ಮೈಸೂರು: ಕೇಂದ್ರ 20 ಲಕ್ಷ ಕೋಟಿ ರೂ.ಆರ್ಥಿಕ ಪ್ಯಾಕೇಜ್ ಘೋಷಿಸಿದ್ದು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ ಅಭಿವೃದ್ಧಿ, ಉದ್ಯೋಗ ಸೃಷ್ಟಿಗೆ ಅನುಕೂಲ ಮಾಡಿಕೊಡಲಿದೆ ಎಂದು ಸಂಸದ ಪ್ರತಾಪ್ ಸಿಂಹ ಅಭಿಪ್ರಾಯಪಟ್ಟರು. ಸುದ್ದಿಗಾರರೊಂದಿಗೆ ಮಾತನಾಡಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳವರು ಸಂಕಷ್ಟಕ್ಕೀಡಾಗಿದ್ದಾರೆ. ಅವ ರಿಗೆ ಇದು ಅನುಕೂಲವಾಗಲಿದೆ. ನಮ್ಮಲ್ಲಿ ಕೈಗಾರಿಕೆಗಳು ಅಭಿವೃದ್ಧಿಯಾಗಬೇಕು, ಭಾರತದ ಯುವಕರಿಗೆ ಕೆಲಸ ಸಿಗಬೇಕು. ಇದಕ್ಕೆ ಪೂರಕವಾಗಿ ದೊಡ್ಡ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ ಎಂದರು.
ಸ್ವಚ್ಛ ಭಾರತದ ವಿರೋಧಿಗಳು: ಸೂಯೇಜ್ ಫಾರಂ ವಿಚಾರವಾಗಿ ಪಬ್ಲಿಕ್ ಒಪಿನಿಯನ್ ಕೇಳಿಲ್ಲ, ಅರ್ಧ ಮುಕ್ಕಾಲು ಕೆಲಸ ಹೇಗೆ ಮುಗಿಸಿದ್ದಾರೆ ಎಂದು ಶಾಸಕ ರಾಮದಾಸ್ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪಬ್ಲಿಕ್ ಹಿಯರಿಂಗ್ ಆಗಿಲ್ಲ ಅಂತ ಶಾಸಕ ರಾಮದಾಸ್ ಅವರು ಹೇಳಿರೋದನ್ನೇ ನಂಬಲು ಸಾಧ್ಯವಾಗುತ್ತಿಲ್ಲ, ಯಾಕೆಂ ದರೆ ನಾಲ್ಕು ಸಲ ಶಾಸಕರಾಗಿರುವಂತಹವರು, ಸಚಿವ ರಾಗಿದ್ದವರು,
ಕಾರ್ಪೋರೇಷನ್ ಚುನಾವಣೆ ಮತ್ತು ಪದವೀಧರರ ಕ್ಷೇತ್ರದಿಂದಲೂ ಹಿಂದೆ ಸ್ಪರ್ಧಿಸಿದ್ದಂತವರು, ಅವರಿಗೆ ಈ ವಿಚಾರ ಗೊತ್ತಿಲ್ಲ ಅಂದರೆ ನಂಬಲ ಸಾಧ್ಯ ಎಂದರು. ಯಾವುದಾದರೂ ಹೊಸ ಯೋಜನೆ ಬರತ್ತೆ ಅಂತಾದರೆ ಅದು ಪರಿಸರಕ್ಕೆ ಹಾನಿ ಮಾಡುತ್ತಾ? ಮಾಲಿನ್ಯ ಉಂಟುಮಾಡುತ್ತಾ ಅನ್ನೊದನ್ನು ತಿಳಿಯುವುದಕ್ಕೋಸ್ಕರ ಡೀಸಿ ನೇತೃತ್ವದಲ್ಲಿ ಪರಿಸರ ನಿಯಂತ್ರಣ ಮಂಡಳಿ ನೋಟಿಸ್ ಕೊಟ್ಟು ಜನರ ಅಭಿಪ್ರಾಯವನ್ನು ಸಂಗ್ರಹಿಸೋದಕ್ಕೆ ಆರಂಭಿಸಲಾಗುತ್ತದೆ.
ಆದರೆ, ಇದು ಹೊಸ ಯೋಜನೆ ಅಲ್ಲ, ಎಕ್ಸೆಲ್ ಪ್ಲಾಂಟ್ ಹೊಸ ಯೋಜನೆ ಅಲ್ಲ. 30ವರ್ಷದಿಂದ ಇದೆ. ರಂದೀಪ್ ಅವರು ಡೀಸಿ ಆಗಿದ್ದಾಗಲೇ 2017ರಲ್ಲಿ ರಿ ಮಾಡಲಿಂಗ್ ಮಾಡುವಾಗಲೂ ಸಭೆ ಮಾಡಿದ್ದಾರೆ. ಕೆಸರೆ ಮತ್ತು ರಾಯನ ಕೆರೆನಲ್ಲೂ ಹೊಸ ಪ್ಲಾಂಟ್‌ಗಳನ್ನು ಹಾಕುವಾಗ ಪಬ್ಲಿಕ್ ಹಿಯರಿಂಗ್ ಆಗಿದೆ. ಜನರು ಅಭಿಪ್ರಾಯ ನೀಡಿಯೂ ಆಗಿದೆ. ಇನ್ನು ಹೊಸ ಪಬ್ಲಿಕ್ ಹಿಯರಿಂಗ್ ಯಾವುದು ಅಂತ ನನಗಂತೂ ಅರ್ಥವಾಗುತ್ತಿಲ್ಲ. ಅವರೇ ನನಗೆ ತಿಳಿಸಬೇಕು ಎಂದು ವ್ಯಂಗ್ಯವಾಡಿದರು.
2018ರ ಫೆಬ್ರವರಿಯಲ್ಲಿ ರಾಮದಾಸ್ ಅವರು ಕಸದ ಸಮಸ್ಯೆ ಕುರಿತು ಉಪವಾಸ ಕುಳಿತು ಪರಿಹಾರ ಕೊಡಿಸಿ ಅಂತ ಕುಳಿತ್ತಿದ್ದರು. ನಾನೇ ಖುದ್ದಾಗಿ ಮೀಟಿಂಗ್ ಮಾಡಿ ಬಂದು ಡೀಸಿಯವರನ್ನು ಜೊತೆಗೆ ಕರೆತಂದು ಎಳೆನೀರು ಕುಡಿಸಿ ಭರವಸೆ ಕೊಡಿಸಿ ಮುಕ್ತಿ ಹಾಡುವ ಭರವಸೆ ಕೊಟ್ಟಿದ್ದೆ.
-ಪ್ರತಾಪ್ ಸಿಂಹ, ಸಂಸದ