Advertisement

ಉ.ಪ್ರ.ದಲ್ಲಿ ಟೊಮೆಟೋ ಕೊಳ್ಳಲು ಸಾಲ

08:30 AM Aug 04, 2017 | Karthik A |

ಲಕ್ನೋ: ಯೋಗಿ ಆದಿತ್ಯನಾಥ್‌ ಉತ್ತರಪ್ರದೇಶ ಮುಖ್ಯಮಂತ್ರಿಯಾದ ಅನಂತರ ಒಂದಿಲ್ಲೊಂದು ವಿಶೇಷಗಳಿಂದಾಗಿ ಗಮನಸೆಳೆಯುತ್ತಿದೆ. ಈ ಬಾರಿ ‘ಸ್ಟೇಟ್‌ ಬ್ಯಾಂಕ್‌ ಆಫ್ ಟೊಮೆಟೋ’ ಆರಂಭಿಸಿ, ಟೊಮೆಟೋ ಕೊಳ್ಳಲು ಸಾಲ ನೀಡುವ ಮೂಲಕ ದೇಶವೇ ತನ್ನತ್ತ  ಡುವಂತೆ ಮಾಡಿದೆ. ಆದರೆ ಈ ಬ್ಯಾಂಕ್‌ ಆರಂಭಿಸಿರುವುದು ಯೋಗಿ ಸರಕಾರವಲ್ಲ, ವಿಪಕ್ಷ ಕಾಂಗ್ರೆಸ್‌!

Advertisement

ದೇಶದೆಲ್ಲೆಡೆ ಟೊಮೆಟೋ ಬೆಲೆ ಕೈಗೆಟುಕದಷ್ಟು ದುಬಾರಿಯಾಗಿ, ಜನ ಪರದಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿದ ವಿಪಕ್ಷ ಕಾಂಗ್ರೆಸ್‌, ಇಂಥದೊಂದು ವಿನೂತನ ಮಾರ್ಗ ಕಂಡುಕೊಂಡಿದೆ. ಗ್ರಾಹಕರು ಕೊಳ್ಳಲು ಅನುಕೂಲವಾಗುವಂತೆ ಸುಲಭ ಸಾಲ ಸೌಲಭ್ಯ, ಟೊಮೆಟೋ ಠೇವಣಿ ಮೇಲೆ ಆಕರ್ಷಕ ಬಡ್ಡಿ ದರ ಮತ್ತು ಸುರಕ್ಷಿತ ಲಾಕರ್‌ ವ್ಯವಸ್ಥೆ ಸೇರಿದಂತೆ ಗ್ರಾಹಕರಿಗೆ ಹಲವು ವಿಭಿನ್ನ ಸೇವೆಗಳನ್ನು ಒದಗಿಸುವುದು ಟೊಮೆಟೋ ಬ್ಯಾಂಕ್‌ನ ವಿಶೇಷತೆ. ಉತ್ತರ ಪ್ರದೇಶದ ಯುವ ಕಾಂಗ್ರೆಸ್‌ ಸಮಿತಿ ಲಕ್ನೋ ಮಾಲ್‌ ಅವೆನ್ಯೂನಲ್ಲಿ ಗುರುವಾರ ಆರಂಭಿಸಿರುವ ಈ ಬ್ಯಾಂಕ್‌, ಸಾರ್ವಜನಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಟೊಮೆಟೋ ಡಬ್ಲಿಂಗ್‌ ಸ್ಕೀಂ ಹಲವಾರು ರೀತಿಯ ವಿಶೇಷ ರೀತಿಯ ಯೋಜನೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next