Advertisement

Loksabha poll: ಇವಿಎಂ ನೆಲಕ್ಕೆ ಎಸೆದು ಪುಡಿಗೈದ ಶಾಸಕ, ಕೃತ್ಯ ಸಿಸಿಟಿವಿಯಲ್ಲಿ ಸೆರೆ

02:29 PM May 22, 2024 | Team Udayavani |

ಆಂಧ್ರಪ್ರದೇಶ: ಮುಖ್ಯಮಂತ್ರಿ ವೈ.ಎಸ್.ಜಗನ್‌ ಮೋಹನ್‌ ರೆಡ್ಡಿ ಪಕ್ಷದ ಶಾಸಕ ಮಾಚೆರ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಇವಿಎಂ (ವಿದ್ಯುನ್ಮಾನ ಮತಯಂತ್ರ) ಅನ್ನು ನೆಲಕ್ಕೆ ಎಸೆದು ಪುಡಿಗೈದಿರುವ ಸಿಸಿಟಿವಿ ಫೂಟೇಜ್‌ ಬಹಿರಂಗಗೊಂಡಿದ್ದು, ಆಡಳಿತರೂಢ ವೈಎಸ್‌ ಆರ್‌ ಸಿ ಶಾಸಕನ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳುವಂತೆ ಚುನಾವಣಾ ಆಯೋಗ ಆಂಧ್ರಪ್ರದೇಶ ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚನೆ ನೀಡಿದೆ.

Advertisement

ಇದನ್ನೂ ಓದಿ:ಆ ಮಹಾನುಭಾವರು 1980 ರಲ್ಲೇ ಸಿಡಿ ಫ್ಯಾಕ್ಟರಿ ಓಪನ್ ಮಾಡಿದ್ದಾರೆ: ಎಚ್‌ಡಿಕೆ ವಾಗ್ದಾಳಿ

ಮೇ 13ರಂದು ನಡೆದ ಚುನಾವಣೆಯಲ್ಲಿ ಮಾಚೆರ್ಲಾ ವಿಧಾನಸಭಾ ಕ್ಷೇತ್ರದಲ್ಲಿನ ಏಳು ಇವಿಎಂ ಯಂತ್ರಗಳನ್ನು ನೆಲಕ್ಕೆ ಎಸೆದು ಪುಡಿಗೈದಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ಮತಯಂತ್ರಗಳನ್ನು ಸ್ಥಳೀಯ ಶಾಸಕ ಪಿ.ರಾಮಕೃಷ್ಣ ರೆಡ್ಡಿ ಪುಡಿಗೈದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಆಂಧ್ರಪ್ರದೇಶದಲ್ಲಿ ಮೇ 13ರಂದು ಲೋಕಸಭೆ ಮತ್ತು ವಿಧಾನಸಭೆಗೆ ಒಂದೇ ದಿನ ಮತದಾನ ನಡೆದಿತ್ತು. ಚುನಾವಣೆ ವೇಳೆ ಪಲ್ನಾಡು, ತಿರುಪತಿ ಹಾಗೂ ಅನಂತಪುರ ಪ್ರದೇಶದಲ್ಲಿ ಹಿಂಸಾಚಾರ ನಡೆದಿತ್ತು.


ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಘಟನೆಗೆ ಸಂಬಂಧಿಸಿದಂತೆ ಶಾಸಕ ರೆಡ್ಡಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಚುನಾವಣಾ ಆಯೋಗ ನಿರ್ದೇಶನ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next