Advertisement

ಊಟ, ತಿಂಡಿ ದರ ಇಳಿಕೆ ಮಾಡಿ ಸ್ವಾಮಿ

04:10 AM Jul 12, 2017 | Team Udayavani |

ನವದೆಹಲಿ: ಜಿಎಸ್‌ಟಿ ಹೆಸರನ್ನು ಹೇಳಿ ಊಟ-ತಿಂಡಿ ದರ ಹೆಚ್ಚಳ ಮಾಡಿದ್ದ ಹೋಟೆಲ್‌, ರೆಸ್ಟೋರೆಂಟ್‌ ಮಾಲೀಕರಿಗೆ ಕೇಂದ್ರ ಕಂದಾಯ ಕಾರ್ಯದರ್ಶಿ ಹಸ್ಮುಖ್‌ ಅಧಿಯಾ ಬಿಸಿ ಮುಟ್ಟಿಸಿದ್ದಾರೆ. ಸರಕು ಮತ್ತು ಸೇವೆಗಳ ತೆರಿಗೆ ಜಾರಿಗೆ ಬಂದ ಮೇಲೆ ಹೋಟೆಲ್‌ಗ‌ಳಲ್ಲಿ ಬಳಕೆ ಮಾಡುವ ದಿನಸಿ ಸಾಮಗ್ರಿಗಳ ಬೆಲೆ ಇಳಿಕೆಯಾಗಿದೆ. ಹೀಗಾಗಿ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ದರ ಕಡಿಮೆಯಾಗಬೇಕೇ ವಿನಃ ಹೆಚ್ಚಾಗುವಂತಿಲ್ಲ ಎಂದು ಹೇಳಿದ್ದಾರೆ.

Advertisement

ದೆಹಲಿಯಲ್ಲಿ ಮಾತನಾಡಿದ ಅಧಿಯಾ, ಹೋಟೆಲ್‌ಗ‌ಳಲ್ಲಿ ಗಣನೀಯವಾಗಿ ದರ ಹೆಚ್ಚಾಗುತ್ತಿರುವ ಬಗ್ಗೆ ಸ್ಪಷ್ಟನೆ ನೀಡಿದರು. ಅಲ್ಲದೆ ಯಾವ ಯಾವ ಹಂತಕ್ಕೆ ಹೇಗೆ ತೆರಿಗೆ ನಿಗದಿ ಮಾಡಲಾಗುತ್ತದೆ ಎಂಬ ಮಾಹಿತಿ ನೀಡಿದರು. ಸರಕು ಮತ್ತು ಸೇವಾ ತೆರಿಗೆಗಳಲ್ಲಿ ಇನ್‌ ಪುಟ್‌ ಕ್ರೆಡಿಟ್‌ (ಒಳಪರಿಕರ) ಪ್ರಮಾಣ ತಗ್ಗಿಸಿರುವುದರಿಂದ ರೆಸ್ಟೋರೆಂಟ್‌, ಹೋಟೆಲ್‌ಗ‌ಳ ಮಾಲೀಕರು ದರ ಕಡಿಮೆ ಮಾಡಬಹುದು. ಒಂದು ವೇಳೆ ಊಟದ ಜತೆಗೆ ಮದ್ಯ ಸೇವನೆ ಮಾಡಿದಲ್ಲಿ ಅದಕ್ಕೆ ಪ್ರತ್ಯೇಕವಾಗಿ ಮೌಲ್ಯ ವರ್ಧಿತ ತೆರಿಗೆ (ವ್ಯಾಟ್‌) ಸೇರ್ಪಡೆಯಾಗುತ್ತದೆ. ಇಂಥವುಗಳಲ್ಲಿ ಬೆಲೆ ಹೆಚ್ಚಾಗುತ್ತದೆ ಎಂದು ಅಧಿಯಾ ಹೇಳಿದ್ದಾರೆ. ಜಿಎಸ್‌ಟಿ ವ್ಯವಸ್ಥೆಯಲ್ಲಿ ಹವಾನಿಯಂತ್ರಣ ವ್ಯವಸ್ಥೆ ಇಲ್ಲದ ರೆಸ್ಟೋರೆಂಟ್‌ಗಳಿಗೆ ಶೇ.12ರಷ್ಟು ತೆರಿಗೆ ವಿಧಿಸಲಾಗುತ್ತದೆ. ಹವಾನಿಯಂತ್ರಣ ವ್ಯವಸ್ಥೆ ಇರುವ ರೆಸ್ಟೋರೆಂಟ್‌ಗಳಿಗೆ ಶೇ.18ರಷ್ಟು ತೆರಿಗೆ ವಿಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next