Advertisement

ಶೀಘ್ರವೇ ಪ್ರಕಟಗೊಳ್ಳಲಿದೆ ಲೋಕಸಭಾ ಚುನಾವಣೆ ವೇಳಾಪಟ್ಟಿ

11:53 AM Mar 07, 2019 | Team Udayavani |

ಹೊಸದಿಲ್ಲಿ : ಹೈವೋಲ್ಟೆಜ್‌ ಲೋಕಸಭಾ ಚುನಾವಣೆ ಇದೇ ಎಪ್ರಿಲ್‌ – ಮೇ ತಿಂಗಳಲ್ಲಿ 7 – 8 ಹಂತಗಳಲ್ಲಿ ನಡೆಯಲಿದ್ದು ಚುನಾವಣಾ ಆಯೋಗ ಶೀಘ್ರವೇ ವೇಳಾ ಪಟ್ಟಿ ಪ್ರಕಟಿಸಲಿದೆ ಎಂದು ಮೂಲಗಳು ಇಂದು ಗುರುವಾರ ತಿಳಿಸಿವೆ.

Advertisement

17ನೇ ಲೋಕಸಭಾ ಚುನಾವಣೆ ನಡೆಸಲು ಸಾರಿಗೆ ಸಿದ್ಧತೆಗಳು ಈಗ ಅಂತಿಮ ಹಂತದಲ್ಲಿವೆ. ಅಂತೆಯೇ ಚುನಾವಣಾ ವೇಳಾ ಪಟ್ಟಿಯನ್ನು ಈ ವಾರಾಂತ್ಯ ಇಲ್ಲವೇ ಮುಂದಿನ ವಾರದ ಆದಿಯಲ್ಲಿ ಪ್ರಕಟಿಸುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ಈಗಿನ ಲೋಕಸಭೆಯ ಅವಧಿಯು ಜೂನ್‌ 3ರಂದು ಕೊನೆಗೊಳ್ಳಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next