Advertisement
ಸ್ವಂತ ಮನೆ ಬೇಕು ಎಂಬುದು ಪ್ರತಿಯೊಬ್ಬರ ಮನದಾಸೆ. ಸಾಲ ಮಾಡಿಯಾದರೂ ಸ್ವಂತದೊಂದು ಸೂರು ನಿರ್ಮಾಕ್ಕೆ ಪಡಬಾರದ ಕಷ್ಟಗಳನ್ನು ಪಡುವವರೂ ಇದ್ದಾರೆ. ಅದರಲ್ಲೂ ತನ್ನ ಮನೆ ಎಲ್ಲರಿಗೂ ಮೆಚ್ಚುಗೆಯಾಗಬೇಕು. ಅದರ ಅಂದಚಂದವನ್ನು ಪ್ರತಿಯೊಬ್ಬರೂ ಹೊಗಳಬೇಕು ಎನ್ನುವುದು ಎಲ್ಲರ ಮನದ ಮಾತು. ಹಾಗಾಗಿ ತನ್ನ ಮನೆಯನ್ನು ಇತರರ ಮನೆಗಿಂತ ಭಿನ್ನವಾಗಿ ನಿರ್ಮಿಸಬೇಕೆಂದು ಎಲ್ಲರೂ ಬಯಸುತ್ತಾರೆ. ಇದ ರಲ್ಲಿ ಈಗ ಹಳೆ ಮಾದರಿಯ ಹೊಸ ಪ್ರಯೋಗ ಕುಸುರಿ ಕೆತ್ತನೆಗಳು.
Related Articles
ಬಗೆಬಗೆಯ ಚಿತ್ರಗಳನ್ನು ಕುಸುರಿ ಕೆತ್ತನೆಗಳ ಮೂಲಕ ಅಚ್ಚಾಗಿಸಬಹುದಾದರೂ ಎಲ್ಲ ಬಗೆಯ ಚಿತ್ರಗಳನ್ನು ಮನೆಯ ಗೋಡೆಗಳಲ್ಲಿ ಮೂಡುವಂತೆ ಮಾಡುವುದು ತರವಲ್ಲ. ನೋಡಿದಾಗ ಮನಸ್ಸಿಗೆ ಮುದವನ್ನುಂಟು ಮಾಡುವ ರಚನೆಗಳನ್ನಷ್ಟೇ ಆಯ್ದುಕೊಳ್ಳುವುದು ಅತ್ಯಗತ್ಯ. ಪ್ರಕೃತಿಯ ಸುಂದರ ದೃಶ್ಯಗಳು ಅದ ರಲ್ಲೂ ಹೆಚ್ಚಾಗಿ ತರುಲತೆಗಳನ್ನೇ ಕುಸುರಿ ಕೆತ್ತನೆಗಳಾಗಿ ಮಾಡುತ್ತಾರೆ. ಓಲಾಡುವ ಬಳ್ಳಿ, ಉದಯಿಸುವ ಸೂರ್ಯ, ಸರಸಸಲ್ಲಾಪವಾಡುವ ಸುಂದರ ಹಕ್ಕಿಗಳು.. ಮೊದ ಲಾದ ದೃಶ್ಯಗಳೇ ಮನೆಯ ಒಳಾಂಗಣ ಹಾಗೂ ಹೊರಾಂಗಣದ ಅಂದ ಹೆಚ್ಚಿಸುತ್ತವೆ.
