ಹೊಸದಿಲ್ಲಿ : ನಿನ್ನೆ ಸೋಮವಾರ ಮತದಾನ ನಡೆದಿದ್ದ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಂದ ಮತಗಟ್ಟೆ ವಶೀಕರಣ ನಡೆದಿದೆ ಎಂದು ಆರೋಪಿಸಿ ಆದನ್ನು ಸಿದ್ದಪಡಿಸುವ ವಿಡಿಯೋ ಚಿತ್ರಿಕೆಯೊಂದನ್ನು ಸಾಮಾಜಿಕ ಜಾಲ ತಾಣಕ್ಕೆ ಅಪ್ ಲೋಡ್ ಮಾಡಿದ್ದ ಕೇಂದ್ರ ಸಚಿವ ಸ್ಮ್ರತಿ ಇರಾನಿ ಅವರ ವಾದವನ್ನು ಮುಖ್ಯ ಚುನಾವಣಾಧಿಕಾರಿ (ಸಿಇಓ) ನಿರಾಧಾರವೆಂದು ತಿರಸ್ಕರಿಸಿದ್ದು ಸಂಬಂಧಿತ ವಿಡಿಯೋ ಸೃಷ್ಟಿಸಲ್ಪಟ್ಟದ್ದೆಂದು ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಸಿಇಓ ವೆಂಕಟ್ಟೇಶ್ವರ ಲೂ ಅವರು ಇರಾನಿ ಅವರ ಆರೋಪಗಳು ನಿರಾಧಾರ ಮತ್ತು ಅದಕ್ಕೆ ಸಂಬಂಧಿಸಿದ ವಿಡಿಯೋ ಕೃತಕ ಎಂದು ಸ್ಪಷ್ಟಪಡಿಸಿದರು.
ಮತಗಟ್ಟೆ ವಶೀಕರಣ ಕುರಿತ ಇರಾನಿ ಅವರ ದೂರನ್ನು ಅನುಸರಿಸಿ ಸೆಕ್ಟರ್ ಅಧಿಕಾರಿಗಳು, ಹಿರಿಯ ಅಧಿಕಾರಿಗಳು ಮತ್ತು ವೀಕ್ಷಕರು ಸಂಬಂಧಿತ ಮತಗಟ್ಟೆಗೆ ತೆರಳಿ ಅಲ್ಲಿದ್ದ ರಾಜಕೀಯ ಪಕ್ಷಗಳ ಪೋಲಿಂಗ್ ಏಜಂಟರನ್ನು ಮಾತನಾಡಿಸಿದರು.
ಪರಿಣಾಮವಾಗಿ ಆರೋಪವು ನಿರಾಧಾರವಾದುದೆಂದೂ, ಸಂಬಂಧಿಸಿದ ವಿಡಿಯೋ ಕೃತಕವೆಂಬುದೂ ಖಚಿತವಾಯಿತು. ಹಾಗಿದ್ದರೂ ಇರಾನಿ ಅವರಿಂದ ವಿಡಿಯೋದಲ್ಲಿ ದಾಖಲಾದ ಮತಗಟ್ಟೆ ವಶೀಕರಣದ ಪ್ರತ್ಯಕ್ಷ ಆರೋಪಗಳನ್ನು ಅನುಸರಿಸಿ ತನಿಖೆ ನಡೆಯುತ್ತಿದ್ದಾಗಲೇ ನಿರ್ವಚನಾಧಿಕಾರಿಯನ್ನು ತತ್‌ಕ್ಷಣವೇ ತೆಗೆದುಹಾಕಲಾಯಿತು ಎಂದು ಚುನಾವಣಾ ಅಧಿಕಾರಿ ಹೇಳಿದರು.
ಸ್ಮ್ರತಿ ಇರಾನಿ ಅವರ ಒದಗಿಸಿದ್ದ ವಿಡಿಯೋದಲ್ಲಿ ಹಿರಿಯ ಮಹಿಳೆಯೊಬ್ಬರು ತಾನು ಬಿಜೆಪಿಗೆ ಮತ ಹಾಕಲು ಬಯಸಿದ್ದರೂ ಮತಗಟ್ಟೆಯಲ್ಲಿನ ಚುನಾವಣಾಧಿಕಾರಿ ನನ್ನಿಂದ ಬಲವಂತವಾಗಿ ಕಾಂಗ್ರೆಸ್ ಗೆ ಮತಹಾಕಿಸಿದರು ಎಂದು ದೂರುತ್ತಿದ್ದುದು ಕಂಡು ಬಂದಿತ್ತು.