Advertisement

Economic Crime: ಆರ್ಥಿಕ ಅಪರಾಧ ಪಟ್ಟಿ: ರಾಜ್ಯಕ್ಕೆ 9ನೇ ಸ್ಥಾನ

08:06 AM Dec 07, 2023 | Team Udayavani |

ಬೆಂಗಳೂರು: ನ್ಯಾಷನಲ್‌ ಕ್ರೈಂ ರೆಕಾರ್ಡ್‌ ಬ್ಯೂರೋ(ಎನ್‌ಸಿಆರ್‌ಬಿ) ಪ್ರಕಾರ ಭಾರತದಲ್ಲೇ ಕರ್ನಾಟಕ ಆರ್ಥಿಕ ಅಪರಾಧಗಳ ಪಟ್ಟಿಯಲ್ಲಿ ಒಂಭತ್ತನೇ ಸ್ಥಾನದಲ್ಲಿದ್ದು, ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಶೇ.11.2ರಷ್ಟು ವಂಚನೆ ಪ್ರಕರಣಗಳು ದಾಖಲಾಗುತ್ತಿದೆ ಎಂದು ತಿಳಿಸಿದೆ.

Advertisement

ಎನ್‌ಸಿಆರ್‌ಬಿ ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಕರ್ನಾಟಕದಲ್ಲಿ ಕಳೆದ ಮೂರು ವರ್ಷಕ್ಕೆ ಹೊಲಿಸಿದರೆ ಆರ್ಥಿಕ ಅಪರಾಧಗಳು ಹೆಚ್ಚಾಗುತ್ತಿವೆ. 2020ರಲ್ಲಿ 5,107, 2021ರಲ್ಲಿ 6,447 ಪ್ರಕರಣಗಳು ದಾಖಲಾಗಿವೆ. ಇನ್ನು ಈ ಅಂಕಿ ಅಂಶಗಳ ವಿಶ್ಲೇಷಣೆ ಪ್ರಕಾರ ರಾಜಸ್ತಾನ, ತೆಲಂಗಾಣ ಮತ್ತು ಉತ್ತರ ಪ್ರದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದ್ದು, 22 ಸಾವಿರ ಪ್ರಕರಣ ಸಂಖ್ಯೆ ಗಡಿದಾಟಿದೆ ಎಂದು ವರದಿ ತಿಳಿಸಿದೆ.

ರಾಜ್ಯದಲ್ಲಿ ಪ್ರತಿ ಒಂದು ಲಕ್ಷ ಜನರಿಗೆ ಶೇ.11.2ರಷ್ಟಿದ್ದು, ಇದೇ ವೇಳೆ ಇಂತಹ ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಸುವ ಪ್ರಮಾಣ ಶೇ.54.1ರಷ್ಟಿದೆ ಎಂದು ಎನ್‌ ಸಿಆರ್‌ಬಿ ತಿಳಿಸಿದೆ.

ಮತ್ತೂಂದೆಡೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಆರ್ಥಿಕ ಅಪರಾಧಗಳ ಪೈಕಿ ವಂಚನೆ, ನಕಲು ಹಾಗೂ ನಂಬಿಸಿ ವಂಚಿಸಿದ ಪ್ರಕರಣಗಳೇ ಅಧಿಕವಾಗಿವೆ. 2022ರಲ್ಲಿ ದಾಖಲಾದ ಆರ್ಥಿಕ ಅಪರಾಧ ಪ್ರಕರಣಗಳ ಪೈಕಿ 195 ಕೇಸ್‌ ಗಳನ್ನು ಬೇರೆ ರಾಜ್ಯ ಹಾಗೂ ಬೇರೆ ತನಿಖಾ ಸಂಸ್ಥೆಗೆ ವರ್ಗಾಯಿಸಲಾಗಿದೆ. 503 ಪ್ರಕರಣಗಳಲ್ಲಿ ಸೂಕ್ತ ದಾಖಲೆಗಳು ಹಾಗೂ ಸಾಕ್ಷ್ಯಾಧಾರಗಳ ಕೊರತೆಯಿಂದ ಪತ್ತೆಯಾಗಿಲ್ಲ ಎಂದು ಎನ್‌ಸಿಆರ್‌ಬಿ ವರದಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next