Advertisement

ಪರಿಸರ ಬೆಳೆಸುವ ಮಾತು ಅಸಮಂಜಸ

01:14 PM Feb 17, 2017 | Team Udayavani |

ದಾವಣಗೆರೆ: ನಾವು ಇದುವರೆಗೆ ಪರಿಸರ ಅರ್ಥಮಾಡಿಕೊಳ್ಳುವ ಸ್ಥಿತಿಗೆ ತಲುಪಿಯೇ ಇಲ್ಲ, ಇನ್ನು ಅದನ್ನು ಬೆಳೆಸುವ ವಿಷಯ ಕುರಿತು ಮಾತನಾಡುವುದು ಅಸಮಂಜಸ ಎಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಹೇಳಿದ್ದಾರೆ. 

Advertisement

ಗುರುವಾರ ಸೇಂಟ್‌ ಜಾನ್ಸ್‌ ಕಾನ್ವೆಂಟ್‌ ಶಾಲೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ರಾಜ್ಯ  ವಿಜ್ಞಾನ ಪರಿಷತ್ತು ಇತರೆ ಇಲಾಖೆ, ಸಂಘ, ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಿ, ಮಾತನಾಡಿದರು.

ನಾವು ಪರಿಸರವನ್ನು ಇನ್ನೂ ಅರ್ಥಮಾಡಿಕೊಂಡಿಲ್ಲ. ಅದರ ಬೆಳವಣಿಗೆ ಕುರಿತು ಮಾತನಾಡುವುದು ಅರ್ಥಹೀನ ಎಂದರು. ಪರಿಸರ ಎಂಬುದು  ಸಾವಿರಾರು ವರ್ಷಗಳಿಂದ ಇರುವಂತಹುದ್ದು. ಅದನ್ನು ಉಳಿಸಿ, ಬೆಳೆಸಬೇಕಾಗಿದ್ದ ನಾವು, ಇಂದು ಸಮತೋಲನ ಹದಗೆಡುವ ಮಟ್ಟಕ್ಕೆ ಹಾಳು ಮಾಡಿದ್ದೇವೆ.

ಈಗ ನಾವು  ಅದನ್ನು ಬೆಳೆಸುತ್ತೇವೆ ಎಂಬುದು ಅಸಾಧ್ಯದ ಮಾತು. ಸೂಕ್ಷಮಟ್ಟದಲ್ಲಿ ಪರಿಸರ ಬೆಳೆಸಲು ಸಾಧ್ಯವೇ ಹೊರತು ಅದನ್ನು ಪುನಃ ಇದ್ದ ಸ್ಥಿತಿಗೆ ತರುವುದು ಆಗದ ಕೆಲಸ ಅಸಾಧ್ಯ  ಎಂದು ಅವರು ತಿಳಿಸಿದರು. ನಾವು ಏನು ಮಾಡಿದರೂ ಪರಿಸರ ಸಹಿಸಿಕೊಳ್ಳಲಿದೆ ಎಂಬುದು ಸುಳ್ಳು. ಪರಿಸರಕ್ಕೆ ತನ್ನದೇ ಆದ ಇತಿಮಿತಿಗಳಿವೆ. 

ಇದುವರೆಗೆ ನಾವು ಮಾಡಿದ  ಎಲ್ಲಾ ದೌರ್ಜನ್ಯ ತಡೆದುಕೊಂಡಿದೆ. ಇದೀಗ ಆ ಶಕ್ತಿ ಕಳೆದುಕೊಂಡಿರುವುದನ್ನು ತೋರಿಸುತ್ತಿದೆ. ಪಂಚಭೂತಗಳೆಂದು ಕರೆಯಲ್ಪಡುವ ಗಾಳಿ, ಭೂಮಿ, ನೀರು, ಆಕಾಶ,  ಬೆಂಕಿಯಂತಹ ವಿಷಯಗಳು ಪರಿಸರದಲ್ಲಿವೆ. ಅವುಗಳನ್ನು ಸರಿ ಇಟ್ಟುಕೊಂಡರೆ ಸಾಕು. 

Advertisement

ಪರಿಸರ ತಾನಾಗಿಯೇ ಸಮತೋಲನ ಕಾಪಾಡಿಕೊಳ್ಳುತ್ತದೆ. ಆದರೆ, ನಾವಿಂದು ಭೂಮಿ, ಗಾಳಿ ಮಾತ್ರವಲ್ಲ ಆಕಾಶವನ್ನೂ ಕೆಡಿಸುವ ಹಂತಕ್ಕೆ ಬಂದು ನಿಂತಿದ್ದೇವೆ ಎಂದು ಅವರು ತಿಳಿಸಿದರು. ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಆರ್‌.ಎಚ್‌. ನಾಗಭೂಷಣ ಅಧ್ಯಕ್ಷತೆ ವಹಿಸಿದ್ದರು.

ಹಿರಿಯ ಪರಿಸರ ಅಧಿಕಾರಿ ಎಂ.ಕೆ. ಪ್ರಭುದೇವ್‌, ವಿಜ್ಞಾನ ಪರಿಷತ್‌ ಅಧ್ಯಕ್ಷ ಪ್ರೊ. ವೈ. ವೃಷಭೇಂದ್ರಪ್ಪ, ದಾವಿವಿ ಸಿಂಡಿಕೇಟ್‌ ಸದಸ್ಯ ಡಾ|  ಎಚ್‌. ವಿಶ್ವನಾಥ್‌, ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಗಿರೀಶ್‌ ದೇವರಮನಿ, ಅಮೃತ ಯುವಕ ಸಂಘದ ಅಧ್ಯಕ್ಷ ಆರ್‌.ಬಿ. ಹನುಮಂತಪ್ಪ, ಸಹಾಯಕ ಪರಿಸರ ಅಧಿಕಾರಿ  ಗಣಪತಿ ಹೆಗಡೆ ಇತರರು ವೇದಿಕೆಯಲ್ಲಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next