Advertisement
ಶನಿವಾರ ನಗರದ ಕೃಷಿ ವಿಶ್ವವಿದ್ಯಾನಿಲಯದ ಬಿಎಸ್‌ಎಚ್ ಕಾಲೇಜಿನ ಆಡಿಟೋರಿಯಂ ನಾರ್ತ್ ವಿಂಗ್‌ನಲ್ಲಿ ಆಯೋಜಿಸಿದ್ದ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಹಮ್ಮಿಕೊಂಡ “ನನ್ನ ಪಾಲಿಸಿ ನನ್ನ ಕೈಯಲ್ಲಿ’ ಬೆಳೆ ವಿಮೆ ಪಾಲಿಸಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹವಾಮಾನ ವೈಪರೀತ್ಯದಿಂದ ಕೆಲವೊಮ್ಮ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಬೆಳೆ ಕೈ ಸೇರದೆ ರೈತರು ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಅಂಥ ರೈತರು ಸೃದೃಢವಾಗಿರಲು ಸರಕಾರದಿಂದ ಅಗತ್ಯವಿರುವ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಬೆಳೆ ವಿಮೆಗೆ ರೈತರು ಹಿಂಗಾರು ಶೇ. 1.50 ಹಾಗೂ ಮುಂಗಾರು ಶೇ.2ರಷ್ಟು ಪಾವತಿ ಮಾಡುತ್ತಾರೆ. ಉಳಿದ ಹಣವನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ಪಾವತಿಸುತ್ತಿದೆ. ಇದುವರೆ 15 ಲಕ್ಷಕ್ಕಿಂತ ಹೆಚ್ಚು ರೈತರು ಬೆಳೆ ವಿಮೆ ಮಾಡಿದ್ದಾರೆ ಎಂದರು.
ಇಲಾಖೆಯ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.