Advertisement

“ಆರ್ಥಿಕ ಗ್ರಹಣ’ಶೀಘ್ರ ಪರಿಹಾರವಾಗಲಿ: ಸೂರ್ಯಪ್ರಕಾಶ್‌ ಹಾರೈಕೆ

10:08 AM Dec 28, 2019 | Lakshmi GovindaRaj |

ಉಡುಪಿ: ಸೂರ್ಯಗ್ರಹಣ ಕೆಲವೇ ತಾಸುಗಳಲ್ಲಿ ನಿವಾರಣೆಯಾಗುತ್ತದೆ. ಈಗ ಬಂದಿರುವ ಆರ್ಥಿಕ ಗ್ರಹಣವೂ ಆದಷ್ಟು ಶೀಘ್ರ ಪರಿಹಾರವಾಗುವಂತಾಗಲಿ ಎಂದು ಪ್ರಕಾಶ್‌ ರೀಟೇಲ್‌ ಪ್ರೈ.ಲಿ.ಆಡಳಿತ ನಿರ್ದೇಶಕ ಕೆ.ಸೂರ್ಯಪ್ರಕಾಶ್‌ ಆಶಯ ವ್ಯಕ್ತಪಡಿಸಿದರು.

Advertisement

“ಉದಯವಾಣಿ’ – ಎಸ್‌.ಎಲ್‌. ಶೇಟ್‌ ಡೈಮಂಡ್‌ ಹೌಸ್‌, ಲೇಡಿಹಿಲ್‌ ಮಂಗಳೂರು ಪ್ರಾಯೋಜಕತ್ವದಲ್ಲಿ “ಉದಯವಾಣಿ’ – ದೀಪಾವಳಿ ಧಮಾಕಾ 2019 ಇದರ ಅದೃಷ್ಟಶಾಲಿಗಳನ್ನು ಸೂರ್ಯಪ್ರಕಾಶ್‌ ಅವರು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಿ ಮಾತನಾಡಿ ದರು. ಆರ್ಥಿಕ ಗ್ರಹಣಕ್ಕೆ ಕಾಲದ ಪರಿಮಿತಿ ಇಲ್ಲ. ನಮ್ಮ ಆರ್ಥಿಕತೆ ಆದಷ್ಟು ಶೀಘ್ರ ಚೇತರಿಸಿಕೊಳ್ಳು ವಂತಾಗಬೇಕು. ಉದ್ಯಮಿಗಳು ಇದಕ್ಕೆ ಹೆದರುವುದಿಲ್ಲ. ಆಗುತ್ತಿದ್ದ ಹೆಚ್ಚು ವರಿ ಖರ್ಚು ತಪ್ಪಿಸುವುದು, ದಕ್ಷತೆ ಹೆಚ್ಚಿಸಿಕೊಳ್ಳುವುದು, ತಮ್ಮ ಕೊರತೆಗಳನ್ನು ಸರಿಪಡಿಸಿ ಕೊಳ್ಳುವುದು ಮೊದಲಾದ ಕ್ರಮಗಳನ್ನು ಅಳವಡಿಸಲಾಗುತ್ತಿದೆ ಎಂದರು.

“ಉದಯವಾಣಿ’ ಮತ್ತು ಹರ್ಷ ಶೋರೂಮ್‌ ಸಂಸ್ಥೆಯ ಸಂಬಂಧವನ್ನು ಮೆಲುಕು ಹಾಕಿದ ಸೂರ್ಯ ಪ್ರಕಾಶ್‌, ಹಿಂದೆ ಮಿಕ್ಸಿ, ಬ್ಯಾಗ್‌ ಇತ್ಯಾದಿ ಸಾಮಾನ್ಯ ಉಪ ಕರಣಗಳನ್ನು ಜನಪ್ರಿಯಗೊಳಿಸಲು “ಉದಯ ವಾಣಿ’ ಆಡಳಿತದಾರರಾದ ಟಿ.ಮೋಹನ ದಾಸ್‌ ಪೈ, ಟಿ.ಸತೀಶ್‌ ಪೈಯವರು ನಮಗೆ ಅನೇಕ ಅನುಕೂಲತೆ ಗಳನ್ನು ಮಾಡಿ ಕೊಟ್ಟರು. ನಮ್ಮ ನಡುವಿನ ಸಂಬಂಧ ವ್ಯಾಪಾರ ವಹಿವಾಟಿಗಿಂತ ಮಿಗಿಲಾದುದು. ಇವರೆಲ್ಲ ನಮಗೆ ಪ್ರಾತ: ಸ್ಮರಣೀ ಯರು ಎಂದು ಸೂರ್ಯಪ್ರಕಾಶ್‌ ಬಣ್ಣಿಸಿದರು.

