Advertisement
ಮುಖ್ಯ ಚುನಾವಣಾ ಆಯುಕ್ತ ಎ ಕೆ ಜೋತಿ ಅವರು ಈ ಮೂರು ರಾಜ್ಯಗಳ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದರು.
Related Articles
Advertisement
ನಾಗಾಲ್ಯಾಂಡ್ : ಎಲ್ಲ 60 ಸ್ಥಾನಗಳಿಗೆ ಫೆ.27ರಂದು ಚುನಾವಣೆ
ಈ ಎಲ್ಲ ಮೂರು ರಾಜ್ಯಗಳ ಮತ ಎಣಿಕೆ ದಿನಾಂಕ : ಮಾರ್ಚ್ 3, 2018.
ಮೇಘಾಲಯ, ನಾಗಾಲ್ಯಾಂಡ್ ಮತ್ತು ತ್ರಿಪುರದ ಹಾಲಿ ವಿಧಾನಸಭಾ ಕಾರ್ಯಾವಧಿ ಅನುಕ್ರಮವಾಗಿ ಮಾರ್ಚ್ 6, 13 ಮತ್ತು 14ರಂದು ಮುಗಿಯಲಿದೆ.
ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಬೆಂಬಲಿತ, ನಾಗಾ ಪೀಪಲ್ಸ್ ಫ್ರಂಟ್ ನೇತೃತ್ವದ ಡೆಮೋಕ್ರಾಟಿಕ್ ಮೈತ್ರಿಕೂಟ ಅಧಿಕಾರದಲ್ಲಿದೆ.
ತ್ರಿಪುರದಲ್ಲಿ ಎಡ ರಂಗ ಅಧಿಕಾರದಲ್ಲಿದೆ. ಮೇಘಾಲಯದಲ್ಲಿ ಕಾಂಗ್ರೆಸ್ ಸರಕಾರವಿದೆ.
ವೇಳಾ ಪಟ್ಟಿ ಘೋಷಿಸಲಾದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ ಜೋತಿ ಅವರು “ಈ ಎಲ್ಲ ಮೂರು ರಾಜ್ಯಗಳಲ್ಲಿ ಇವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳನ್ನು ಬಳಸಲಾಗುವುದು; ಇವುಗಳ ಮೊದಲ ಹಂತದ ತಪಾಸಣೆಯನ್ನು ಮುಗಿಸಲಾಗಿದೆ’ ಎಂದು ಹೇಳಿದರು.