Advertisement

ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯವಾಗಿರಿ

05:02 PM Mar 22, 2021 | Team Udayavani |

ಬ್ಯಾಡಗಿ: ಬದಲಾದ ಆಹಾರ ಪದ್ಧತಿಯಿಂದಾಗಿ ಮನುಷ್ಯನ ದೇಹ ರೋಗಗಳ ತವರೂರಾಗುತ್ತಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಖೇದ ವ್ಯಕ್ತಪಡಿಸಿದರು.

Advertisement

ಪಟ್ಟಣದ ತಾಪಂ ಸಭಾಂಗಣದಲ್ಲಿ ಹಾವೇರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಬ್ಯಾಡಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯದಸಂಯುಕ್ತಾಶ್ರಯದಲ್ಲಿ ಪೋಷಣ್‌ಅಭಿಯಾನ ಪ್ರಯುಕ್ತ ಆಯೋಜಿಸಲಾಗಿದ್ದ ಪೌಷ್ಟಿಕ ಆಹಾರ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬದಲಾದ ಜೀವನ ಶೈಲಿ, ಒತ್ತಡದಬದುಕು ಎಲ್ಲರನ್ನೂ ರೋಗದ ಬಾಗಿಲಿಗೆತಂದು ನಿಲ್ಲಿಸುತ್ತಿದೆ. ರಾಸಾಯನಿಕಗಳ ಅತಿಯಾದ ಬಳಕೆಯಿಂದ ಆಹಾರ ಆಹಾರವಾಗಿ ಉಳಿಯದೇ ವಿಷವಾಗುತ್ತ ಸಾಗಿದೆ. ಇದು ಮನುಷ್ಯನ ಆಯುಸ್ಸನ್ನು ತಗ್ಗಸುತ್ತಿದೆ. ಆದ್ದರಿಂದ, ಪೋಷಕಾಂಶಯುಕ್ತ ಆಹಾರ ಸೇವಿಸಿ ರೋಗಗಳಿಂದ ದೂರ ಉಳಿಯಬಹುದುದಾಗಿದೆ ಎಂದರು.

ತಾಪಂ ಅಧ್ಯಕ್ಷೆ ಸವಿತಾ ಸುತ್ತಕೋಟಿ ಮಾತನಾಡಿ, ಸರ್ಕಾರ ಮಕ್ಕಳಿಗೆ ಪೌಷ್ಟಿಕಆಹಾರ ನೀಡುವ ಉದ್ದೇಶದಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದುಅದಕ್ಕಾಗಿ ನೂರಾರು ಕೋಟಿ ರೂ.ವ್ಯಯಿಸುತ್ತವೆ. ಪ್ರತಿ ಅಂಗನವಾಡಿ ಕೇಂದ್ರಗಳಲ್ಲಿ ಮಾತೃಪೂರ್ಣಯೋಜನೆಯಡಿ ಧಾನ್ಯಗಳು, ಮೊಳಕೆಕಾಳುಗಳು, ಪೌಷ್ಟಿಕಾಂಶ ಭರಿತಊಟ, ಹಾಲು ನೀಡಲಾಗುತ್ತಿದೆ. ಈ ಬಗ್ಗೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಳ್ಳಿಯ ಜನರಲ್ಲಿ ಅರಿವು ಮೂಡಿಸಬೇಕಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೀರೇಂದ್ರ ಶೆಟ್ಟರ, ತಾಲೂಕು ಅಧ್ಯಕ್ಷ ಸುರೇಶ ಆಸಾದಿ, ಪ್ರಧಾನಕಾರ್ಯದರ್ಶಿ ಶಿವಯೋಗಿ ಶಿರೂರ, ಜಿತೇಂದ್ರ ಸುಣಗಾರ, ಮುಖಂಡರಾದ,ಶಂಕ್ರಣ್ಣ ಮಾತನವರ, ಸುರೇಶಣ್ಣ ಯತ್ನಳ್ಳಿ, ಮುರಿಗೆಪ್ಪ ಶೆಟ್ಟರ್‌, ಪುರಸಭೆ ಸದಸ್ಯೆ ಗಾಯತ್ರಿ ರಾಯ್ಕರ, ಸಿಡಿಪಿಒ ರಾಮಲಿಂಗಪ್ಪ ಅರಳಿಕೊಪ್ಪಿ, ಅಕ್ಷರ ದಾಸೋಹ ಅಧಿ ಕಾರಿ ಎನ್‌ ತಿಮ್ಮಾರೆಡ್ಡಿ ಇತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next