ಇದು ಸ್ಮರಣೀಯ ದಿನ: ಇನ್ನು 2-3 ದಿನಗಳಲ್ಲಿ “ಉದಯವಾಣಿ’ 50ನೇ ವರ್ಷಕ್ಕೆ ಕಾಲಿಡುತ್ತಿರುವುದ ರಿಂದ ಇದು ಸ್ಮರಣೀಯ ದಿನ. “ಉದಯವಾಣಿ’ಯ ಬಳಿಕ ತರಂಗ, ತುಷಾರ, ರೂಪತಾರಾ, ತುಂತುರು ಗಳನ್ನು ಹೊರತಂದಂತೆ “ಹರ್ಷ’ವೂ ಹೊಸ, ಹೊಸ ಶಾಖೆಗಳನ್ನು ತೆರೆದು ಬೆಳೆದು ನಿಂತಿದೆ ಎಂದು ಮಣಿಪಾಲ್‌ ಮೀಡಿಯ ನೆಟ್‌ವರ್ಕ್‌ ಲಿ.ಸಿಇಒ ವಿನೋದ ಕುಮಾರ್‌ ಹರ್ಷ ವ್ಯಕ್ತಪಡಿಸಿದರು.

ದೀಪಾವಳಿ ವಿಶೇಷಾಂಕವು ಗುಣಮಟ್ಟವನ್ನು ಕಾಯ್ದು ಕೊಂಡು ಬಂದಿರುವುದರಿಂದ ಕೇವಲ ಕರಾವಳಿಗೆ ಸೀಮಿತವಾಗದೆ ಉತ್ತರ ಕರ್ನಾಟಕದಲ್ಲೂ ಪ್ರಭಾವವಿರು ವುದು ಸ್ಪರ್ಧಾಕಾಂಕ್ಷಿಗಳ ಪಟ್ಟಿ ನೋಡಿ ದರೆ ತಿಳಿಯುತ್ತದೆ. ಈಗ ಯೂರೋಪ್‌, ಅಮೆರಿಕಗಳಲ್ಲಿ ಹೈಪರ್‌ ಲೋಕಲ್‌ ಜರ್ನಲಿಸಂ ಕಾಲಿಡುತ್ತಿರುವಾಗ 50 ವರ್ಷಗಳ ಹಿಂದೆಯೇ “ಉದಯವಾಣಿ’ ಕರ್ನಾಟಕದ ಕರಾವಳಿಯಲ್ಲಿ ಸ್ಥಳೀಯ ಉದ್ಯಮ,

Advertisement

ಸಂಸ್ಕೃತಿ, ಜನರ ಆಶೋತ್ತರ ಗಳನ್ನು ಈಡೇರಿಸುವ ಹೈಪರ್‌ ಲೋಕಲ್‌ ಪತ್ರಿಕಾರಂಗ ವನ್ನು ಪರಿಚಯಿಸಿ ದಾಖಲೆ ಮಾಡಿದೆ ಎಂದು ಮಣಿಪಾಲ ಆವೃತ್ತಿಯ ಸಂಪಾದಕ ಅರವಿಂದ ನಾವಡ ಹೇಳಿದರು. ಮ್ಯಾಗಜಿನ್‌ ವಿಭಾಗದ ರಾಷ್ಟ್ರೀಯ ಮುಖ್ಯಸ್ಥ ಆನಂದ್‌ ಕೆ.ಸ್ವಾಗತಿಸಿ, ಮಂಗಳೂರು ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಮಚಂದ್ರ ಮಿಜಾರು ವಂದಿಸಿದರು. ಪ್ರೊಡಕ್ಟ್ ಇವ್ಯಾಂಜಲಿಸ್ಟ್‌ ಅಶ್ವಿ‌ನಿ ಐಗಳ್‌ ಕಾರ್ಯಕ್ರಮ ನಿರ್ವಹಿಸಿದರು.

8 ಸಾವಿರ ಮಂದಿ ಭಾಗಿ: “ಉದಯವಾಣಿ’ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾದ ಪ್ರಶ್ನೆಗಳಿಗೆ ಓದುಗರು ಉತ್ತರ ಬರೆದು ಕಳುಹಿಸುವ ಸ್ಪರ್ಧೆಯಲ್ಲಿ ಸುಮಾರು 8 ಸಾವಿರ ಮಂದಿ ಭಾಗವಹಿಸಿದ್ದರು.

