Advertisement
ತಿಂಗಳುಗಟ್ಟಲೆ ಕಾಯುತ್ತಿರುವ ಸಾರ್ವಜನಿಕರು ಎಟಿಪಿ, ಟಿಪಿಎಂ ವರದಿ ಇಲ್ಲದಿದ್ದರೆ ನಗರಸಭೆ, ಗ್ರಾ. ಪಂ. ಅನುಮತಿ ಕೊಡಲು ಬರುವುದಿಲ್ಲ. ಮನೆ ಕಟ್ಟಲು, ಮನೆ ಪೂರ್ಣಗೊಂಡರೂ ಎರಡು ಹಂತಕ್ಕೂ ಪ್ರಾಧಿಕಾರದ ವರದಿಗಾಗಿ ಜನರು ತಿಂಗಳುಗಟ್ಟಲೆ ಕಾಯುವಂತಾಗಿದೆ. ಕಟ್ಟಡ, ಮನೆಗಳ ನಿರ್ಮಾಣದ ಸಮಯದಲ್ಲಿ ಜನರು ಸಾಕಷ್ಟು ತೊಂದರೆಗೊಳಗಾಗುತ್ತಿದ್ದಾರೆ. ಬಡವರು ಮನೆ ನವೀಕರಣಕ್ಕೆ ಬ್ಯಾಂಕ್‌ನಿಂದ ಸಾಲ ಪಡೆಯಲು ಪ್ರಾಧಿಕಾರದ ರಿಪೇರಿ ಲೈಸೆನ್ಸ್ ಪಡೆಯಬೇಕು. ಇದನ್ನೂ ಸಹ ಕಾಲಮಿತಿಯಲ್ಲಿ ಪಡೆಯಲು ಜನರಿಗೆ ಸಾಧ್ಯವಾಗುತ್ತಿಲ್ಲ ಎಂಬುದು ಸಾರ್ವಜನಿಕರ ಅಳಲು. ಟಿಪಿಎಂ ವಾರಕ್ಕೆ ಎರಡು ದಿನ ಪ್ರಾಧಿಕಾರದ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು, ಸೈಟ್ ವಿಸಿಟ್, ದಾಖಲೆ ಪರಿಶೀಲನೆ, ತಾಂತ್ರಿಕ ಅನುಮೋದನೆ ಕೆಲಸಗಳು ವಿಳಂಬವಾಗಲು ಕಾರಣವಾಗಿದೆ. ಇನ್ನೂ ಟಿಪಿಒ ಅವರನ್ನು ಸಹ ಇದೇ ರೀತಿ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು, ಅವರು ಕೆಲವು ದಿನಗಳಿಂದ ಇಲ್ಲಿನ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ.
ಎಟಿಪಿ, ಟಿಪಿಎಂ ವರದಿ ಇಲ್ಲದಿದ್ದರೆ ನಗರಸಭೆ, ಗ್ರಾ. ಪಂ. ಅನುಮತಿ ಕೊಡಲು ಬರುವುದಿಲ್ಲ. ಮನೆ ಕಟ್ಟಲು, ಮನೆ ಪೂರ್ಣಗೊಂಡರೂ ಎರಡು ಹಂತಕ್ಕೂ ಪ್ರಾಧಿಕಾರದ ವರದಿಗಾಗಿ ಜನರು ತಿಂಗಳುಗಟ್ಟಲೆ ಕಾಯುವಂತಾಗಿದೆ. ಕಟ್ಟಡ, ಮನೆಗಳ ನಿರ್ಮಾಣದ ಸಮಯದಲ್ಲಿ ಜನರು ಸಾಕಷ್ಟು ತೊಂದರೆಗೊಳಗಾಗುತ್ತಿದ್ದಾರೆ. ಬಡವರು ಮನೆ ನವೀಕರಣಕ್ಕೆ ಬ್ಯಾಂಕ್‌ನಿಂದ ಸಾಲ ಪಡೆಯಲು ಪ್ರಾಧಿಕಾರದ ರಿಪೇರಿ ಲೈಸೆನ್ಸ್ ಪಡೆಯಬೇಕು. ಇದನ್ನೂ ಸಹ ಕಾಲಮಿತಿಯಲ್ಲಿ ಪಡೆಯಲು ಜನರಿಗೆ ಸಾಧ್ಯವಾಗುತ್ತಿಲ್ಲ ಎಂಬುದು ಸಾರ್ವಜನಿಕರ ಅಳಲು.
Related Articles
ನಗರಸಭೆ, ಗ್ರಾ. ಪಂ. ಕಟ್ಟಡ ಪರವಾನಿಗೆ, ನಿರಾಕ್ಷೇಪಣ ಪತ್ರ, ಕನ್ವರ್ಷನ್, ಬಿಲ್ಡಿಂಗ್ ಕಂಪ್ಲೀಷನ್ ಸರ್ಟಿಫಿಕೆಟ್, ಸಿಂಗಲ್ ಲೇಔಟ್, ಮಲ್ಟಿ ಲೇಔಟ್, ವಲಯ ಬದಲಾವಣೆಗಾಗಿ ಜನರು ಪ್ರಾಧಿಕಾರದ ಕಚೇರಿಗೆ ಅಲೆದು ಸುಸ್ತಾಗಿದ್ದಾರೆ. ಪ್ರಾಧಿಕಾರದ ವ್ಯಾಪ್ತಿಯಲ್ಲಿ ತಾಂತ್ರಿಕ ವರದಿಗೆ ಸಂಬಂಧಿಸಿ ಕಡತಗಳು ಮುಖ್ಯವಾಗಿ ವಿಲೇವಾರಿಯಾಗುತ್ತದೆ.
