Advertisement

ದೇಶದ ಆರ್ಥಿಕ ಬೆಳವಣಿಗೆ ನಿಧಾನವಾಗಿದೆ, ಆದರೆ ಆರ್ಥಿಕ ಕುಸಿತ ಇಲ್ಲ: ನಿರ್ಮಲಾ ಸೀತಾರಾಮನ್

09:33 AM Nov 28, 2019 | Team Udayavani |

ನವದೆಹಲಿ: ಆರ್ಥಿಕ ಅಭಿವೃದ್ಧಿ ಪ್ರಗತಿ ನಿಧಾನವಾಗಿದೆ, ಆದರೆ ದೇಶದ ಆರ್ಥಿಕತೆ ಕುಸಿತ ಕಂಡಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ತಿಳಿಸಿದ್ದಾರೆ.

Advertisement

ದೇಶದ ಆರ್ಥಿಕ ಪರಿಸ್ಥಿತಿ ಹೇಗಿದೆ ಎಂಬ ಕುರಿತು ರಾಜ್ಯಸಭೆಯಲ್ಲಿ ನಡೆದ ಚರ್ಚೆಯ ವೇಳೆ ನಿರ್ಮಲಾ ಸೀತಾರಾಮನ್ ಈ ಪ್ರತಿಕ್ರಿಯೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.

ಭಾರತದ ಜಿಡಿಪಿ(ಒಟ್ಟು ದೇಶೀಯ ಉತ್ಪಾದನಾ) ಬೆಳವಣಿಗೆ ದರ 2009ರಿಂದ 2014ರವರೆಗೆ ಶೇ.6.4ರಷ್ಟಿತ್ತು. 2014ರಿಂದ 2019ರ ನಡುವೆ ಅದು ಶೇ.7.5ರಷ್ಟಿತ್ತು ಎಂದು ಸೀತಾರಾಮನ್ ವಿವರಣೆ ನೀಡಿದ್ದಾರೆ. ಒಂದು ವೇಳೆ ನೀವು ಆರ್ಥಿಕತೆಯನ್ನು ಬೇರೆಯ ದೃಷ್ಟಿಕೋನದಲ್ಲಿ ನೋಡಿದರೆ ಬೆಳವಣಿಗೆ ನಿಧಾನಗತಿಯಲ್ಲಿದ್ದಂತೆ ಆಗುತ್ತದೆ. ಆದರೆ ಆರ್ಥಿಕ ಹಿಂಜರಿತ ಇಲ್ಲ. ಅಷ್ಟೇ ಅಲ್ಲ ಮುಂದೆಯೂ ದೇಶದಲ್ಲಿ ಆರ್ಥಿಕ ಕುಸಿತ ಸಂಭವಿಸುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next