Advertisement

ಶೋಕಾಸ್‌ ನೊಟೀಸ್‌ಗೆ ಉತ್ತರಿಸದ ಏರಿಂಡಿಯಾ: ಚುನಾವಣಾ ಆಯೋಗ ಗರಂ

08:55 AM Apr 03, 2019 | Team Udayavani |

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವಿರುವ ಬೋರ್ಡಿಂಗ್‌ ಪಾಸ್‌ ಬಳಸಲಾದ ಬಗ್ಗೆ ಜಾರಿ ಮಾಡಲಾಗಿದ್ದ ಶೋಕಾಸ್‌ ನೊಟೀಸ್‌ ಗೆ ಡೋಂಟ್‌ ಕೇರ್‌ ಎಂಬ ರೀತಿಯಲ್ಲಿ ಉತ್ತರಿಸದೆ ತೆಪ್ಪಗೆ ಕುಳಿತಿರುವ ಏರಿಂಡಿಯಾ ವಿಮಾನ ಯಾನ ಸಂಸ್ಥೆಯ ಬಗ್ಗೆ ಚುನಾವಣಾ ಆಯೋಗ ಗಂಭೀರ ಅಸಮಾಧಾನ ವ್ಯಕ್ತಪಡಿಸಿದೆ.

Advertisement

ಪ್ರಧಾನಿ ಮೋದಿ ಅವರ ಭಾವಚಿತ್ರವಿರುವ ಬೋರ್ಡಿಂಗ್‌ ಪಾಸ್‌ ಬಳಸುವ ಮೂಲಕ ಏರಿಂಡಿಯಾ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದೆ ಎಂಬ ಆರೋಪಕ್ಕೆ ಗುರಿಯಾಗಿತ್ತು. ಚುನಾವಣಾ ಆಯೋಗ ಜಾರಿಗೊಳಿಸಿದ್ದ ಶೋಕಾಸ್‌ ನೊಟೀಸ್‌ಗೆ ಉತ್ತರ ನೀಡುವ ಕಾನೂನು ಬದ್ಧತೆಯನ್ನು ಹೊಂದಿತ್ತು.

ಚುನಾವಣಾ ಆಯೋಗ ನಾಗರಿಕ ವಾಯಯಾನ ಕಾರ್ಯದರ್ಶಿ ಪಿ ಎಸ್‌ ಖರೋಲಾ ಅವರಿಗೆ ಬರೆದಿರುವ ಪತ್ರದಲ್ಲಿ “ನಮ್ಮ ನೊಟೀಸಿಗೆ ಉತ್ತರ ನೀಡುವ ಗಡುವು ಮುಗಿದು ಎರಡು ದಿನಗಳು ಕಳೆದಿರುವ ಹೊರತಾಗಿಯೂ ಏರಿಂಡಿಯಾ ಉತ್ತರ ನೀಡುವಲ್ಲಿ ವಿಫ‌ಲವಾಗಿದೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next