Advertisement

ದಲಿತ ಮುಖಂಡ ಮುತ್ತಳ್ಳಿ ಮನೆಯಲ್ಲಿ ಉಪಾಹಾರ ಸೇವನೆ

03:07 PM May 26, 2017 | |

ಧಾರವಾಡ: ಇಲ್ಲಿಯ ಲಕ್ಷ್ಮೀಸಿಂಗನಕೇರಿಯಲ್ಲಿ ಇರುವ ದಲಿತ ಮುಖಂಡ ಹಾಗೂ ಪಾಲಿಕೆ ಸದಸ್ಯ ಬಸವರಾಜ ಮುತ್ತಳ್ಳಿ ಅವರ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌ .ಯಡಿಯೂರಪ್ಪ ಅವರು ಗುರುವಾರ  ಸಂಜೆ ಭೇಟಿ ನೀಡಿ ಉಪಾಹಾರ ಸೇವಿಸಿದರು.

Advertisement

 ಈ ವೇಳೆ ಸುಮಂಗಲೆಯರು ಬಿಎಸ್‌ವೈ ಅವರಿಗೆ ತಿಲಕವಿಟ್ಟು, ಆರತಿ ಮಾಡಿ ಸ್ವಾಗತ ಕೋರಿದರು. ಮುತ್ತಳ್ಳಿ ಅವರ ತುಪ್ಪದ ಅವಲಕ್ಕಿ, ಚುರಮುರಿ ಸೂಸಲಾ, ಮಿರ್ಚಿ ಬಜಿ, ಉಪ್ಪಿಟ್ಟು ಹಾಗೂ ಚಹಾ ಸಿದ್ಧಗೊಳಿಸಲಾಗಿತ್ತು. ಸೇಬು ಹಣ್ಣು, ಬಾಳೆ ಹಣ್ಣು ಹಾಗೂ ಡ್ರೈ ಪ್ರುಟ್ಸ್‌ ಸಹ ಇಡಲಾಗಿತ್ತು. 

ಬಿಎಸ್‌ವೈ ಅರ್ಧ ಪ್ಲೇಟ್‌ ತುಪ್ಪದ ವಲಕ್ಕಿ, ಎರಡು ಪೀಸ್‌ ಸೇಬು ಹಣ್ಣು ಸವಿದು ಅರ್ಧ ಲೋಟ ಚಹಾ ಕುಡಿದರು. ಬಸವರಾಜ ಮುತ್ತಳ್ಳಿ ಅವರೇ ಬಿಎಸ್‌ವೈ ಸೇರಿದಂತೆ ಎಲ್ಲ ನಾಯಕರಿಗೆ ಉಪಹಾರ ಬಡಿಸಿದರು. ಬಳಿಕ ಮನೆಯ ಎಲ್ಲ ಸದಸ್ಯರ ಕುಶಲೋಪರಿ ವಿಚಾರಿಸಿದರು. ವಿಪಕ್ಷ ನಾಯಕ ಜಗದೀಶ ಶೆಟ್ಟರ್‌, ಸಂಸದ ಪ್ರಹ್ಲಾದ ಜೋಶಿ, ಶಾಸಕ ಸಿ.ಟಿ.ರವಿ, ಮಾ.ನಾಗರಾಜ ಸೇರಿದಂತೆ ಹಲವರಿದ್ದರು. 

8-10 ತಿಂಗಳು ಕಳೆದರೆ ನಮ್ಮದೇ ಸರಕಾರ: ಇದಕ್ಕೂ ಮುನ್ನ ಲಕ್ಷ್ಮೀಸಿಂಗನಕೇರಿಯಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಬಿ.ಎಸ್‌.ಯಡಿಯೂರಪ್ಪ, ಅನೇಕ ವರ್ಷಗಳಿಂದ ಈ ಪ್ರದೇಶದಲ್ಲಿ ವಾಸವಾಗಿರುವ ಜನರ ಮನೆಗಳಿಗೆ ಖಾತೆ ನೀಡಿಲ್ಲ. ಕೆಲವರಿಗೆ ಮನೆ ಕಟ್ಟಿಸಿಕೊಟ್ಟಿಲ್ಲ. 

ದುಡಿಯುವ ಕೈಗಳಿಗೆ ಕೆಲಸವಿಲ್ಲ ಹೀಗೆ ಮಹಿಳೆಯರು ಹತ್ತು ಹಲವು ದೂರು ಸಲ್ಲಿಸಿದ್ದಾರೆ. ಇವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಇನ್ನು 8-10 ತಿಂಗಳು ಕಳೆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಈ ಸಂದರ್ಭದಲ್ಲಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇವೆ.

Advertisement

ವಿಶೇಷವಾಗಿ ಸ್ಲಂ ಪ್ರದೇಶದಲ್ಲಿ ವಾಸವಾಗಿರುವ ಬಡ ಜನರ ಉದ್ಧಾರಕ್ಕೆ ಕಟಿ ಬದ್ಧನಾಗಿದ್ದೇನೆ ಎಂದರು. ನಮ್ಮ ಸರ್ಕಾರದ ಅವಧಿಯಲ್ಲಿ ಬಡವರು ಹಾಗೂ ಸ್ಲಂ ನಿವಾಸಿಗಳಿಗೆ ವಿವಿಧ ಬಗೆಯ ಯೋಜನೆಗಳನ್ನು ನೀಡಿದ್ದೆವು. ಆ ಯೋಜನೆಗಳನ್ನು ರದ್ದು ಮಾಡಿದ್ದರಿಂದ ಬಡ ಜನರು ಜೀವನ ಸಾಗಿಸುವುದು ಕಷ್ಟವಾಗಿದೆ.

ಇಂತಹ ಸರ್ಕಾರದಿಂದ ಬಡಜನರ ಅಭಿವೃದ್ಧಿ ಎಂದಿಗೂ ಸಾಧ್ಯವಿಲ್ಲ ಎಂದರು. ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ, ಸಂಸದ ಪ್ರಹ್ಲಾದ ಜೋಶಿ, ಶಾಸಕ ಸಿ,ಟಿ. ರವಿ, ಮಾಜಿ ಶಾಸಕ ಶಂಕರ ಪಟೀಲ ಮುನೇನಕೊಪ್ಪ, ವೀರಯ್ಯನವರ,

-ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ, ಪಾಲಿಕೆ ಸದಸ್ಯರಾದ ಸಂಜಯ ಕಪಟಕರ, ವಿಜಯಾನಂದ ಶೆಟ್ಟಿ, ಶಿವು ಹಿರೇಮಠ, ಸ್ಥಳೀಯ ಮುಖಂಡರಾದ ಶಂಕ್ರಪ್ಪ ಬಿಜವಾಡ, ಮೋಹನ ರಾಮದುರ್ಗ, ಅಜ್ಜಪ್ಪ ಹೊರಕೇರಿ, ಮಹೇಶ ಟೆಂಗಿನಕಾಯಿ, ಜಯತೀರ್ಥ ಕಟ್ಟಿ ಇದ್ದರು.   

Advertisement

Udayavani is now on Telegram. Click here to join our channel and stay updated with the latest news.

Next