Advertisement

ಆರ್ಥಿಕತೆ ವೃದ್ಧಿ 

11:34 PM Jan 12, 2023 | Team Udayavani |

ಹೊಸದಿಲ್ಲಿ: ಹಣದುಬ್ಬರ ಇಳಿಕೆ ಮತ್ತು ಅಭಿವೃದ್ಧಿಯ ಪ್ರಮಾಣ ಏರಿಕೆ. ಜಗತ್ತಿನ ಹಲವು ರಾಷ್ಟ್ರಗಳಿಗೆ ಆರ್ಥಿಕ ಹಿಂಜರಿತ ಕಾಡಲಿದೆ ಎಂಬ ಆತಂಕ ಉಂಟಾಗಿದ್ದರೂ ಗುರುವಾರ 2 ವಿಚಾರಗಳಲ್ಲಿ ತೃಪ್ತಿ ದಾಯಕ ಅಂಶ ಪ್ರಕಟವಾಗಿದೆ.

Advertisement

ಕೇಂದ್ರ ಸರ‌ಕಾ ರದ ದತ್ತಾಂಶಗಳ ಪ್ರಕಾರ ಗ್ರಾಹಕ ಮಾರುಕಟ್ಟೆ ಆಧಾ ರಿತ ಚಿಲ್ಲರೆ ಮಾರಾಟ ಹಣದುಬ್ಬರ ಪ್ರಮಾಣ ಒಂದು ವರ್ಷದ ಕಡಿಮೆ ಅಂದರೆ ಶೇ.5.72ಕ್ಕೆ ಇಳಿಕೆಯಾಗಿದೆ. ತರಕಾರಿಗಳ ಬೆಲೆ ಸಹಿತ ಅಗತ್ಯ ವಸ್ತುಗಳ ಬೆಲೆಯಲ್ಲಿ ಇಳಿಕೆಯಾದ ಹಿನ್ನೆಲೆಯಲ್ಲಿ ಹಣದುಬ್ಬರ ಪ್ರಮಾಣ ತಗ್ಗಿದೆ. ರಾಷ್ಟ್ರೀಯ ಸಾಂಖೀÂಕ ಕಚೇರಿ ಈ ಮಾಹಿತಿ ನೀಡಿದ್ದು, ನವೆಂಬರ್‌ನಲ್ಲಿ ಹಣದುಬ್ಬರ ಪ್ರಮಾಣ ಶೇ.5.88 ಆಗಿತ್ತು. ಸತತ 2ನೇ ಬಾರಿಗೆ ಹಣದುಬ್ಬರ ಇಳಿಕೆಯಾದಂತಾಗಿದೆ. 2021ರ ಡಿಸೆಂಬರ್‌ನಲ್ಲಿ ಶೇ.5.66 ಆಗಿತ್ತು.

ಐಐಪಿ ಏರಿಕೆ: ಮತ್ತೂಂದೆಡೆ ದೇಶದ ಕೈಗಾರಿಕ  ಉತ್ಪಾದನೆ (ಐಐಪಿ) ಕೂಡ ಐದು ತಿಂಗಳ ದಾಖಲೆ ಪ್ರಮಾಣಕ್ಕೆ ಏರಿಕೆಯಾಗಿದೆ. 2022ರ ನವೆಂಬರ್‌ಗೆ ಸಂಬಂಧಿಸಿದಂತೆ ಐಐಪಿ ಶೇ.7.1 ಆಗಿದೆ. ಅಕ್ಟೋಬರ್‌ನಲ್ಲಿ ಅದು ಶೇ.4.2ಕ್ಕೆ ಕುಸಿದಿತ್ತು. ಗಣಿ,  ವಿದ್ಯುತ್‌, ಗ್ರಾಹಕರಿಗೆ ಬೇಕಾಗುವ ಉತ್ಪನ್ನಗಳ ಪೂರೈಕೆಯಲ್ಲಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಐಐಪಿ ಸೂಚ್ಯಂಕ ವೃದ್ಧಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next