Advertisement
ನಗರಸಭೆಗೆ ಸಂಬಂಧಿಸಿದ್ದು ಆನ್ಲ„ನ್ ಮೂಲಕ ಪ್ರಕ್ರಿಯೆಗೊಂಡು ಪ್ರಾಧಿಕಾರದ ಸುಪರ್ದಿಗೆ ಬರುತ್ತದೆ. ನಗರಸಭೆ ಸುತ್ತಲಿನ ಗ್ರಾಮೀಣ ಭಾಗದ ಗ್ರಾ. ಪಂ.ನಿಂದ ಆಫ್ಲೈನ್ ಮೂಲಕ ಅನುಮೋದನೆಗೆ ಪ್ರಾಧಿಕಾರಕ್ಕೆ ಬರುತ್ತದೆ.
ಖಾಯಂ ಇದ್ದರೆ ತೊಂದರೆಯಾಗದು ಪ್ರಾಧಿಕಾರದಲ್ಲಿ ಟಿಪಿಎಂ, ಟಿಪಿಒ ಎರಡು ಹುದ್ದೆಗಳು ಖಾಯಂ ಇದ್ದರೆ ಕಡತ ವಿಲೇವಾರಿ ವಿಳಂಬವಾಗುವುದಿಲ್ಲ. ಬೇರೆ ಸಿಬಂದಿ ಕೊರತೆ ಇಲ್ಲ. ಟಿಪಿಎಂ, ಟಿಪಿಒ ಅವರು ಬಿಲ್ಡಿಂಗ್ ಲೈಸೆನ್ಸ್, ಎನ್‌ಒಸಿ, ಸಿಂಗಲ್, ಮಲ್ಟಿ ಲೇಔಟ್ ಎಲ್ಲವು ಸೈಟ್ ವಿಸಿಟ್, ಪರಿಶೀಲನೆಯಾಗಿ ತಾಂತ್ರಿಕ ವರದಿ ನೀಡಬೇಕು. ನಮ್ಮ ಹಂತದಲ್ಲಿ ಸಾಧ್ಯವಾದಷ್ಟು ಕಡತ ವಿಲೇವಾರಿಗೆ ಶ್ರಮಿಸುತ್ತಿದ್ದೇವೆ. ಟಿಪಿಎಂ ವಾರಕ್ಕೆ ಎರಡು ದಿನ ಪ್ರಾಧಿಕಾರದ ಕರ್ತವ್ಯಕ್ಕೆ ಬರುತ್ತಾರೆ. 2 ದಿನ ಕುಂದಾಪುರ, 2 ಡಿಸಿ ಕಚೇರಿಯಲ್ಲಿ ಅವರಿಗೆ ಕರ್ತವ್ಯ ನಿರ್ವಹಿಸಬೇಕು. ಇದೇ ರೀತಿ ಟಿಪಿಒ ಒಬ್ಬರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಇವರು ಸತತವಾಗಿ ಗೈರು ಹಾಜರಾಗುತ್ತಿದ್ದಾರೆ. ಡಿಸಿ ಅವರಿಗೆ ಈ ಬಗ್ಗೆ ವರದಿ ನೀಡಿದ್ದು, ಅವರಿಗೆ ಡಿಸಿ ಅವರಿಂದ ಶೋಕಾಸ್ ನೋಟಿಸ್ ನೀಡಲಾಗಿದೆ.
– ಗುರುಪ್ರಸಾದ್, ಆಯುಕ್ತರು, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ
ಪ್ರಾಧಿಕಾರದಲ್ಲಿ ಸರಿಯಾಗಿ ಕೆಲಸಗಳು ನಡೆಯುತ್ತಿಲ್ಲ. ಸಾವಿರಾರು ಕಡತಗಳು ವಿಲೇವಾರಿಗೆ ಬಾಕಿ ಇದೆ. ಕಟ್ಟಡ, ಮನೆ ನಿರ್ಮಾಣ ಸಹಿತ ಅನೇಕ ಕೆಲಸಗಳಿಗೆ ಜನರು ಪರದಾಡುವಂತಾಗಿದೆ. ನಿಯೋಜಿತ ಟಿಪಿಎಂ ಅವರು ವಾರಕ್ಕೆ ಒಂದೆರಡು ಸಲ ಬರುತ್ತಾರೆ. ಅದಕ್ಕೂ ಗಂಟೆಗಟ್ಟಲೆ ಕಾಯಬೇಕು. ಜನಸಾಮಾನ್ಯರು ಮತ್ತು ನಿರ್ಮಾಣ ಕ್ಷೇತ್ರಕ್ಕೆ ಸಾಕಷ್ಟು ಸಮಸ್ಯೆಯಾಗಿದೆ. ಈ ಬಗ್ಗೆ ಶಾಸಕರೊಂದಿಗೂ ಚರ್ಚೆ ನಡೆಸಿದ್ದೇವೆ. ಶೀಘ್ರ ಈ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಸರಕಾರ ಸೂಕ್ತ ಕ್ರಮವಹಿಸಬೇಕು.
– ಪಾಂಡುರಂಗ ಆಚಾರ್. ಕೆ.,
ಅಧ್ಯಕ್ಷರು, ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಶನ್ ಉಡುಪಿ – ಅವಿನ್ ಶೆಟ್ಟಿ