಿಬಂದಿಗಳಿಗೆ ದೈಹಿಕ ಕ್ಷಮತೆಗೆ ಕ್ರೀಡಾಕೂಟ ಆಯೋಜಿಸುವುದು ಶ್ಲಾಘನೀಯ. ಕ್ರೀಡೆಯ ಮೂಲಕ ಎಲ್ಲರಿಗೂ ಆರೋಗ್ಯ ಮತ್ತು ಆಯುಷ್ಯ ವೃದ್ಧಿಯಾಗಲಿ ಎಂದು ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ತಿನ ಆಗಮ ಪಂಡಿತ ವೇ|ಮೂ| ಕುತ್ಯಾರು ಕೇಂಜ ಶ್ರೀಧರ ತಂತ್ರಿ ಹೇಳಿದರು.
ಅವರು ಶನಿವಾರ ಶಿರ್ವದ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ಅಖೀಲ ಭಾರತ ವಿಜಯಾ ಬ್ಯಾಂಕ್ ಅಧಿಕಾರಿಗಳ ಸಂಘದ ವಾರ್ಷಿಕ ಕ್ರೀಡಾಕೂಟ-2017ರಲ್ಲಿ ಬಹುಮಾನ ವಿತರಿಸಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಉದ್ಯಮಿ ಗ್ರೆಗೊರಿ ಮೆನೇಜಸ್ ಮಾತನಾಡಿದರು.ವಿಜಯಾ ಬ್ಯಾಂಕ್‌ನ ಉಡುಪಿ ಮುಖ್ಯ ಶಾಖೆಯ ಸಹಾಯಕ ಮಹಾ ಪ್ರಬಂಧಕರಾದ ವಿಜಯಾ ಪಿ. ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ವಿಜಯಾ ಬ್ಯಾಂಕ್ ಅಧಿಕಾರಿ ಸದಾನಂದ ಶೆಟ್ಟಿ, ವಿಜಯಾ ಬ್ಯಾಂಕಿನ ಚೀಫ್ ಮೆನೇಜರ್‌ಗಳಾದ ಜಿಲಾನಿ ಬಾಷಾ, ರಂಜನ್ ಶೆಟ್ಟಿ,ಮತ್ತು ಅಶೋಕ್ ರಾಥೋಡ್ ಉಪಸ್ಥಿತರಿದ್ದರು.
ಪೂರ್ವಾಹ್ನ ಕ್ರೀಡಾಕೂಟದ ಉದ್ಘಾಟನೆಯನ್ನು ವಿಜಯಾ ಬ್ಯಾಂಕಿನ ರೀಜನಲ್ ಮೇನೇಜರ್ ಎಮ್.ಜೆ ನಾಗರಾಜ್ ನೆರವೇರಿಸಿದ್ದರು. ರೋಬರ್ಟ್‌ಮಚಾದೊ ಮತ್ತು ನೊರ್ಬರ್ಟ್ ಮಚಾದೊ ಮುಖ್ಯ ಅತಿಥಿಗಳಾಗಿದ್ದರು.
ಪುರುಷರು ಹಾಗೂ ಮಹಿಳೆ ಯರಿಗಾಗಿ ನಡೆದ ಕ್ರಿಕೆಟ್ ಮತ್ತು ತೋÅಬಾಲ್ ಪಂದ್ಯಾಟದಲ್ಲಿ ಅನು ಕ್ರಮವಾಗಿ ಪುರುಷರ ಕ್ರಿಕೆಟ್‌ನಲ್ಲಿ ಉಡುಪಿ ಸಿಟಿ ತಂಡ ಪ್ರಥಮ ಮತ್ತು ಕುಂದಾಪುರ ತಂಡ ದ್ವಿತೀಯ ಸ್ಥಾನದೊಂದಿಗೆ ಪರ್ಯಾಯ ಫಲಕವನ್ನು ಗಳಿಸಿಕೊಂಡವು. ಮಹಿಳೆ ಯರ ತೋÅಬಾಲ್‌ನಲ್ಲಿ ವಿಜಯಾ ಪಿ. ಶೆಟ್ಟಿ ತಂಡ ಪ್ರಥಮ ಮತ್ತು ಅನಿಲ ಪಿ.ಶೆಟ್ಟಿ ತಂಡ ದ್ವಿತೀಯ ಸ್ಥಾನ ಹಾಗೂ ಪರ್ಯಾಯ ಫಲಕವನ್ನು ಗಳಿಸಿಕೊಂಡರು.ಸರಣಿ ಶ್ರೇಷ್ಠ
ಪ್ರಶಸ್ತಿಯನ್ನು ಸುಧೀಂದ್ರ ಪೈ ಮತ್ತು ಪಂದ್ಯಶ್ರೇಷ್ಟ ಪ್ರಶಸ್ತಿಯನ್ನು ಮಧುಸೂದನ ರೈ, ನಾಗೇಶ್, ಸುಧೀಂದ್ರ ಪೈ ಮತ್ತು ಗೋಪಾಲ್ ರಾಜು ಪಡೆದುಕೊಂಡರು.
ವಿಜಯಾ ಬ್ಯಾಂಕ್ ಅಧಿಕಾರಿಗಳ ಸಂಘದ ರೀಜನಲ್ ಸೆಕ್ರೆಟರಿ ಸುಕೇಶ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು. ದಿಲ್‌ಶಾ ವಂದಿಸಿದರು.