Advertisement
ತಡರಾತ್ರಿ ಪ್ರತಿಭಟನಾಕಾರರು ಮತ್ತು ಪೊಲೀಸರೊಂದಿಗೆ ಘರ್ಷಣೆ ನಡೆದಿದೆ. ಪ್ರತಿಭಟನೆಯನ್ನು ಹತ್ತಿಕ್ಕಲು ಅರೆಸೇನಾ ಪೊಲೀಸ್ ಘಟಕ, ವಿಶೇಷ ಕಾರ್ಯಪಡೆಯನ್ನು ಕರೆಸಬೇಕಾಯಿತು.
Related Articles
Advertisement
ಡೀಸೆಲ್ ಖಾಲಿ: ಶ್ರೀಲಂಕಾದ ಆರ್ಥಿಕ ದುಸ್ಥಿತಿಯಿಂದ ಉಂಟಾಗಿರುವ ತೈಲ ಕ್ಷೋಭೆ ಈಗ ತಾರಕಕ್ಕೇರಿದೆ. ಇಡೀ ರಾಷ್ಟ್ರದಲ್ಲಿ ಡೀಸೆಲ್ ಖಾಲಿಯಾಗಿ, ಡೀಸೆಲ್ ಬಂಕ್‌ಗಳು ಭಣಗುವಂತಾಗಿದೆ. ಬಸ್ಸುಗಳು, ಕಾರುಗಳು, ಸರಕು ಸಾಗಣೆ ವಾಹನಗಳು, ಆ್ಯಂಬುಲೆನ್ಸ್ ಸೇರಿ ಅತ್ಯಗತ್ಯ ವಾಹನಗಳಿಗೂ ಡೀಸೆಲ್ ಇಲ್ಲದಂತಾಗಿದೆ.
“ರಿಪೇರಿಗೆ ನಿಲ್ಲಿಸಲಾಗಿರುವ ವಾಹನಗಳ ಟ್ಯಾಂಕ್‌ಗಳಿಂದ ಡೀಸೆಲ್‌ಗಳನ್ನು ತೆಗೆದು ಅವುಗಳ ಸಹಾಯದಿಂದ ಅಗತ್ಯ ಸಾರಿಗೆ ನಿರ್ವಹಿಸಲಾಗುತ್ತಿದೆ” ಎಂದು ಲಂಕಾದ ದಿಲಂ ಅಮುನುಗಮಾ ತಿಳಿಸಿದ್ದಾರೆ.
“ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಶೇ. 66ರಷ್ಟು ಆವರಿಸಿರುವ ಖಾಸಗಿ ಬಸ್ಸುಗಳ ಮಾಲೀಕರು, ಡೀಸೆಲ್ ಕೊರತೆಯಿಂದಾಗಿ, ಅಗತ್ಯ ಸೇವೆಗಳನ್ನೂ ನೀಡಲು ಸಾಧ್ಯವಾಗುತ್ತಿಲ್ಲ” ಎಂದು ಅಲವತ್ತುಕೊಂಡಿದ್ದಾರೆ. ಪೆಟ್ರೋಲ್ ಅಭಾವ ಕೂಡ ಆವರಿಸಿದ್ದು ಪೆಟ್ರೋಲ್ ಬಂಕ್‌ಗಳ ಮುಂದೆ ಬೈಕುಗಳು, ಕಾರುಗಳು ಕಿಲೋಮೀಟರ್‌ಗಟ್ಟಲೆ ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಸಾಮಾನ್ಯವೆನಿಸಿವೆ.
ವಿದ್ಯುತ್ ಕ್ಷಾಮ!: ತೈಲ ಕೊರತೆಯಿಂದಾಗಿ ವಿದ್ಯುತ್ ಉತ್ಪಾದನೆ ಕುಂಠಿತವಾಗಿದೆ. ಗುರುವಾರದಿಂದ ಲಂಕಾದೆಲ್ಲೆಡೆ ದಿನಕ್ಕೆ 13 ಗಂಟೆಗಳ ವಿದ್ಯುತ್ ನಿಲುಗಡೆ ನಿಯಮ ಜಾರಿಯಾಗಿದೆ. 2.2 ಲಕ್ಷ ಜನರಿಗೆ ತೊಂದರೆಯಾಗಿದೆ. ಲಂಕಾದ ಎಲ್ಲಾ ಊರುಗಳ ಬೀದಿದೀಪಗಳು ಸ್ತಬ್ಧವಾಗಿವೆ