Advertisement

ಗ್ರಹಣ ಮೋಕ್ಷ ಕಾಲ ಗೊಂದಲ; ಸ್ವರ್ಣವಲ್ಲೀ‌ ಮಠ ಮರು‌ ಪ್ರಕಟನೆ

07:54 PM Oct 23, 2022 | Team Udayavani |

ಶಿರಸಿ: ಗ್ರಹಣಮೋಕ್ಷ ಕಾಲಕ್ಕೆ ಉಂಟಾದ ಗೊಂದಲಕ್ಕೆ ಸಂಬಂಧಿಸಿ ಜ್ಯೋತಿಷ್ಯಾಸ್ತ್ರದ ವಿದ್ವಾಂಸರು ನೀಡಿದ ಸ್ಪಷ್ಟ ಅಭಿಪ್ರಾಯ ವಿಳಂಬವಾಗಿ ಸಿಕ್ಕಿದ್ದರಿಂದ ಮಂಗಳವಾರ ಸಂಭವಿಸಲಿರುವ ಸೂರ್ಯಗ್ರಹಣದ ವಿಷಯದಲ್ಲಿ ಸೋಂದಾ ಸ್ವರ್ಣವಲ್ಲೀ‌ ಮಹಾ ಸಂಸ್ಥಾನ ಮರು‌ ಪ್ರಕಟನೆ ನೀಡಿದೆ.

Advertisement

ಜ್ಯೋತಿಷ್ಯಶಾಸ್ತ್ರದ ವಿದ್ವಾಂಸರ ಮತ್ತು ಖಗೋಳ ವಿಜ್ಞಾನಿಗಳ ಸ್ಪಷ್ಟ ಅಭಿಪ್ರಾಯ ತಡವಾಗಿ ಸಿಕ್ಕಿದ್ದರಿಂದ ಈ ತಿದ್ದುಪಡಿಯನ್ನು ಕೊಡಬೇಕಾಗಿ ಬಂದಿದೆ ಎಂದೂ ಶ್ರೀಮಠ ತಿಳಿಸಿದೆ. ಅ.25 ಮಂಗಳವಾರ ಸಂಜೆ 5 ಘಂಟೆ 4 ನಿಮಿಷಕ್ಕೆ ಸೂರ್ಯಗ್ರಹಣದ ಸ್ಪರ್ಶಕಾಲವಾಗಲಿದೆ. 5-48 ನಿಮಿಷಕ್ಕೆ ಮಧ್ಯಕಾಲವಾಗಿದೆ. 6-29 ನಿಮಿಷಕ್ಕೆ ಮೋಕ್ಷಕಾಲ ಇದೆ.

ಆದ್ಯಂತ ಪುಣ್ಯಕಾಲ 1 ಘಂಟೆ 25 ನಿಮಿಷಗಳಾಗಿವೆ. ಸೂರ್ಯಾಸ್ತದ ನಂತರವೂ ಗ್ರಹಣ ಮುಂದುವರೆದಿದೆ. ಆದ್ದರಿಂದ ಗ್ರಹಣಮೋಕ್ಷದ ನಂತರ ಸ್ನಾನ ಮಾಡಿ, ಲಘು ಉಪಹಾರವನ್ನು ಸ್ವೀಕರಿಸಬಹುದಾಗಿದೆ ಎಂದಿದೆ. ಮರುದಿನ ಬೆಳಗ್ಗೆ ಸೂರ್ಯೋದಯದ ನಂತರ ಸೂರ್ಯಬಿಂಬ ನೋಡಿ, ಸ್ನಾನ ಮಾಡಿ ಭೋಜನ ಮಾಡಬೇಕಿದೆ. ಈ ಎರಡು ಬದಲಾವಣೆಗಳೊಂದಿಗೆ ಸೋಂದಾ‌ ಸ್ವರ್ಣವಲ್ಲೀ‌ ಮಹಾ ಸಂಸ್ಥಾನದ‌ ಮಠಾಧೀಶ‌ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾಸ್ವಾಮೀಜಿ ಗಳವರ ಅಪ್ಪಣೆಯಂತೆ ಪ್ರಕಟಣೆ ನೀಡಲಾಗಿದೆ ಎಂದು ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next