Advertisement
ಮನೆಯ ಅಂದವನ್ನು ಹೆಚ್ಚಿಸುವುದೇ ಕುಸುರಿ ಕೆತ್ತನೆಗಳ ಜವಾಬ್ದಾರಿಯಾದುದರಿಂದ ಈ ಕೆತ್ತನೆಗಳನ್ನು ಆಯಕಟ್ಟಿನ ಜಾಗದಲ್ಲಿ ಅಳವಡಿಸುವುದೇ ನಿಜವಾದ ಜಾಣ್ಮೆ. ಮನೆಯ ಮುಂಭಾಗದ ಬಾಗಿಲು ಕುಸುರಿ ಕೆತ್ತನೆಗಳು ಇಲ್ಲದೇ ಖಾಲಿಯಾಗಿದ್ದರೆ ಮನೆ ಆಕರ್ಷಣೆಯನ್ನೇ ಕಳೆದುಕೊಳ್ಳುತ್ತದೆ ಎನ್ನುವವರಿದ್ದಾರೆ. ಹೀಗಾಗಿ ಹೆಚ್ಚಾಗಿ ಕುಸುರಿ ಕೆತ್ತನೆಗಳನ್ನು ಹೆಚ್ಚಾಗಿ ಕೇಂದ್ರೀಕರಿಸುವುದು ಈ ಬಾಗಿಲ ಮೇಲೆಯೇ. ಇನ್ನು ಮನೆಯ ಒಳಾಂಗಣದಲ್ಲೂ ಅಲಂಕಾರಕ್ಕಾಗಿ ಕುಸುರಿ ಕೆತ್ತನೆಗಳಿರುವ ಫರ್ನಿಚರ್, ಆಲಂಕಾ ರಿಕ ವಸ್ತುಗಳನ್ನು ಬಳಸುತ್ತಾರೆ. ಇದು ಅವರವರ ಅಭಿರುಚಿಯನ್ನು ಅವಲಂಭಿಸಿರುತ್ತದೆ.
ಎಲ್ಲಿ, ಹೇಗೆ?ಮನೆಯ ಎದುರಿನ ಬಾಗಿಲು, ದಾರಂದಗಳಲ್ಲಿ, ಹಾಲ್‌ನ ಶೋಕೇಸ್‌ನ ಬದಿಗಳಲ್ಲಿ, ಸಿಟೌಟ್‌ನ ಅಂಚಿನಲ್ಲಿ ಇರಿಸುವ ಪೀಠೊಪಕರಣಗಳಲ್ಲಿ ಕುಸುರಿ ಕೆತ್ತನೆಗಳಿರುವಂತೆ ನೋಡಿಕೊಳ್ಳಬೇಕಾಗುತ್ತದೆ. ಮನೆಯ ಎದುರು ಬದಿಯ ಬಾಗಿಲು, ಸಿಟೌಟ್, ಹಾಲ್ ಹಾಗೂ ದೇವರ ಕೋಣೆಯ ಮುಂಬಾಗಿಲಿನಲ್ಲಿರುವ ಕುಸುರಿ ಕೆತ್ತನೆಗಳಲ್ಲಿ ಸಾಂಪ್ರದಾಯಿಕ ಮಾದರಿ ಅಥವಾ ಅಧುನಿಕ ಮಾದರಿಯನ್ನು ಬಳಸಬಹುದು. ಸಾಂಪ್ರದಾಯಿಕ ಮಾದರಿಯಲ್ಲಿ ಮನೆಯ ಮುಂಭಾಗದಲ್ಲಿ ಆರತಿ ಹಿಡಿದು ಸ್ವಾಗತಿಸುವ ಮಹಿಳೆಯರ ಚಿತ್ರಣವನ್ನು ಮೂಡಿಸುಬಹುದು, ತಳಿರು ತೋರಣದ ಚಿತ್ರವನ್ನೂ ಕೆತ್ತಿಸಬಹುದು. ಆಧುನಿಕ ಮಾದರಿಯ ವಿನ್ಯಾಸ ಬೇಕಿದ್ದರೆ ಕಂಪ್ಯೂಟರಿನಲ್ಲಿರುವ ಡಿಸೈನ್‌ಗಳನ್ನು ನೋಡಬಹುದು. ದೇವರ ಕೋಣೆಯ ಬಾಗಿಲು ಹಾಗೂ ಅದರ ಬದಿಗಳಲ್ಲಿ ಶಂಖ, ಜಾಗಟೆಯನ್ನು ಕೆತ್ತುವುದು, ದೇವರ ಚಿತ್ರಗಳನ್ನು ಪಡಿಮೂಡಿಸುವುದು, ಹೂಮಾಲೆಗಳ ರಚನೆಯನ್ನು ದೇವರ ಚಿತ್ರಪಟವಿದ್ದ ಬಳಿ ಇರುವಂತೆ ನೋಡಿಕೊಳ್ಳಬಹುದು. ಗಣೇಶ್ ಮಾವಂಜಿ