Advertisement
ಚನ್ನರಾಯಪಟ್ಟಣದಲ್ಲಿ 23ವಾರ್ಡ್‌ಗಳ ಚುನಾ ವಣೆ ನಡೆದು ಬರೋಬ್ಬರಿ ಹನ್ನೆರಡು ತಿಂಗಳು ಕಳೆದಿದೆ. ಆದರೆ ಪುರಸಭಾ ಸದಸ್ಯರಿಗೆ ಇನ್ನೂ ಪುರ ಸಭೆಯ ಬಾಗಿಲು ತೆರೆದಿಲ್ಲ. ಇದರಿಂದಾಗಿ ಪುರಸಭೆಗೆ ಆಯ್ಕೆಯಾದ ಸದಸ್ಯರು ತೀವ್ರ ನಿರಾಶರಾಗಿದ್ದಾರೆ.
Related Articles
Advertisement
ಸಮಸ್ಯೆಗಳ ಸರಮಾಲೆ: ಕಳೆದ ಒಂದು ವರ್ಷದಿಂದ ಆಡಳಿತ ವ್ಯವಸ್ಥೆ ಅಸ್ತಿತ್ವಕ್ಕೆ ಬಾರದ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ತೀವ್ರಗತಿಯಲ್ಲಿ ನಡೆಸುವಲ್ಲಿ ಅಧಿಕಾರಿ ಗಳು ವಿಫಲರಾಗಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ವಾರ್ಡ್‌ಗಳಲ್ಲಿ ಸಕಾಲಕ್ಕೆ ನೀರಿನ ವ್ಯವಸ್ಥೆ ನೀಡುತ್ತಿಲ್ಲ. ರಸ್ತೆ ಬದಿಯಲ್ಲಿ ಕಸ ಬಿದ್ದಿರುವುದು. ರಾತ್ರಿಯಾದರೂ ಬೀದಿ ದೀಪಗಳು ಉರಿಯುತ್ತಿಲ್ಲ ಹೀಗೆ ಸಮಸ್ಯೆಗಳನ್ನು ಸಾರ್ವಜನಿಕರು ಎದುರಿಸುವಂತಾಗಿದೆ.
ಅಧಿಕಾರಿಗಳ ದರ್ಬಾರ್: ರಾಜ್ಯದ ಕೆಲಸ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪಟ್ಟಿ ಹೈಕೋರ್ಟ್‌ನಲ್ಲಿ ಇತ್ಯರ್ಥ ಆಗಬೇಕಿರುವುದರಿಂದ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ. ಚುನಾಯಿತ ಜನ ಪ್ರತಿನಿಧಿಗಳ ಆಡಳಿತ ವ್ಯವಸ್ಥೆ ಇಲ್ಲದ ಕಾರಣ ಸದ್ಯ ಪುರಸಭೆಯಲ್ಲಿ ಅಧಿಕಾರಿಗಳದ್ದೇ ದರ್ಬಾರ್ ನಡೆಯುತ್ತಿದೆ. ಇದು ಆಡಳಿತ ವ್ಯವಸ್ಥೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ಮೇಲೆ ಪರಿಣಾಮ ಬೀರುತ್ತಿದೆ.
ಬಜೆಟ್ ಮಂಡನೆ ಆಗಿಲ್ಲ: ಪುರಸಭೆಯಲ್ಲಿ ಸದಸ್ಯರು ಇಲ್ಲದೇ ಇರುವುದರಿಂದ ಪ್ರಸಕ್ತ ವರ್ಷದ ಬಜೆಟ್ ಮಂಡನೆಯಾಗಿಲ್ಲ. ಅಧಿಕಾರಿಗಳೇ ಪುರಸಭೆ ಆಯವ್ಯಯ ಮಂಡನೆ ಮಾಡಬೇಕಿತ್ತು. ಆದರೆ ಇವರನ್ನು ಪ್ರಶ್ನೆ ಮಾಡುವವರಿಲ್ಲದೇ ಇರುವುದರಿಂದ ಪುರಸಭೆಗೆ ತೆರಿಗೆ ರೂಪದಲ್ಲಿ ಹಾಗೂ ಸರ್ಕಾರದ ವಿವಿಧ ಯೋಜನೆಯಲ್ಲಿ ಹರಿದು ಬಂದಿರುವ ಅನುದಾನ ಹಾಗೂ ಆದಾಯವೆಷ್ಟು? ಇದನ್ನು ಸರಿಯಾಗಿ ವೆಚ್ಚ ಮಾಡಲಾಗಿದೆಯೇ ಎಂಬುದನ್ನು ಸಾರ್ವಜನಿಕವಾಗಿ ಮಂಡನೆ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.
ಜೆಡಿಎಸ್ ಅಧಿಕಾರ: ಪುರಸಭೆ 23 ವಾರ್ಡ್‌ಗಳಲ್ಲಿ ಜೆಡಿಎಸ್ 15 ಸ್ಥಾನ, ಕಾಂಗ್ರೆಸ್ 8 ಸ್ಥಾನ ಪಡೆದಿದೆ. ಸರ್ಕಾರ ಯಾವುದೇ ಮೀಸಲಾತಿ ಘೋಷಣೆ ಮಾಡಿದರೂ ಜೆಡಿಎಸ್ ಪಕ್ಷ ಅಧಿಕಾರ ಹಿಡಿಯು ವುದು ಶತಸಿದ್ಧ. ಸಾಮಾನ್ಯ ಮಹಿಳೆ ಅಧ್ಯಕ್ಷ ಸ್ಥಾನಕ್ಕೆ ಮೀಸಲಾಗಿದೆ. ಉಪಾಧ್ಯಕ್ಷ ಸ್ಥಾನ ಬಿಸಿಎಂ(ಬಿ)ಗೆ ಮೀಸಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಮೂರು ಮಂದಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 2 ಮಂದಿ ಪೈಪೋಟಿಯಲ್ಲಿದ್ದಾರೆ.
● ಶಾಮಸುಂದರ್ ಕೆ. ಅಣ್ಣೇನಹಳ್ಳಿ