Advertisement

ಮತಗಟ್ಟೆಗಳಲ್ಲಿ ಕ್ಯೂಆರ್‌ ಕೋಡ್‌ ಇರುವ ಮೊಬೈಲ್‌ ಆ್ಯಪ್‌! ಚುನಾವಣೆ ಆಯೋಗದಿಂದ ವಿನೂತನ ಕ್ರಮ 

09:58 PM Feb 09, 2021 | Team Udayavani |

ಕೋಲ್ಕತ: ಭಾರತದ ಚುನಾವಣೆ ಆಯೋಗ, ದೇಶದ ಚುನಾವಣೆ ವ್ಯವಸ್ಥೆಯಲ್ಲೇ ಕ್ರಾಂತಿಕಾರಕವಾದ ಕ್ರಮವೊಂದನ್ನು ತರಲು ಯೋಜನೆ ರೂಪಿಸುತ್ತಿದೆ. ಮತಗಟ್ಟೆಗಳಲ್ಲಿ ಮತ ಚಲಾವಣೆ ನಡೆಯುವಾಗ ಉಂಟಾಗುವ ಹಲವಾರು ಗೊಂದಲಗಳನ್ನು ತಪ್ಪಿಸಲು, ಮೊಬೈಲ್‌ ಆ್ಯಪ್‌ ಒಂದನ್ನು ಸಿದ್ಧಪಡಿಸಲು ನಿರ್ಧರಿಸಲಾಗಿದೆ. ಇದು ಮುಂದಿನ ಬಂಗಾಳ ಚುನಾವಣೆಯಲ್ಲಿ ಬಳಕೆಯಾಗುವ ನಿರೀಕ್ಷೆಯಿದೆ. ಒಂದು ವೇಳೆ ಇದು ಸಾಧ್ಯವಾದರೆ ಇಂತಹದ್ದೊಂದು ಅವಕಾಶ ಪಡೆದ ಮೊದಲ ರಾಜ್ಯ ಬಂಗಾಳವಾಗಲಿದೆ.

Advertisement

ಆ್ಯಪ್‌ನ ವಿಶೇಷವೇನು?: ಸದ್ಯಕ್ಕೆ ಯಾವುದೂ ಅಂತಿಮಗೊಂಡಿಲ್ಲ, ಸಿದ್ಧತೆ ಹಂತದಲ್ಲೇ ಇದೆ ಎಂದು ಚುನಾವಣೆ ಆಯೋಗ ತಿಳಿಸಿದೆ. ಮೊಬೈಲ್‌ ಆ್ಯಪ್‌, ಚುನಾವಣೆ ಆಯೋಗದ ಸರ್ವರ್‌ಗೆ ಸಂಪರ್ಕಗೊಂಡಿರುತ್ತದೆ. ಅದರಿಂದ ಮಾಹಿತಿಗಳು ಸುರಕ್ಷಿತವಾಗಿ ವರ್ಗಾವಣೆಗೊಳ್ಳಲಿವೆ.

ಇದನ್ನೂ ಓದಿ:ಇನ್ನು ವಾರದಲ್ಲಿ 4 ದಿನ ಕೆಲಸ, 3 ರಜೆ? ಕಾರ್ಮಿಕ ನಿಯಮಾವಳಿ ಬದಲಾವಣೆಗೆ ಮುಂದಾದ ಕೇಂದ್ರ

ಲಿಂಗಾಧಾರಿತ, ವಯೋಮಾನಾಧಾರಿತ ಮತದಾನದ ಮಾಹಿತಿಗಳು ಇರಲಿವೆ. ಪ್ರತೀ ಮತದಾರರ ಮತಪತ್ರದ ಮೇಲೆ ಕ್ಯೂಆರ್‌ ಕೋಡ್‌ ಇರುತ್ತದೆ. ಮತದಾರ ಬೂಥ್‌ನೊಳಕ್ಕೆ ಪ್ರವೇಶಿಸುವುದಕ್ಕೆ ಮುನ್ನ ಒಮ್ಮೆ, ಮತದಾನ ಮಾಡುವುದಕ್ಕೆ ಮುನ್ನ ಒಮ್ಮೆ ಅದನ್ನು ಸ್ಕ್ಯಾನ್‌ ಮಾಡಲಾಗುತ್ತದೆ. ಇದರಿಂದ ಹಲವು ಗೊಂದಲಗಳು ನಿವಾರಣೆಯಾಗುತ್ತವೆ ಎನ್ನುವುದು ನಿರೀಕ್ಷೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next