Advertisement

ಮೋದಿ ಆಡಳಿತದಿಂದ ಆರ್ಥಿಕ ದುರಂತ: ಮೊಯ್ಲಿ

09:25 AM Oct 25, 2017 | Team Udayavani |

ಬೆಂಗಳೂರು: “ಪ್ರಧಾನಿ ನರೇಂದ್ರ ಮೋದಿಯವರು ನೋಟು ಅಮಾನ್ಯಿಕರಣ ಹಾಗೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನ್ನು ಪೂರ್ವಸಿದ್ಧತೆ ಇಲ್ಲದೆ ಜಾರಿಗೊಳಿಸಿದ ಪರಿಣಾಮ ಭಾರತಕ್ಕೆ ಆರ್ಥಿಕ ದುರಂತ ಸಂಭವಿಸಿದೆ’ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಟೀಕಿಸಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತದ ಅನುಭವ ಇಲ್ಲದವರ ಕೈಯಲ್ಲಿ ದೇಶದ
ಅಧಿಕಾರ ನೀಡಿದ ತಪ್ಪಿಗೆ ಆರ್ಥಿಕ ಸ್ಥಿತಿ ಅಧಃಪತನವಾಗುವಂತಾಗಿದೆ. 2009ರಿಂದಲೇ ವಿಶ್ವ ಆರ್ಥಿಕ ಹಿಂಜರಿತಕ್ಕೆ ಒಳಗಾಗಿದ್ದರೂ ಅಂದು ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ ಭಾರತದಲ್ಲಿ ಆರ್ಥಿಕತೆ ಸಮಸ್ಥಿತಿಯಲ್ಲಿರುವಂತೆ ನೋಡಿಕೊಂಡಿತ್ತು. 3 ವರ್ಷದಲ್ಲಿ ಕೇಂದ್ರದಲ್ಲಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶೇ.4 ಜಿಡಿಪಿ ಕುಸಿತ ಕಂಡಿದ್ದು, ವೇಗದ ಆರ್ಥಿಕ ಬೆಳವಣಿಗೆ ಎಂಬ ಹಣೆಪಟ್ಟಿಯನ್ನೂ ಕಳೆದುಕೊಂಡಿದ್ದೇವೆ ಎಂದು ವಿಷಾದಿಸಿದರು. ರಾಮದೇವ್‌ ಅವರ ಕಂಪನಿ ಮೋದಿ ಸರ್ಕಾರ ಬಂದ 3 ವರ್ಷದಲ್ಲಿ 300 ಕೋಟಿ ರೂ.ಗೂ ಅಧಿಕ ಆದಾಯ ಗಳಿಸಿದ್ದು, ಅವರ ವಿರುದ್ಧವೇ ಲೋಕಪಾಲ ತನಿಖೆಯಾಗಬೇಕು ಎಂದು ಆಗ್ರಹಿಸಿದರು. 

ಕರ್ನಾಟಕ ನಂಬರ್‌ 1: ಕೈಗಾರಿಕೆ ಸ್ಥಾಪನೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಮೊದಲ ಸ್ಥಾನ ಪಡೆದುಕೊಂಡಿದೆ. 2017 ರಲ್ಲಿ 1.44 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯಾಗಿದ್ದು, 1.89 ಲಕ್ಷ ಜನರಿಗೆ ಉದ್ಯೋಗ ನೀಡಲಾಗಿದೆ. ನೀರಾವರಿ ವಿಷಯದಲ್ಲೂ ಕರ್ನಾಟಕ ಮುಂಚೂಣಿಯಲ್ಲಿದೆ. ಸಿದ್ದರಾಮಯ್ಯ ಆಡಳಿತದಲ್ಲಿ ಭ್ರಷ್ಟಾಚಾರ ನಡೆದಿಲ್ಲ. ಬಿಜೆಪಿಯವರು ಮಾಡುತ್ತಿರುವ ಆಧಾರ ರಹಿತ
ಆರೋಪಗಳಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಮೊಯ್ಲಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next