Advertisement
ನಗರದ ಪೀಪಲ್ಸ್ ಪಾರ್ಕ್‌ನ ಸರ್ಕಾರಿ ಬಾಲಕಿಯರ ಶಾಲೆಯ ವಿದ್ಯಾರ್ಥಿನಿಯರು ಕಳೆದ ಅಕ್ಟೋಬರ್‌ನಲ್ಲಿ ಹರಿಯಾಣದಲ್ಲಿ ನಡೆದ ಅರ್ಬನ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ಆಯೋಜಿಸಿದ್ದ ನ್ಯಾಷನಲ್ ಅರ್ಬನ್ ಗೇಮ್ಸ್-2017(ಅಖೀಲ ಭಾರತ ಚಾಂಪಿಯನ್‌ಷಿಪ್)ನಲ್ಲಿ ಚಿನ್ನದ ಪದಕ ಗೆದ್ದು, ಆ ಮೂಲಕ 2018ರ ಜ.27, 28ರಂದು ನೇಪಾಳದ ಕಠ್ಮಂಡುವಿನಲ್ಲಿ ನಡೆಯುವ ಇಂಡೋ-ನೇಪಾಳ ಅರ್ಬನ್ ಗೇಮ್ಸ್ ಸ್ಪರ್ಧೆಯಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದಾರೆ. ಆದರೆ, ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾಗವಹಿಸಲು ಲಕ್ಷಾಂತರ ರೂ. ಅಗತ್ಯವಿದ್ದು ಈ ಅವಕಾಶ ಲಭಿಸಲಿದೆಯೇ ಎಂದು ಎದುರು ನೋಡುತ್ತಿದ್ದಾರೆ.
Related Articles
Advertisement
ನಿರಾಶೆ ಹೊಂದುತ್ತಾರೆ: ನಮ್ಮ ಶಾಲೆಯ ವಿದ್ಯಾರ್ಥಿನಿಯರು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಲು 2ನೇ ಬಾರಿಯೂ ಅರ್ಹತೆ ಪಡೆದಿದೆ. ಈ ಬಾರಿಯಾದರೂ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸದಿದ್ದರೆ ಉತ್ಸಾಹ ಕಳೆದುಕೊಳ್ಳಲಿದ್ದಾರೆ ಎಂದು ಶಾಲೆಯ ದೈಹಿಕ ಶಿಕ್ಷಕ ಮೊಹಮದ್ ರಫೀಕ್ ಪಾಷಾ ಹೇಳುತ್ತಾರೆ.
ಸುಮಾರು 6 ಲಕ್ಷ ರೂ.,ಅಗತ್ಯ: ನಮ್ಮ ಶಾಲೆಯ ಮಕ್ಕಳು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಆದರೆ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ 15 ಮಂದಿ ಸ್ಪರ್ಧಿಗಳು ಭಾಗವಹಿಸಲು ಅಂದಾಜು 6 ಲಕ್ಷ ರೂ.ಗಳ ಅಗತ್ಯವಿದೆ.
ಆದರೆ, ಹಣದ ಸಮಸ್ಯೆ ಎದುರಾಗಿದ್ದು, ಆರ್ಥಿಕ ನೆರವಿಗಾಗಿ ಪ್ರಯತ್ನ ಪಡೆಯಲಾಗುತ್ತಿದೆ. ಹಣದ ನೆರವು ಲಭಿಸಿದರೆ ನಮ್ಮ ತಂಡದ ಆಟಗಾರರು ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ ಎಂದು ದೈಹಿಕ ಶಿಕ್ಷಕ ಮೊಹಮದ್ ರಫೀಕ್ ಪಾಷಾ ಮನವಿ ಮಾಡಿದ್ದಾರೆ.
ದೇಶಕ್ಕೆ ಪದಕ ತರುತ್ತೇವೆ: ಶಾಲೆಯ ಕಬಡ್ಡಿ ತಂಡ ನಾಯಕಿ ಸುಲ್ತಾನ, ಕಠಿಣ ಪರಿಶ್ರಮ, ಸತತ ಪ್ರಯತ್ನದಿಂದ ನಮಗೆ ಅವಕಾಶ ಲಭಿಸಿದೆ. ಈ ಹಿಂದೆ ರಾಷ್ಟ್ರೀಯ ಗ್ರಾಮೀಣ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಾಗ ಅವಕಾಶ ಸಿಕ್ಕಿದ್ದರೂ,
ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾಗವಹಿಸಲು ಸಾಧ್ಯವಾಗದಿರುವುದು ತಂಡದ ವಿದ್ಯಾರ್ಥಿನಿಯರಿಗೆ ನಿರಾಸೆ ಮೂಡಿಸಿದೆ. ಆದರೆ, ಈ ಬಾರಿ ಅವಕಾಶ ಲಭಿಸಿದರೆ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನದ ಮೂಲಕ ದೇಶಕ್ಕೆ ಪದಕ ತಂದುಕೊಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
* ಸಿ.ದಿನೇಶ್