Advertisement

ಆತಂಕವಿಲ್ಲದೆ ಕೋಳಿ ಮಾಂಸ ಸೇವಿಸಿ: ರವಿ

01:17 AM Apr 11, 2020 | Sriram |

ಚಿಕ್ಕಮಗಳೂರು: ಕೋವಿಡ್ 19ವೈರಸ್‌ಗೂ ಕೋಳಿಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ ಜನ ಯಾವುದೇ ಭಯವಿಲ್ಲದೇ ಕೋಳಿ ಮಾಂಸ ಸೇವನೆ ಮಾಡುವಂತೆ ಸಚಿವ ಸಿ.ಟಿ. ರವಿ ತಿಳಿಸಿದ್ದಾರೆ.

Advertisement

ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕೋಳಿ ಮಾಂಸ ಸೇವನೆಯಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮೀನು, ಮೊಟ್ಟೆ, ಮಾಂಸ ಸೇವಿಸಬಹುದು ಎಂದು ಆಹಾರ ತಜ್ಞರು ದೃಢಪಡಿಸಿದ್ದಾರೆ ಎಂದು ತಿಳಿಸಿದರು.

ಮಾಂಸ ಮಾರಾಟ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸ್ವತ್ಛತೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next