Advertisement
ದೇಹದ ತೂಕ ಇಳಿಕೆಗೆಹೀರೇಕಾಯಿಯಲ್ಲಿ ಅಧಿಕ ಐರನ್, ಮ್ಯಾಗ್ನಿ ಷಿಯಂ, ವಿಟಮಿನ್ ಸಿ ಅಂಶವು ಹೇರಳವಾಗಿದ್ದು ಹಲವು ರೋಗಗಳಿಗೆ ಇದು ಮನೆಮದ್ದಾಗಿದೆ. ಇದರ ನಿಯಮಿತ ಸೇವನೆಯೂ ದೇಹದ ಅನಗತ್ಯ ಕೊಬ್ಬಿನಾಂಶವನ್ನು ಹೊರಹಾಕಿ ನಮ್ಮ ಫಿಟ್‌ನೆಸ್ ಕಾಪಾಡುತ್ತದೆ. ದೇಹದ ತೂಕ ಇಳಿಕೆಗೆ ಇದರ ಸೇವನೆ ಮಾಡುವುದು ಉತ್ತಮವಾಗಿದೆ. ಇದನ್ನು ಉಪ್ಪಿನಲ್ಲಿ ಬೇಯಿಸಿ ಇಲ್ಲವೇ ಜ್ಯೂಸ್ ರೂಪದಲ್ಲೂ ಸೇವಿಸಬಹುದು. ಆದರೆ ಪಲ್ಯ ಇನ್ನಿತರ ಖಾದ್ಯ ಮಾಡುವಾಗ ಎಣ್ಣೆಯ ಅಂಶವನ್ನು ಕಡಿಮೆ ಬಳಸುವುದನ್ನು ರೂಢಿಸಿಕೊಳ್ಳಬೇಕು.
ದೇಹದಲ್ಲಿ ಕಡಿಮೆನೀರಿನಂಶಉರಿಮೂತ್ರ ಸಮಸ್ಯೆಗೆ ಕಾರಣವಾಗಿದ್ದು ಅಂತಹ ಸಂದರ್ಭದಲ್ಲಿ ಹೀರೇಕಾಯಿ ಸೇವನೆ ಒಳ್ಳೆಯದು. ಇದರಲ್ಲಿರುವ ವಿಟಮಿನ್, ನೀರಿನಂಶ ಉರಿಮೂತ್ರದ ನೋವಿನ ಬಾಧೆ ಕಡಿಮೆ ಮಾಡುತ್ತದೆ. ಇದನ್ನು ಜೀರಿಗೆ, ಕಲ್ಲು ಸಕ್ಕರೆ, ಗಸಗಸೆಯೊಂದಿಗೆ ಬೆರೆಸಿ ಅರೆದು ಸೇವಿಸುವುದರಿಂದ ಸಮಸ್ಯೆಯನ್ನು ನಿವಾರಿಸಲು ಸಾಧ್ಯವಾಗಿದೆ. ಮೂಲವ್ಯಾಧಿ ಸಮಸ್ಯೆ ನಿವಾರಣೆಗೆ
ಹೀರೇಕಾಯಿಯಲ್ಲಿ ಕೆರೋಟಿನ್ ಅಂಶವಿದ್ದು ಇದು ನಿಮ್ಮ ರಕ್ತ ಶುದ್ಧೀಕರಿಸಲು ನೆರವಾಗುತ್ತದೆ. ಮಾತ್ರವಲ್ಲದೆ ಇದರಲ್ಲಿರುವ ಅಧಿಕ ನೀರಿನಂಶ ವು ಮೂಲವ್ಯಾಧಿ ಸಮಸ್ಯೆಯನ್ನು ನಿವಾರಿಸುವ ಸಾಮರ್ಥ್ಯ ಹೊಂದಿದೆ. ಇದನ್ನು ವಾರಕ್ಕೆ 3ರಿಂದ ನಾಲ್ಕು ಬಾರಿ ಕಡಿಮೆ ಮಸಾಲ ಅಂಶವನ್ನು ಉಪಯೋಗಿಸಿ ಅಡುಗೆ ಮಾಡಿದರೆ ಸಮಸ್ಯೆಗೆ ಪರಿಹಾರ ಕಂಡುಕೊಂಡಂತಾಗುತ್ತದೆ.
Related Articles
ಸಿಬ್ಬಿನ ಸಮಸ್ಯೆಗೆ ಇದೊಂದು ಉತ್ತಮ ಮದ್ದಿನಂತೆ ಕಾರ್ಯ ನಿರ್ವಹಿಸುತ್ತದೆ. ಹೀರೇಕಾಯಿ ಸಿಪ್ಪೆ ಅಧಿಕ ಪೋಷಕಾಂಶವನ್ನು ಹೊಂದಿದ್ದು ಅದನ್ನು ಬೆಳ್ಳುಳ್ಳಿ ಮತ್ತು ಚಿಟಿಕೆ ಉಪ್ಪಿನೊಂದಿಗೆ ಪೇಸ್ಟ್ ಮಾಡಿ ವಾರಕ್ಕೆ ನಾಲ್ಕು ಬಾರಿ ಲೇಪಿಸುವುದರಿಂದ ಸಿಬ್ಬಿನ ಒಣಾಂಶವು ಕಡಿಮೆಯಾಗಿ ತ್ವಚೆಯ ಹೊಳಪು ಹೆಚ್ಚಲು ಸಹಕಾರಿಯಾಗಿದೆ.
Advertisement
- ರಾಧಿಕಾ, ಕುಂದಾಪುರ