Advertisement

ಈಸ್ಟ್‌ಬೋರ್ನ್ ಟೆನಿಸ್‌ : ಪ್ಲಿಸ್ಕೋವಾ,ಫ್ರಿಟ್ಜ್ ಚಾಂಪಿಯನ್ಸ್‌

10:03 AM Jul 01, 2019 | keerthan |

ಲಂಡನ್‌: ವಿಂಬಲ್ಡನ್‌ ಚಾಂಪಿಯನ್‌ ಆ್ಯಂಜೆಲಿಕ್‌ ಕೆರ್ಬರ್‌ ಅವರನ್ನು 6 1, 6 4 ನೇರ ಸೆಟ್‌ಗಳಿಂದ ಮಣಿಸಿದ ವಿಶ್ವದ ನಂಬರ್‌ 3 ಆಟಗಾರ್ತಿ ಕ್ಯಾರೋಲಿನಾ ಪ್ಲಿಸ್ಕೋವಾ 2ನೇ ಸಲ “ಈಸ್ಟ್‌ಬೋರ್ನ್ ಡಬ್ಲ್ಯುಟಿಎ’ ಟೆನಿಸ್‌ ಕೂಟದ ಚಾಂಪಿಯನ್‌ ಆಗಿ ಮೂಡಿಬಂದಿದ್ದಾರೆ.

Advertisement

ಪ್ರಚಂಡ ಫಾರ್ಮ್ ಪ್ರದರ್ಶಿಸಿದ ಜೆೆಕ್‌ ಗಣರಾಜ್ಯದ ಪ್ಲಿಸ್ಕೋವಾ ಈ ಕೂಟದಲ್ಲಿ ಒಂದೇ ಒಂದು ಸೆಟ್‌ ಕಳೆದುಕೊಳ್ಳದೆ ಪ್ರಶಸ್ತಿಯನ್ನೆತ್ತಿದರು.

ಪುರುಷರ ಫೈನಲ್‌
ಪುರುಷರ ಆಲ್‌ ಅಮೆರಿಕನ್‌ ಫೈನಲ್‌ ಹೋರಾಟದಲ್ಲಿ ಟಯ್ಲರ್‌ ಫ್ರಿಟ್ಜ್ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಅವರು ಸ್ಯಾಮ್‌ ಕ್ವೆರ್ರಿ ವಿರುದ್ಧ 6 3, 6 3 ನೇರ ಸೆಟ್‌ಗಳಿಂದ ಗೆದ್ದು ಬಂದರು.

Advertisement

Udayavani is now on Telegram. Click here to join our channel and stay updated with the latest news.

Next