Advertisement

ಇಂದಿನಿಂದ 2 ದಿನಗಳ ಕಾಲ ಇಸಿ ಸಭೆ

12:30 AM Jan 11, 2019 | |

ಹೊಸದಿಲ್ಲಿ: ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಂತೆ ಚುನಾವಣಾ ಆಯೋಗದ ಸಿದ್ಧತೆಗಳನ್ನು ಪುನರ್‌ಪರಿಶೀಲನೆ ಮಾಡುವ ನಿಟ್ಟಿನಲ್ಲಿ ಮುಖ್ಯ ಚುನಾವಣಾಧಿಕಾರಿಗಳ 2 ದಿನಗಳ ಸಭೆಯನ್ನು ಚುನಾವಣಾ ಆಯೋಗ ಏರ್ಪಡಿಸಿದೆ. ಶುಕ್ರವಾರ ಮತ್ತು ಶನಿವಾರ ನಡೆಯಲಿದೆ. ಈ ಸಭೆಯಲ್ಲಿ ಚುನಾವಣೆ ಸಂಬಂಧಿಸಿದ ಪ್ರಮುಖ ತಯಾರಿ ಗಳಾದ “ಚುನಾವಣಾ ಕರ್ತವ್ಯಗಳ ರೂಪುರೇಷೆ ಸಿದ್ಧತೆ, ಇವಿಎಂ-ವಿವಿಪ್ಯಾಟ್‌ಗಳ ಸಿದ್ಧತೆ’ ಮುಂತಾದ ವುಗಳ ಕುರಿತು ಚರ್ಚಿಸಲಾಗುವುದು. ಜೊತೆಗೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆದ ಲೋಪಗಳನ್ನು ಸರಿಪಡಿಸುವ ಕುರಿತೂ ಚರ್ಚಿಸಲಾಗುವುದು ಎಂದು ಆಯೋಗ ತಿಳಿಸಿದೆ.  ಚುನಾವಣೆಯನ್ನು ಹಿರಿಯ ನಾಗರಿಕರು ಮತ್ತು ದಿವ್ಯಾಂಗಿಗಳಿಗೆ ಮತದಾನ ಮಾಡಲು ಅನುಕೂಲವಾಗುವಂತೆಯೂ ಯೋಜನೆ ರೂಪಿಸಲಾಗುವುದು. 

Advertisement
Advertisement

Udayavani is now on Telegram. Click here to join our channel and stay updated with the latest news.

Next