Advertisement

ಪರಿಸರ ಸಮತೋಲನಕ್ಕೆ ಎಲ್ಲ ಜೀವಿಗಳೂ ಅಗತ್ಯ

08:00 AM Mar 15, 2018 | Team Udayavani |

ಉಡುಪಿ: ಪ್ರಕೃತಿಯಲ್ಲಿ ಜೀವಿಗಳ ನಡುವೆ ಸಂಬಂಧವಿದೆ. ಹಾಗಾಗಿ ಪ್ರಕೃತಿಯಲ್ಲಿ ಸಮತೋಲನ ಇರಬೇಕಾದರೆ ಎಲ್ಲ ಜೀವಿಗಳು ಕೂಡ ಅವಶ್ಯ ಎಂದು ಉಡುಪಿ ವಲಯ ಅರಣ್ಯಾಧಿಕಾರಿ ಕ್ಲಿಫ‌ರ್ಡ್‌ ಲೋಬೋ ಹೇಳಿದರು.

Advertisement

ಮಣಿಪಾಲದ ಸಾಲುಮರದ ತಿಮ್ಮಕ ವೃಕ್ಷ ಉದ್ಯಾನವನದಲ್ಲಿ ಮಣಿಪಾಲ ಪ.ಪೂ. ಕಾಲೇಜಿನ ವತಿಯಿಂದ ಜರಗಿದ ವಿಜ್ಞಾನ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಕೃತಿಯಲ್ಲಿ ಯಾವುದೂ ಕೆಟ್ಟದು ಅಥವಾ ಅನುಪಯುಕ್ತವಾದುದು ಎಂಬುದಿಲ್ಲ. ನಮಗೆ ಉಪಯೋಗದ ದೃಷ್ಟಿಯಲ್ಲಿ ಮಾತ್ರ ನಾವು ಒಳ್ಳೆಯದು ಅಥವಾ ಕೆಟ್ಟದು ಹೇಳಬಹುದು ಎಂದು ಅವರು ಹೇಳಿದರು. 

6ರಿಂದ 9ನೇ ತರಗತಿಗಳ 206 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗಿಡ ನೆಡುವ ಮೂಲಕ ಕ್ಲಿಫ‌ರ್ಡ್‌ ಲೋಬೋ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಪ್ರೌಢಶಾಲಾ ವಿಭಾಗದ ಶಿಕ್ಷಕ ಶಿವರಾಮ ನಾಯ್ಕ  ಕಾರ್ಯಕ್ರಮ ನಿರ್ವಹಿಸಿದರು. ಶಾರದಾ ಸ್ವಾಗತಿಸಿದರು.  ವಿಜ್ಞಾನ ಶಿಕ್ಷಕ ನಾಗೇಂದ್ರ ಪೈ  ಅವರು ರಾಷ್ಟ್ರೀಯ ವಿಜ್ಞಾನ ದಿನ ಹಾಗೂ ಸಿ.ವಿ.ರಾಮನ್‌ ಅವರ ಕುರಿತು ಮಾತನಾಡಿದರು. ಶಿಕ್ಷಕಿ ತುಳಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next