ದೀಪಾವಳಿ ಧಮಾಕಾ ಬಹುಮಾನ ವಿಜೇತರು
ಬಂಪರ್‌ ಬಹುಮಾನ: ಆಕಾಶ್‌ ಎಸ್‌. ಕುಲಕರ್ಣಿ, ಸತ್ತೂರು, ಧಾರವಾಡ.

ಪ್ರಥಮ ಬಹುಮಾನ: ಕು|ಅರ್ಚನಾ ಶೆಣೈ, ಹಳೆಯಂಗಡಿ.

ದ್ವಿತೀಯ ಬಹುಮಾನ: ಬಿ.ಎನ್‌. ರವೀಂದ್ರನಾಥ್‌, ಇಡ್ಯಾ, ಸುರತ್ಕಲ್‌; ಶ್ರೀರಕ್ಷಾ ಎಸ್‌. ಸುಬ್ರಹ್ಮಣ್ಯಪುರ, ಬೆಂಗಳೂರು.

ತೃತೀಯ ಬಹುಮಾನ: ಶ್ರೀದೇವಿ, ನೀಲಾವರ, ಉಡುಪಿ; ಮೀರಾ ಬಾಬುರಾಯ ಪೈ, ಥಾಣೆ, ಮುಂಬಯಿ; ಪದ್ಮಶ್ರೀ, ಕಿನ್ನಿಮೂಲ್ಕಿ, ಉಡುಪಿ.

ಸಮಾಧಾನಕರ ಬಹುಮಾನಗಳು: ಕೆ.ಶಶಿಕಲಾ ಸುಬ್ರಹ್ಮಣ್ಯ ಕಿನ್ನಿಗೋಳಿ, ಮಂಗಳೂರು; ಶ್ರೀಲಕ್ಷ್ಮೀ ಸತೀಶ್‌ ಪೈ, ಕೋಟ, ಉಡುಪಿ; ರಂಜನ್‌, ಶೇಡಿ ಮನೆ, ಕುಂದಾಪುರ; ಎಲ್‌. ಕೃಷ್ಣಮೂರ್ತಿ, ಬನ ಶಂಕರಿ, ಬೆಂಗಳೂರು; ಕು| ನೇಹಾ ನಾಯಕ್‌, ರೆಂಜಾಳ, ಕಾರ್ಕಳ; ಅನಿತಾ, ಬಾರಕೂರು, ಉಡುಪಿ; ನಳಿನಿ ಎಸ್‌.ಜೋಯಿಸ್‌, ಆರ್‌.ಎಸ್‌.ನಾಯ್ಡು ನಗರ, ಮೈಸೂರು; ವಿನಯಾ ಪಿ.ಭಟ್‌, ಮಣ್ಣಗುಡ್ಡ, ಮಂಗಳೂರು; ಮಂಜುನಾಥ ವೇ.ಶೇಟ, ವಿಜಯನಗರ, ಶಿರಸಿ; ಮಾನ್ಯಾಯು.,

ಪೆರಾಡಿ, ಬೆಳ್ತಂಗಡಿ; ಸುಬ್ರಹ್ಮಣ್ಯ ಅರ್ಚಕ ಕರವಾಡಿ, ಬೈಂದೂರು, ಉಡುಪಿ; ನಗರ ಗುರುದೇವ್‌ ಭಂಡಾರ್ಕರ್‌, ಹೊಸನಗರ, ಶಿವಮೊಗ್ಗ; ನಳಿನಾ, ನಿಟ್ಟೂರು, ಉಡುಪಿ; ಕು| ಸುಧೀಕ್ಷಾ ಬಿ., ಜಕ್ರಿಬೆಟ್ಟು, ಬಂಟ್ವಾಳ; ಎಸ್‌. ಪಾಂಡುರಂಗ ಕಾಮತ್‌, ಬೆಂದೂರುವೆಲ್‌, ಮಂಗಳೂರು; ಮಾಯಾ ಎಂ. ಕಿಣಿ,ಅನಂತನಗರ ಮಣಿಪಾಲ; ಸವಿತ, ನಿಟ್ಟೂರು, ಉಡುಪಿ; ಜ್ಯೋತಿ, ಕಾವೂರು, ಮಂಗಳೂರು; ಅಶ್ವಿ‌ನಿ ಬಿ.ಪೂಜಾರಿ, ಹಂಗಳೂರು, ಕುಂದಾಪುರ; ನಾರಾಯಣ ಕೆ.ಕೆ., ಪ್ರತಾಪನಗರ, ಮಂಗಳಪಾಡಿ.

Advertisement

Udayavani is now on Telegram. Click here to join our channel and stay updated with the latest news.

Next